ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನೂತನ ಗೃಹಾರಂಭಕ್ಕೆ ಚಾಲನೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಧಾರ್ವಿುಕ ಗುರುಗಳ ಭೇಟಿ. ನಿಮ್ಮ ವಿರುದ್ಧದ ಷಡ್ಯಂತ್ರ ಬಯಲು ಮಾಡುವಿರಿ. ಕಾನೂನು ಹೋರಾಟದಲ್ಲಿ ಜಯ ಸಿಗುವುದು. ಶುಭಸಂಖ್ಯೆ:9

ವೃಷಭ: ಉದ್ಯೋಗಸ್ಥ ಮಹಿಳೆಯರಿಗೆ ಧನ ಲಾಭ. ಸಿದ್ಧ ಉಡುಪುಗಳ ಮಾರಾಟದಲ್ಲಿ ಬದಲಾವಣೆ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಶುಭಸಂಖ್ಯೆ:4

ಮಿಥುನ: ಭೂ ಸಂಬಂಧಿ ವ್ಯವಹಾರದಲ್ಲಿ ಎಚ್ಚರ. ವೈದ್ಯಕೀಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಕುಟುಂಬದಲ್ಲಿ ಸಂಭ್ರಮ. ಶುಭಸಂಖ್ಯೆ:1

ಕಟಕ: ನೂತನ ಗೃಹಾರಂಭಕ್ಕೆ ಚಾಲನೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಬದಲಾವಣೆಗೆ ಅವಕಾಶ. ಲೆಕ್ಕಪರಿ ಶೋಧಕರ ವೃತ್ತಿಯಲ್ಲಿ ಪ್ರಗತಿ. ಶುಭಸಂಖ್ಯೆ:7

ಸಿಂಹ: ವಿಚ್ಛೇದಿತರಿಗೆ ವಿವಾಹ ಯೋಗ. ಹಳೆ ಸ್ನೇಹಿತ ರೊಂದಿಗೆ ಔತಣಕೂಟ. ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ.ಶುಭಸಂಖ್ಯೆ:3

ಕನ್ಯಾ: ಆಸ್ತಿ ಕ್ರಯ ವಿಕ್ರಯದಿಂದ ಲಾಭಗಳಿಸುವಿರಿ. ಜೇನು ಕೃಷಿಯಲ್ಲಿ ಅಭಿವೃದ್ಧಿ. ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಲಿದೆ. ಶುಭಸಂಖ್ಯೆ:6

ತುಲಾ: ರಾಯಭಾರಿ ಕಚೇರಿಯಲ್ಲಿ ಉದ್ಯೋಗ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ ನಿಗದಿ. ಸಾರಿಗೆ ನೌಕರರ ವರ್ಗಾವಣೆ. ಶುಭಸಂಖ್ಯೆ:9

ವೃಶ್ಚಿಕ: ದುಂದು ವೆಚ್ಚ ಮಾಡಬೇಡಿ. ಇವೆಂಟ್ ಮ್ಯಾನೇಜ್ಮೆಂಟ್ ನಿರ್ವಾಹಕರಿಗೆ ದ್ವಿಗುಣ ಲಾಭ. ರಾಜಕೀಯದವರಿಗೆ ಪದವಿ ಪ್ರಾಪ್ತಿ. ಶುಭಸಂಖ್ಯೆ:3

ಧನಸ್ಸು: ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಸಗಟು ವ್ಯಾಪಾರದಲ್ಲಿ ಲಾಭವಿದೆ. ರೇಷ್ಮೆ ವಸ್ತ್ರಗಳ ಮಾರಾಟದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 6

ಮಕರ: ಕಂಪನಿ ಬದಲಾಯಿಸಲು ನಿರ್ಧಾರ. ಮಗಳ ವಿವಾಹ ಯತ್ನ ಕೈಗೂಡಲಿದೆ. ಆಸ್ತಿ ತಕರಾರು ನಿವಾರಣೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:5

ಕುಂಭ: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಸಾಧ್ಯತೆ. ಆರಕ್ಷಕ ವೃತ್ತಿಗೆ ಆಯ್ಕೆ. ಪದವಿ ಪ್ರಾಪ್ತಿಯಲ್ಲಿ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ:8

ಮೀನ: ಕುಟುಂಬದ ಹಿರಿಯರ ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ. ಕನಸಿನ ನಿವೇಶನ ಸಿಗಲಿದೆ. ಕೊಟ್ಟ ಹಣ ತಿರುಗಿ ಬರಲಿದೆ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net