_1767980579687.webp?w=480&auto=format%2Ccompress&fit=max)
_1767980579687.webp?w=480&auto=format%2Ccompress&fit=max)
ಮೇಷ: ಸಣ್ಣ ಪ್ರಮಾಣದ ಐಟಿ ಉದ್ಯಮ ಪ್ರಾರಂಭಕ್ಕೆ ನಿರ್ಧಾರ. ಮಾಧ್ಯಮ ಕ್ಷೇತ್ರದ ಕೆಲಸಗಾರರಿಗೆ ಬದಲಾವಣೆಯ ಯೋಗ. ಶುಭಸಂಖ್ಯೆ: 8
ವೃಷಭ: ಹಣದ ವ್ಯವಹಾರ ಮಾಡುವಾಗ ಎಚ್ಚರ. ವಿಚ್ಛೇದಿತರಿಗೆ ದ್ವಿತೀಯ ವಿವಾಹ ಸಿದ್ದಿ. ಕರುಳು ಸಂಬಂಧಿ ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ:5
ಮಿಥುನ: ವೃತ್ತಿಯಲ್ಲಿ ಹೊಸ ಆರಂಭ ಕಾಣಲಿದೆ. ಸೇವಾ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ. ಆರ್ಥಿಕ ತಜ್ಞರಿಗೆ ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ: 3
ಕಟಕ: ಹೊಸ ಹೂಡಿಕೆಗೆ ಶುಭಸಮಯ. ಧಾರ್ವಿುಕ ಮುಖಂಡರೊಂದಿಗೆ ಆಧ್ಯಾತ್ಮಿಕ ಪ್ರಯಾಣ. ಅವಿವಾಹಿತರಿಗೆ ವಿದೇಶಿ ಸಂಬಂಧ. ಶುಭಸಂಖ್ಯೆ: 8
ಸಿಂಹ: ರಾಜಕೀಯ ರಂಗದವರಿಗೆ ಅನಿರೀಕ್ಷಿತ ಪದವಿ ಲಭ್ಯ. ನಿದ್ರೆ ಕೊರತೆಯಿಂದ ಅನಾರೋಗ್ಯ ಸಂಭವ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ:1
ಕನ್ಯಾ: ರೇಷ್ಮೆ ವ್ಯಾಪಾರದಲ್ಲಿ ಲಾಭಗಳಿಸುವಿರಿ. ಭತ್ತದ ಗಿರಣಿ ಮಾಲೀಕರಿಗೆ ಧನಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಗೊಂದಲ. ಶುಭಸಂಖ್ಯೆ:9
ತುಲಾ: ಹಳೆಯ ಸಂಬಂಧಗಳಿಂದ ಕೌಟುಂಬಿಕ ಗೊಂದಲ ಬಗೆಹರಿಯಲಿದೆ. ನೆರೆಯವರಿಂದ ಆರ್ಥಿಕ ಸಹಾಯ ದೊರೆಯುವುದು.ಶುಭಸಂಖ್ಯೆ:6
ವೃಶ್ಚಿಕ: ಧಾರ್ವಿುಕ ಕ್ಷೇತ್ರದಲ್ಲಿ ಪ್ರಗತಿ. ರಾಜ್ಯ ಸರ್ಕಾರಿ ಕೆಲಸಗಾರರಿಗೆ ಪ್ರಮುಖವಾದ ಅಧಿಕಾರ ಪ್ರಾಪ್ತಿ. ಪುಸ್ತಕ ಪ್ರಕಾಶಕರಿಗೆ ಹಣ ಲಾಭ. ಶುಭಸಂಖ್ಯೆ:5
ಧನಸ್ಸು: ಸಾರ್ವಜನಿಕವಾಗಿ ಮುಂದೆ ಇರುವಿರಿ. ಹತ್ತಿರದ ಸಂಬಂಧಿಗಳ ಜತೆ ಮನಸ್ತಾಪ ಸಾಧ್ಯತೆ. ಭೋಗವಸ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:4
ಮಕರ: ಸ್ವಂತ ಉದ್ಯಮಿ ಮಹಿಳೆಯರಿಗೆ ದೂರ ಪ್ರಯಾಣ. ಮಕ್ಕಳ ಪ್ರಗತಿಯಿಂದ ಪೋಷಕರಿಗೆ ಹೆಮ್ಮೆ. ಕಾನೂನು ವಿವಾದದಲ್ಲಿ ಜಯ. ಶುಭಸಂಖ್ಯೆ:2
ಕುಂಭ: ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿ ಪ್ರಶಂಸೆಗೆ ಪಡೆಯುವಿರಿ. ಜಾಣ್ಮೆಯಿಂದ ಹಣ ಗಳಿಸುವಿರಿ. ರಕ್ತದೊತ್ತಡಕ್ಕೆ ಚಿಕಿತ್ಸೆ. ಶುಭಸಂಖ್ಯೆ:9
ಮೀನ: ಕುಟುಂಬದೊಂದಿಗೆ ಔತಣ ಕೂಟ. ಸಹೋದರರೊಂದಿಗಿದ್ದ ವೈಮನಸ್ಯ ಬಗೆಹರಿಯಲಿದೆ. ನಿಮ್ಮ ಕನಸಿನ ನಿವೇಶನ ಸಿಗಲಿದೆ. ಶುಭಸಂಖ್ಯೆ:4