

ಮೇಷ: ಅಲಂಕಾರಿಕ ವಸ್ತುಗಳ ಪ್ರದರ್ಶನದಲ್ಲಿ ಲಾಭ. ಸಂಗಾತಿಯ ಕಡೆಯ ಆಸ್ತಿ ಬರಲಿದೆ. ರಫ್ತು ವ್ಯಾಪಾರಕ್ಕೆ ಒಪ್ಪಂದ ಮಾಡಿಕೊಳ್ಳುವಿರಿ. ಶುಭಸಂಖ್ಯೆ: 9
ವೃಷಭ: ಯೋಗ ಶಿಕ್ಷಕರಿಗೆ ವಿದೇಶ ಪ್ರಯಾಣ. ಮನೆ ನವೀಕರಣಕ್ಕೆ ಸಿದ್ಧತೆ. ರಾಜಕೀಯ ರಂಗದಲ್ಲಿರು ವವರಿಗೆ ಪದವಿ ಕೈ ತಪ್ಪಲಿದೆ. ಶುಭಸಂಖ್ಯೆ:1
ಮಿಥುನ: ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ಬದಲಾದ ಕೃಷಿಯಿಂದ ಲಾಭಗಳಿಸುವಿರಿ. ಬಟ್ಟೆ ವ್ಯಾಪಾರದಲ್ಲಿ ನಿರೀಕ್ಷಿತ ಅಭಿವೃದ್ಧಿ. ಶುಭಸಂಖ್ಯೆ:7
ಕಟಕ: ಕಚೇರಿಯಲ್ಲಿ ಕೆಲಸದ ಒತ್ತಡ. ಹೊಸವಾಹನ ಖರೀದಿಗೆ ಸುಸಮಯ. ಸಂಸ್ಕರಿತ ಆಹಾರಪದಾರ್ಥ ಮಳಿಗೆ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ:4
ಸಿಂಹ: ಮುಖ್ಯವ್ಯಕ್ತಿಗಳ ಭೇಟಿಗೆ ದೂರ ಪ್ರಯಾಣ. ವ್ಯಾಪಾರದ ಒಪ್ಪಂದ ಫಲಕಾರಿಯಾಗಲಿದೆ. ತಾಂತ್ರಿಕ ಪರಿಣಿತರಿಗೆ ಬೇಡಿಕೆ ಹೆಚ್ಚು. ಶುಭಸಂಖ್ಯೆ:8
ಕನ್ಯಾ: ನ್ಯಾಯಾಲಯದ ನೌಕರರಿಗೆ ವರ್ಗಾವಣೆ. ಗುರು ಹಿರಿಯರ ಮಾರ್ಗದರ್ಶನ ಸಿಗಲಿದೆ. ಧಾರ್ವಿುಕ ಕ್ಷೇತ್ರದ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ:2
ತುಲಾ: ಹೊಸ ಕೆಲಸದಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಹಳೇಯೋಚನೆ ಕಾರ್ಯಗತ. ಡೈರಿ ಉತ್ಪನ್ನ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:8
ವೃಶ್ಚಿಕ: ಶಿಕ್ಷಕ ವೃತ್ತಿಗೆ ಆಯ್ಕೆಯಾಗುವಿರಿ. ಭೂ ವ್ಯವಹಾರಗಳ ಕಾರಣ ಇವರ ಪ್ರಯಾಣ. ಉನ್ನತ ವಿದ್ಯಾಭ್ಯಾಸಕ್ಕೆ ಆಯ್ಕೆ ಆಗುವಿರಿ. ಶುಭಸಂಖ್ಯೆ:3
ಧನಸ್ಸು: ವಿರೋಧಿಗಳ ವಿರುದ್ಧ ಮುನ್ನಡೆ ಸಾಧಿಸುವಿರಿ. ಕಾನೂನು ಸಲಹೆಗಾರರಿಗೆ ಧನ ಲಾಭವಾಗುವುದು. ಕಾಫಿ ಬೆಳೆಗಾರರಿಗೆ ಶುಭ. ಶುಭಸಂಖ್ಯೆ:7
ಮಕರ: ನಗೆ ಭಾಷಣಕಾರರಿಗೆ ಬೇಡಿಕೆ. ನಂಬಿಕಸ್ತ ಕೆಲಸಗಾರರಿಂದ ಧನ ಲಾಭ. ಹೃದಯದ ತೊಂದರೆ ಇರುವವರು ಎಚ್ಚರದಿಂದ ಇರಿ. ಶುಭಸಂಖ್ಯೆ: 5
ಕುಂಭ: ಆಸ್ತಿವಿವಾದ ಬಗೆಹರಿಯಲಿದೆ. ವೈದ್ಯಕೀಯ ವಿದ್ಯಾರ್ಥಿಗಳ ಗೊಂದಲ ಮುಂದುವರಿಯಲಿದೆ. ಷೇರು ಹೂಡಿಕೆಯಿಂದ ಲಾಭ. ಶುಭಸಂಖ್ಯೆ:6
ಮೀನ: ಕಟ್ಟಡ ನಿರ್ಮಾಣದಲ್ಲಿ ಆರ್ಥಿಕ ಲಾಭ. ಸ್ವಂತ ಉದ್ಯಮದ ಮಹಿಳೆಯರಿಗೆ ಸನ್ಮಾನ. ಟ್ರಾವೆಲ್ಸ್ ಮಾಲೀಕರಿಗೆ ಗಳಿಕೆ ಹೆಚ್ಚಲಿದೆ. ಶುಭಸಂಖ್ಯೆ:3