ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕುಟುಂಬದಲ್ಲಿ ವಿವಾದ ಪರಿಹಾರ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಹೊಸ ಅವಕಾಶಗಳು ಎದುರಾಗಬಹುದು. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 8

ವೃಷಭ: ಸಾಲ ತೀರಿಸಲು ಮನೆಯವರಿಂದ ಸಹಕಾರ ಸಿಗುತ್ತದೆ. ಹೊಸ ಹೂಡಿಕೆ ಲಾಭ ತರಲಿದೆ. ಆರೋಗ್ಯದ ಕಡೆ ಗಮನ ಕೊಡಿ. ಶುಭಸಂಖ್ಯೆ:9

ಮಿಥುನ: ಪದವಿ ಪ್ರಾಪ್ತಿಗೆ ಸ್ನೇಹಿತರಿಂದ ಸಹಾಯ ದೊರೆಯಲಿದೆ. ಹೊಸ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ಶುಭಸಂಖ್ಯೆ:2

ಕಟಕ: ಕುಟುಂಬದಲ್ಲಿ ವಿವಾದ ಪರಿಹಾರವಾಗಲಿದೆ. ಸಾರಿಗೆ ಅಧಿಕಾರಿ ವರ್ಗದವರಿಗೆ ಸಹನೆ ಇರಲಿ. ಆರೋಗ್ಯ ಉತ್ತಮವಾಗಿರುತ್ತದೆ. ಶುಭಸಂಖ್ಯೆ:4

ಸಿಂಹ: ಕಲಾವಿದರಿಗೆ ಗೌರವ ಹೆಚ್ಚಾಗುವ ದಿನ. ನಿಮ್ಮ ಪ್ರತಿಭೆಗೆ ಕುಟುಂಬದವರು ಸಂತೋಷಪಡುತ್ತಾರೆ. ಹಣದ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ:7

ಕನ್ಯಾ: ಹೊಸ ಕೆಲಸದಲ್ಲಿ ಅಲ್ಪ ಅಡಚಣೆ. ಹಣ್ಣು, ತರಕಾರಿ ವ್ಯಾಪಾರದಲ್ಲಿ ಶ್ರಮಪಟ್ಟರೆ ಫಲವಿದೆ. ನಿಮಗೆ ಬಂಧುಗಳಿಂದ ಬೆಂಬಲ. ಶುಭಸಂಖ್ಯೆ:1

ತುಲಾ: ದೈಹಿಕ ಶ್ರಮ ಹೆಚ್ಚಾಗಬಹುದು. ಹಣದ ವಿಚಾರದಲ್ಲಿ ಎಚ್ಚರ. ವಾದಕರು, ಗಾಯಕರಿಗೆ ಯಶಸ್ಸು. ಪತ್ರಕರ್ತರಿಗೆ ಪುರಸ್ಕಾರ. ಶುಭಸಂಖ್ಯೆ:6

ವೃಶ್ಚಿಕ: ಜೀವನದಲ್ಲಿ ಅನಿರೀಕ್ಷಿತ ತಿರುವು. ಪ್ರೀತಿಯ ವಿಷಯದಲ್ಲಿ ಯಶಸ್ಸು ಸಿಗಲಿದೆ. ಹೊಸ ಯೋಜನೆ ಆರಂಭಿಸಲು ಉತ್ತಮ ಕಾಲ. ಶುಭಸಂಖ್ಯೆ:4

ಧನಸ್ಸು: ಹೊಸ ಸಂಪರ್ಕಗಳು ಲಾಭಕಾರಿಯಾಗಲಿವೆ. ಸಗಟು ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ. ಆರೋಗ್ಯದ ಕಡೆ ಕಾಳಜಿ ತೀರ ಅಗತ್ಯ. ಶುಭಸಂಖ್ಯೆ: 5

ಮಕರ: ಕುಟುಂಬದಿಂದ ಪೋ›ತ್ಸಾಹ. ಆದಾಯ ತೆರಿಗೆ ಉದ್ಯೋಗಿಗಳಿಗೆ ಒತ್ತಡ. ಮಹಿಳೆಯರು ಶಾಂತವಾಗಿ ಮನೆಯನ್ನು ನಿರ್ವಹಿಸಿ. ಶುಭಸಂಖ್ಯೆ:7

ಕುಂಭ: ನಿಮ್ಮ ನಿರ್ಧಾರಗಳು ಯಶಸ್ವಿಯಾಗುವವು. ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದೆ. ಸ್ನೇಹಿತರಿಂದ ನಿಮ್ಮ ನಿರ್ಧಾರಕ್ಕೆ ಬೆಂಬಲ. ಶುಭಸಂಖ್ಯೆ:1

ಮೀನ: ಪ್ರಯತ್ನ ಫಲ ನೀಡುತ್ತದೆ. ಧಾರ್ವಿುಕ ಚಟುವಟಿಕೆಯಲ್ಲಿ ಆಸಕ್ತಿ. ಮನಸ್ಸು ಧಾರ್ವಿುಕ ಚಿಂತನೆಯತ್ತ ಹೊರಳಿ ಶಾಂತವಾಗಿರುತ್ತದೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net