ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಸ್ಥಿತಿ ಉತ್ತಮ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಹೊಸ ಅವಕಾಶ ಸಿಗುವ ಸಾಧ್ಯತೆ. ಸಾಹಿತ್ಯದಲ್ಲಿ ಪ್ರಗತಿ. ಸ್ನೇಹಿತರಿಂದ ಹಣದ ಸಹಕಾರ. ಸಂಗಾತಿಯ ಆರೋಗ್ಯ ಸುಧಾರಣೆ. ಶುಭಸಂಖ್ಯೆ: 5

ವೃಷಭ: ಆರ್ಥಿಕ ಸ್ಥಿತಿ ಉತ್ತಮ. ಕುಟುಂಬದಲ್ಲಿ ಸಂತೋಷದ ವಾತಾವರಣ. ದೀರ್ಘಕಾಲದ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆ. ಶುಭಸಂಖ್ಯೆ:9

ಮಿಥುನ: ಅಲ್ಪ ಅಡೆತಡೆ ಇದ್ದರೂ ಸರ್ಕಾರಿ ಕೆಲಸಗಳಲ್ಲಿ ಯಶ. ಹೊಸ ಪರಿಚಯ ಸಹಕಾರಿಯಾಗಲಿದೆ. ಪ್ರಯಾಣದ ಅವಕಾಶ ಸಿಗುತ್ತದೆ. ಶುಭಸಂಖ್ಯೆ:8

ಕಟಕ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಐಟಿ ಉದ್ಯಮದಲ್ಲಿ ಬಡ್ತಿ ಸಿಗಲಿದೆ. ಶುಭಸಂಖ್ಯೆ:8

ಸಿಂಹ: ಆಸ್ತಿ ನೋಂದಣಿ ಕಾರ್ಯದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ರಾಜಕೀಯ ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ. ಸ್ನೇಹಿತರಿಂದ ಸಹಾಯ.ಶುಭಸಂಖ್ಯೆ:1

ಕನ್ಯಾ: ಹೊಸ ಆಲೋಚನೆ ಯಶಸ್ವಿಯಾಗಲಿದೆೆ. ಕುಟುಂಬದಲ್ಲಿ ಆಸ್ತಿ ವಿವಾದ ಬಗೆಹರಿಯಲಿದೆ. ಹಳೇ ಕೆಲಸಗಳಿಗೆ ಚಾಲನೆ ಸಿಗಲಿದೆ. ಶುಭಸಂಖ್ಯೆ:4

ತುಲಾ: ಪಾಲುದಾರಿಕೆಯ ಹೊಸ ಒಪ್ಪಂದ ಲಾಭಕರ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಆಟೋ ಮೊಬೈಲ್ಸ್ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7

ವೃಶ್ಚಿಕ: ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ತಂದೆಯ ಆರೋಗ್ಯದತ್ತ ಗಮನ ಕೊಡಿ. ಸ್ನೇಹಿತರಿಂದ ಸಂತೋಷದ ಸುದ್ದಿ. ಶುಭಸಂಖ್ಯೆ:3

ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸದವಕಾಶ. ವಿವಾಹದ ವಿಷಯದಲ್ಲಿ ಹಿರಿಯರ ಮಾರ್ಗದರ್ಶನ ದೊರೆಯುತ್ತದೆ. ಶುಭಸಂಖ್ಯೆ: 4

ಮಕರ: ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ಹಣಕಾಸಿನಲ್ಲಿ ಅಭಿವೃದ್ಧಿಯಾಗಲಿದೆ. ಆತ್ಮೀಯರೊಂದಿಗೆ ಸಂತೋಷದ ಸಮಯ. ಶುಭಸಂಖ್ಯೆ:3

ಕುಂಭ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗುತ್ತದೆ. ಪ್ರಯಾಣದ ಯೋಜನೆ ಯಶಸ್ವಿ. ಹೊಸ ಸಂಪರ್ಕಗಳಿಂದ ಲಾಭ. ಶುಭಸಂಖ್ಯೆ:9

ಮೀನ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುವಂಥ ಘಟನೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ವಿದೇಶದಲ್ಲಿ ಉದ್ಯೋಗ.ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net