ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸರ್ಕಾರಿ ಕೆಲಸಗಳಲ್ಲಿ ಜಯ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಸ್ವಂತ ವ್ಯಾಪಾರದಲ್ಲಿ ಬದಲಾವಣೆಯಾಗುವುದು. ಅನವಶ್ಯಕ ಓಡಾಟ ಮಾಡಬೇಕಾಗುವುದು. ಬೇಕರಿ ಉದ್ಯಮದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:2

ವೃಷಭ: ಆಸ್ತಿ ಹಂಚಿಕೆಯಲ್ಲಿ ಗೊಂದಲ. ದಾಂಪತ್ಯದಲ್ಲಿ ಏರಿಳಿತಗಳು ಉಂಟಾಗುತ್ತವೆ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ಶುಭಸಂಖ್ಯೆ: 3

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಜಯ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೊಸ ಸಮಸ್ಯೆ ಬಂದೀತು. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 8

ಕಟಕ: ಮನೆ ನವೀಕರಣ ಯೋಜನೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಆತಂಕದಲ್ಲಿಯೂ ಜಯ. ಸಂಗೀತಗಾರರಿಗೆ ಅವಕಾಶಗಳು ಲಭ್ಯ. ಶುಭಸಂಖ್ಯೆ: 8

ಸಿಂಹ: ಸಹೋದರರೊಂದಿಗೆ ದೂರ ಪ್ರಯಾಣ. ಕೃಷಿ ಕೆಲಸಗಳಲ್ಲಿ ಮಂದಗತಿ. ಸೇವಾ ವಲಯದ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಶುಭಸಂಖ್ಯೆ: 7

ಕನ್ಯಾ: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಹಣ ಗಳಿಕೆ. ಆನ್ ಲೈನ್ ವ್ಯವಹಾರದಲ್ಲಿ ಲಾಭ. ಹವ್ಯಾಸಿ ಕಲಾವಿದರಿಗೆ ವಿಶೇಷ ಅವಕಾಶ. ಶುಭಸಂಖ್ಯೆ: 7

ತುಲಾ: ಉಸಿರಾಟದ ತೊಂದರೆ ನಿವಾರಣೆ. ಗೃಹ ಮಾರಾಟಸ್ಥರಿಗೆ ಆದಾಯ. ವಿದ್ಯುತ್ ಕಾರ್ವಿುಕರು ಎಚ್ಚರದಿಂದಿರುವುದು ಸೂಕ್ತ. ಶುಭಸಂಖ್ಯೆ:3

ವೃಶ್ಚಿಕ: ಮಾಡುವ ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಗಂಟಲಿನ ಸಮಸ್ಯೆ ಕಾಡಬಹುದು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 3

ಧನಸ್ಸು: ಸೋದರಿಯ ನೆರವಿನಿಂದ ಸಾಲ ಮರುಪಾವತಿ. ಸಾವಯವ ರೈತರಿಗೆ ಸರ್ಕಾರದಿಂದ ಸನ್ಮಾನ. ಕಾಡುತ್ಪನ್ನ ವ್ಯಾಪಾರಿಗಳಿಗೆ ಶುಭ. ಶುಭಸಂಖ್ಯೆ: 4

ಮಕರ: ಆಭರಣ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಆರಕ್ಷಕ ವರ್ಗದವರಿಗೆ ನಿರಾಸೆ ಕಾಡಲಿದೆ. ಸಣ್ಣ ಕೈಗಾರಿಕೆ ಸ್ಥಾಪನೆಗೆ ಇಂದು ಸುಸಮಯ. ಶುಭಸಂಖ್ಯೆ: 1

ಕುಂಭ: ಉನ್ನತ ವಿದ್ಯಾರ್ಜನೆಯಲ್ಲಿ ಆಸಕ್ತಿ ತಾಳುವಿರಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ಕೊಡುವಿರಿ. ಸ್ವಯಂ ಉದ್ಯೋಗಸ್ಥರಿಗೆ ಶುಭದಾಯಕ. ಶುಭಸಂಖ್ಯೆ: 7

ಮೀನ: ಸೂಕ್ತ ಚಿಕಿತ್ಸೆಯಿಂದ ದೀರ್ಘಕಾಲದ ನೋವು ಶಮನ. ಕುಶಲಕರ್ವಿುಗಳಿಗೆ ಬೇಡಿಕೆ. ಕೇಂದ್ರದ ಮಹಿಳಾ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net