ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿ ಸಂತೋಷ ದುಪ್ಪಟ್ಟು

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಕೆಲಸದಲ್ಲಿ ಚತುರತೆ, ಯಶಸ್ಸು. ಉದ್ಯೋಗದಲ್ಲಿ ಹೊಸ ಯೋಜನೆ. ಕುಟುಂಬದಲ್ಲಿ ಮಾತಿನ ಭೇದ. ಹಣಕಾಸಿನಲ್ಲಿ ಎಚ್ಚರ ಅಗತ್ಯ. ಶುಭಸಂಖ್ಯೆ 1

ವೃಷಭ: ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ದುಪ್ಪಟ್ಟು. ಕಬ್ಬಿಣದ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ 1.

ಮಿಥುನ: ಐಟಿಯವರಿಗೆ ಉತ್ತಮ ದಿನ. ಹೊಸ ಕಲಿಕೆ, ಸಂದರ್ಶನಗಳಲ್ಲಿ ಯಶಸ್ಸು. ಅಚಾನಕ್ ಖರ್ಚು. ಸ್ನೇಹಿತರ ಸಹಾಯ ಲಭ್ಯ. ಶುಭಸಂಖ್ಯೆ 6

ಕಟಕ: ಚಂದ್ರನ ಪ್ರಭಾವ, ಮನಸ್ಸಿನಲ್ಲಿ ಗೊಂದಲ. ಮಹತ್ವದ ನಿರ್ಧಾರ ಮುಂದೂಡಿ. ಹಿರಿಯರ ಸಲಹೆ ಉಪಕಾರಿ. ಆರೋಗ್ಯ ಜಾಗ್ರತೆ. ಶುಭಸಂಖ್ಯೆ 2

ಸಿಂಹ: ನಿಮ್ಮ ಕೆಲಸದ ಬಗ್ಗೆ ಅಧಿಕಾರಿಗಳ ಮೆಚ್ಚುಗೆ ಗಳಿಸುತ್ತೀರಿ. ಹಣಕಾಸಿನಲ್ಲಿ ಸ್ಥಿರತೆ ಇರುತ್ತದೆ. ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ. ಶುಭಸಂಖ್ಯೆ 3

ಕನ್ಯಾ: ಮನೆ ಸಂಬಂಧಿತ ಶುಭ ಸುದ್ದಿ. ಲೆಕ್ಕಾಚಾರ, ಯೋಜನೆ ಯಶಸ್ಸು. ಬಟ್ಟೆ ವ್ಯಾಪಾರಿಗಳಿಗೆ ಲಾಭ. ಜೀರ್ಣಕ್ರಿಯೆ ಬಗ್ಗೆ ಗಮನವಿರಲಿ. ಶುಭಸಂಖ್ಯೆ 3

ತುಲಾ: ಕಲಾತ್ಮಕ ಕೆಲಸಗಳಲ್ಲಿ ಸಾಧನೆ. ದಾಂಪತ್ಯದಲ್ಲಿ ಸಂತೋಷ. ಹಣಕಾಸಿನಲ್ಲಿ ಸಮತೋಲನ. ಆದರೆ ಅನಗತ್ಯ ಖರ್ಚು ತಪ್ಪಿಸಿ. ಶುಭಸಂಖ್ಯೆ 9

ವೃಶ್ಚಿಕ: ಕುಜಗ್ರಹದ ಪ್ರಭಾವದಿಂದ ಧೈರ್ಯ ಹೆಚ್ಚುತ್ತದೆ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಜಯ ಸಾಧ್ಯತೆ. ಆದರೆ ಕೋಪ ನಿಯಂತ್ರಣ ಮುಖ್ಯ. ಶುಭಸಂಖ್ಯೆ 2

ಧನಸ್ಸು: ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣಕ್ಕೆ ಉತ್ತಮ ಸಮಯ. ಉದ್ಯೋಗದಲ್ಲಿ ಹೊಸ ಅವಕಾಶ. ಹಣಕಾಸಿನಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ 3

ಮಕರ: ಫಲಿತಾಂಶದ ನಿರೀಕ್ಷೆಯಲ್ಲಿ ಪರಿಶ್ರಮ ಹೆಚ್ಚಾಗುತ್ತದೆ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಬಹುದು. ನಿಧಾನವಾದರೂ ಸ್ಥಿರ ಪ್ರಗತಿ. ಶುಭಸಂಖ್ಯೆ 6.

ಕುಂಭ: ವಿದ್ಯುತ್ ಸಂಬಂಧಿತ ಯೋಜನೆಗಳಲ್ಲಿ ಸ್ಥಿರತೆ. ಸ್ನೇಹಿತರ ಸಹಾಯ ಸಿಗುತ್ತದೆ. ಹಣಕಾಸಿನ ಲಾಭ. ಕುಟುಂಬದಲ್ಲಿ ಒಗ್ಗಟ್ಟು. ಶುಭಸಂಖ್ಯೆ 6

ಮೀನ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಸಹೋದ್ಯೋಗಿಗಳ ಬೆಂಬಲ. ಹಣಕಾಸಿನಲ್ಲಿ ಸಮತೋಲನ. ಆರೋಗ್ಯ ಉತ್ತಮ. ಶುಭಸಂಖ್ಯೆ 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net