ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಾಲ ತೀರಿಸಲು ಸ್ನೇಹಿತರಿಂದ ಸಹಾಯ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಹೃದಯ ಸಂಬಂಧಿ ಆರೋಗ್ಯ ಚೇತರಿಕೆ. ಕುಟುಂಬ ಸಮೇತ ಪುಣ್ಯಕ್ಷೇತ್ರ ಭೇಟಿ. ಶುಭಸಂಖ್ಯೆ: 6

ವೃಷಭ: ಟ್ರಾವೆಲ್ಸ್ ಮಾಲೀಕರಿಗೆ ಲಾಭ. ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಕೀರ್ತಿಗಳಿಸುವಿರಿ. ಖರೀದಿಗೆ ಹಣ ವ್ಯರ್ಥ ಮಾಡಬೇಡಿ. ಶುಭಸಂಖ್ಯೆ: 1

ಮಿಥುನ: ಹೊಸ ವಾಹನ ಖರೀದಿಗೆ ಶುಭ ಸಮಯ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ ಸಾಧ್ಯತೆ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ:5

ಕಟಕ: ಸಾಲ ತೀರಿಸಲು ಸ್ನೇಹಿತರಿಂದ ಸಹಾಯ. ಮಂಡಳಿಗಳಲ್ಲಿ ಸ್ಥಾನಮಾನ ಸಿಗಲಿದೆ. ಆಹಾರ ಸೇವನೆಯಲ್ಲಿ ನಿಯಂತ್ರಣ ಇರಲಿ. ಶುಭಸಂಖ್ಯೆ:8

ಸಿಂಹ: ದೃಷ್ಟಿ ದೋಷ ಸಮಸ್ಯೆಗೆ ಪರಿಹಾರ. ರೇಷ್ಮೆ ಕೃಷಿಯನ್ನು ಪ್ರಾರಂಭಿಸಲು ನಿರ್ಧಾರ. ಸಗಟು ದಿನಸಿ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:3

ಕನ್ಯಾ: ಮಗಳ ವಿವಾಹದ ವಿಷಯದಲ್ಲಿ ಕಾರ್ಯಸಿದ್ಧಿ. ಕಾನೂನು ಉಲ್ಲಂಘನೆ ಮಾಡಬೇಡಿ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 6

ತುಲಾ: ಇಷ್ಟಪಟ್ಟ ಸ್ಥಳಕ್ಕೆ ಪ್ರವಾಸ ಹೋಗುವಿರಿ. ಕನಸಿನ ಮನೆ ಖರೀದಿಗೆ ನಿರ್ಧಾರ. ದಾಂಪತ್ಯ ಜೀವನದಲ್ಲಿ ಸಹನಶೀಲರಾಗಿ ವರ್ತಿಸಿ. ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಭದ್ರತಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ. ಕುಲದೇವರ ದರ್ಶನದಿಂದ ಸಮಾಧಾನ. ಶುಭಸಂಖ್ಯೆ:7

ಧನಸ್ಸು: ಹಳೆಯ ಮಿತ್ರರಿಂದ ಆರ್ಥಿಕ ಸಹಾಯ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಉದ್ಯೋಗ ಲಾಭ. ಕೋರ್ಟ್ ಕೇಸುಗಳಲ್ಲಿ ಜಯ. ಶುಭಸಂಖ್ಯೆ:6

ಮಕರ: ಪಿತ್ರಾರ್ಜಿತ ಆಸ್ತಿ ವಿಭಾಗವಾಗಲಿದೆ. ರೇಷ್ಮೆ ಸೀರೆ ಮಾರಾಟದಲ್ಲಿ ಧನಲಾಭ. ಅಡಿಕೆ, ತೆಂಗು ಬಾಳೆ ಬೇಸಾಯಗಾರರಿಗೆ ಶುಭದಿನ. ಶುಭಸಂಖ್ಯೆ:4

ಕುಂಭ: ಕೇಂದ್ರ ಸರ್ಕಾರ ವ್ಯಾಪ್ತಿಯ ಹುದ್ದೆ ಲಭ್ಯ. ಸಾರ್ವ ಜನಿಕವಾಗಿ ಮಾತಿನಲ್ಲಿ ಹಿಡಿತವಿರಲಿ. ಉದ್ಯೋಗ ಬದಲಾವಣೆಗೆ ಸುಸಮಯ. ಶುಭಸಂಖ್ಯೆ:8

ಮೀನ: ಆರ್ಥಿಕ ಸಂಕಷ್ಟ ಪರಿಹಾರವಾಗಿ ಸಾರ್ವಜನಿಕ ಗೌರವ, ಮನ್ನಣೆ ಪ್ರಾಪ್ತಿಯಾಗಲಿದೆ. ಕಲಾವಿದರಿಗೆ ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net