ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನ್ಯಾಯಾಲಯದಲ್ಲಿದ್ದ ವ್ಯಾಜ್ಯ ಬಗೆಹರಿಯಲಿದೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಆನ್ ಲೈನ್ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಪುಸ್ತಕ ವ್ಯಾಪಾರಿಗಳಿಗೆ ಶುಭದಿನ. ಶಿಕ್ಷಣ ಕ್ಷೇತ್ರದ ಅಧಿಕಾರಿಗಳಿಗೆ ವರ್ಗಾವಣೆ. ಶುಭಸಂಖ್ಯೆ:1

ವೃಷಭ: ಮಕ್ಕಳ ವಿದ್ಯಾಭ್ಯಾಸ ಸಂಬಂಧಿತ ಆಸೆ ಈಡೇರಲಿದೆ. ಹೊಸ ಪಾಲುದಾರರ ಕಾರಣದಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ. ಶುಭಸಂಖ್ಯೆ:6

ಮಿಥುನ: ನ್ಯಾಯಾಲಯದಲ್ಲಿದ್ದ ವ್ಯಾಜ್ಯ ಬಗೆಹರಿಯಲಿದೆ. ಸಂಗಾತಿಯೊಂದಿಗೆ ವಿದೇಶ ಪ್ರಯಾಣ. ಅಪರಿಚಿತರರಿಂದ ಸಹಾಯ. ಶುಭಸಂಖ್ಯೆ:7

ಕಟಕ: ಖಾದಿ - ಗ್ರಾಮೋದ್ಯೋಗ ಮಂಡಳಿಯಲ್ಲಿ ಅಧಿಕಾರ ಪ್ರಾಪ್ತಿ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಕಲಾವಿದರಿಗೆ ಪುರಸ್ಕಾರ. ಶುಭಸಂಖ್ಯೆ:4

ಸಿಂಹ: ವಿಚ್ಛೇದಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ನಿವೇಶನ ಖರೀದಿಯಲ್ಲಿ ಗೊಂದಲ. ವಾಹನ ಕ್ರಯದಲ್ಲಿ ಲಾಭಗಳಿಸುವಿರಿ. ಶುಭಸಂಖ್ಯೆ: 3

ಕನ್ಯಾ: ಕಾನೂನು ಅಭ್ಯಾಸಕ್ಕೆ ಹಿರಿಯರ ಮಾರ್ಗದರ್ಶನ. ಪ್ರತಿಭಾನ್ವಿತ ಯುವಕ ಯುವತಿಯರಿಗೆ ಸರ್ಕಾರದಿಂದ ವಿದೇಶ ಪ್ರವಾಸ. ಶುಭಸಂಖ್ಯೆ: 6

ತುಲಾ: ಪದವೀಧರ ಉದ್ಯೋಗ ಆಕಾಂಕ್ಷಿಗಳಿಗೆ ಶುಭದಿನ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಂಗಾತಿಯ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ:2

ವೃಶ್ಚಿಕ: ಬೇಕರಿ ಉತ್ಪನ್ನ ಮಾರಾಟದಲ್ಲಿ ಲಾಭ. ಹೊಸ ಕಟ್ಟಡ ನಿರ್ವಣಕ್ಕೆ ಚಾಲನೆ. ಕೃಷಿ ಉಪಕರಣಗಳ ಖರೀದಿಯಲ್ಲಿ ಧನಸಹಾಯ. ಶುಭಸಂಖ್ಯೆ:3

ಧನಸ್ಸು: ಧಾರ್ವಿುಕ ಮುಖಂಡರ ಭೇಟಿ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಹೆಸರು ಗಳಿಸುವಿರಿ. ಶುಭಸಂಖ್ಯೆ: 8

ಮಕರ: ಸರ್ಕಾರಿ ಸೇವಾ ಕ್ಷೇತ್ರಗಳಲ್ಲಿ ಅಧಿಕಾರ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ವಿವಾದ ಮಾತು ಕಥೆಯ ಮುಖಾಂತರ ಬಗೆಹರಿಯಲಿದೆ. ಶುಭಸಂಖ್ಯೆ: 4

ಕುಂಭ: ಲೇವಾದೇವಿ ವ್ಯವಹಾರದಲ್ಲಿ ಧನಸಂಪಾದನೆ. ಮನರಂಜನೆ ಆಯೋಜಕರಿಗೆ ಲಾಭ. ಕೃಷಿ ಉತ್ಪನ್ನ ಮಾರಾಟದಲ್ಲಿ ಆದಾಯ. ಶುಭಸಂಖ್ಯೆ: 4

ಮೀನ: ಕೃಷಿ ಸಂಶೋಧನಾ ಕ್ಷೇತ್ರದ ನೌಕರರಿಗೆ ಬಡ್ತಿ ಸಿಗಲಿದೆ. ಅವಿವಾಹಿತರಿಗೆ ಮಾಂಗಲ್ಯ ಯೋಗ. ವೀಸಾ ಸಮಸ್ಯೆ ಬಗೆಹರಿಯಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net