ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹೊಸ ವಾಹನ ಖರೀದಿ ಯೋಗ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹೊಸ ವಾಹನ ಖರೀದಿ ಯೋಗ
Published on: 

ಮೇಷ: ವೃತ್ತಿಯಲ್ಲಿ ಯಶ ಸಾಧಿಸಲಿದ್ದೀರಿ. ಕಾನೂನು ಹೋರಾಟ ಮಾಡುವ ಪರಿಸ್ಥಿತಿ. ವಿದ್ಯುತ್ ಇಲಾಖೆಯವರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 7

ವೃಷಭ: ತೆಂಗಿನಕಾಯಿ ಮಾರಾಟದಲ್ಲಿ ಲಾಭ. ಆಸ್ತಿಪ್ರಾಪ್ತಿಯಲ್ಲಿದ್ದ ನಿರ್ಬಂಧ ತೆರವು. ನಗರದ ಉದ್ಯೋಗದಿಂದ ಕೃಷಿಯತ್ತ ಮನಸ್ಸು. ಶುಭಸಂಖ್ಯೆ:4

ಮಿಥುನ: ರಾಜ್ಯ ಸರ್ಕಾರಿ ನೌಕರಿ ಸಿಗಲಿದೆ. ಅನವಶ್ಯಕ ವಸ್ತುಗಳ ಖರೀದಿಗೆ ನಿಯಂತ್ರಣ ಹಾಕಿ. ಹೊಸ ವಾಹನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 1

ಕಟಕ: ವಿಜ್ಞಾನ ಕ್ಷೇತ್ರದ ನೌಕರರಿಗೆ ಬಡ್ತಿ. ಹೃದಯತಜ್ಞರಿಗೆ ವಿದೇಶದಿಂದ ಬೇಡಿಕೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಗಳಿಸುವಿರಿ.ಶುಭಸಂಖ್ಯೆ: 9

ಸಿಂಹ: ಉದ್ಯೋಗಸ್ಥ ಸ್ತ್ರೀಯರಿಗೆ ವೇತನ ಹೆಚ್ಚಾಗಲಿದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಲಭ್ಯ. ಶುಭಸಂಖ್ಯೆ:7

ಕನ್ಯಾ: ನಟನಾ ಕ್ಷೇತ್ರದಲ್ಲಿ ಕೀರ್ತಿ ಗಳಿಸುವಿರಿ. ಸಾಲ ತೀರಿಸಲು ಮಾರ್ಗ ಗೋಚರಿಸಲಿದೆ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ ನಡೆದೀತು. ಶುಭಸಂಖ್ಯೆ:4

ತುಲಾ: ಪೆಟ್ರೋಲ್ ಬಂಕ್ ಸ್ಥಾಪನೆಗೆ ಇದ್ದ ಅಡ್ಡಿ ನಿವಾರಣೆ. ರಿಯಲ್ ಎಸ್ಟೇಟ್ನಲ್ಲಿ ಲಾಭ. ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ನಿರ್ಧಾರ. ಶುಭಸಂಖ್ಯೆ:7

ವೃಶ್ಚಿಕ: ಬರಹಗಾರರಿಗೆ ಮತ್ತು ಲೇಖಕರಿಗೆ ಗೌರವ ಸನ್ಮಾನ. ಅನಿರೀಕ್ಷಿತ ಅಧಿಕಾರ ಪ್ರಾಪ್ತಿಯಾಗಲಿದೆ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ:2

ಧನಸ್ಸು: ಸೈನಿಕ ವೃತ್ತಿಗೆ ಆಯ್ಕೆಯಾಗುವ ಅವಕಾಶ ಬರಲಿದೆ. ಪ್ರೀತಿಸಿದವರೊಂದಿಗೆ ಹಿರಿಯರ ಸಮ್ಮತಿ ಮೇರೆಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 9

ಮಕರ: ನೂತನ ಗೃಹ ನಿರ್ವಣಕ್ಕೆ ಸುಸಮಯ. ನ್ಯಾಯಾಲಯದ ಕೆಲಸಗಳಲ್ಲಿ ಜಯ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯಲಿದೆ. ಶುಭಸಂಖ್ಯೆ: 6

ಕುಂಭ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಮಾಡದ ತಪ್ಪಿಗೆ ಅಪವಾದ ಸಾಧ್ಯತೆ. ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸುವಿರಿ. ಶುಭಸಂಖ್ಯೆ:5

ಮೀನ: ರೇಷ್ಮೆ ವಸ್ತ್ರಗಳ ಮಾರಾಟದಲ್ಲಿ ಲಾಭ. ಧಾರ್ವಿುಕ ವೃತ್ತಿಪರರಿಗೆ ಗಳಿಕೆ ಹೆಚ್ಚಲಿದೆ. ಗೃಹ ನಿರ್ಮಾಣ ಕಾರ್ಯ ಸ್ವಲ್ಪ ನಿಧಾನವಾದೀತು. ಶುಭಸಂಖ್ಯೆ: 7