ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಾಲದ ಚಿಂತೆಗೆ ಪರಿಹಾರ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಧಾರ್ವಿುಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುವಿರಿ. ಪಾಲುದರರಿಂದ ಅನುಕೂಲ. ಉನ್ನತ ಶಿಕ್ಷಣದ ಹಂಬಲ ಈಡೇರಲಿದೆ. ಶುಭಸಂಖ್ಯೆ: 8

ವೃಷಭ: ದೂರ ಪ್ರಯಾಣದಲ್ಲಿ ಅನಿರೀಕ್ಷಿತ ಘಟನೆ ಸಂಭವಿಸಬಹುದು. ಮಹಿಳೆಯರಿಗೆ ಕಚೇರಿಯಲ್ಲಿ ಅನಿರೀಕ್ಷಿತ ಗೌರವ ಸಿಗುವುದು. ಶುಭಸಂಖ್ಯೆ:3

ಮಿಥುನ: ಪ್ರೀತಿ-ಪ್ರೇಮದ ಚಿಂತನೆ. ದೈಹಿಕ ಸಮತೋಲನ ಕಾಯ್ದುಕೊಳ್ಳಿ. ಪಾಲುದಾರಿಕೆಯಲ್ಲಿ ಲಾಭ. ಕುಟುಂಬಸ್ಥರಿಂದ ಆರ್ಥಿಕ ನೆರವು. ಶುಭಸಂಖ್ಯೆ:8

ಕಟಕ: ತಾಯಿಯ ಆರೋಗ್ಯದಲ್ಲಿ ಉತ್ತಮ ಸುಧಾರಣೆ. ದಾಂಪತ್ಯದಲ್ಲಿ ತೃಪ್ತಿ. ಸಗಟು ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಸಾಲದ ಚಿಂತೆ. ಶುಭಸಂಖ್ಯೆ: 6

ಸಿಂಹ: ಮಕ್ಕಳಿಂದ ಅನುಕೂಲವಾಗುವುದು. ಖಾಸಗಿ ಉದ್ಯೋಗ ಪ್ರಾಪ್ತಿ. ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ. ಅಮೂಲ್ಯ ವಸ್ತು ಖರೀದಿ. ಶುಭಸಂಖ್ಯೆ: 4

ಕನ್ಯಾ: ಬಹುದಿನಗಳ ಕನಸು ನನಸಾಗಲಿದೆ. ಸ್ಥಿರಾಸ್ತಿಯ ಮೇಲೆ ಸಾಲ ಪಡೆಯಲು ಪ್ರಯತ್ನ. ಕೋರ್ಟ್ ಕೇಸುಗಳ ಇತ್ಯರ್ಥ ಆಗಲಿದೆ.ಶುಭಸಂಖ್ಯೆ: 7

ತುಲಾ: ಹೊಸದಾಗಿ ಪ್ರಾರಂಭಿಸಿದ ವ್ಯಾಪಾರದಲ್ಲಿ ಅನುಕೂಲ. ಸ್ವಗ್ರಾಮಕ್ಕೆ ಆಕಸ್ಮಿಕ ಪ್ರಯಾಣ ಸಾಧ್ಯತೆ. ಪತ್ರವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ:1

 ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನವಾಗುವುದು. ಸಂಗಾತಿಯಿಂದ ಸೂಕ್ತ ಸಲಹೆ. ಶುಭ ಕಾರ್ಯದಲ್ಲಿ ಯಶಸ್ಸು ಸಿಗುವುದು. ಶುಭಸಂಖ್ಯೆ:5

ಧನಸ್ಸು: ಸಾಲದ ಚಿಂತೆಗೆ ಪರಿಹಾರ. ರಂಗ ಕಲಾವಿದರಿಗೆ ಗೌರವದ ನಿರೀಕ್ಷೆ, ಅನಾರೋಗ್ಯದಿಂದ ಮುಕ್ತಿ, ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ:3

ಮಕರ: ಪ್ರೀತಿ-ಪ್ರೇಮದಲ್ಲಿ ಮುನ್ನಡೆ. ನಟರಿಗೆ ಬಂದ ಅಪಕೀರ್ತಿ, ಅಪವಾದ ದೂರವಾಗಲಿದೆ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಶುಭಸಂಖ್ಯೆ: 7

ಕುಂಭ: ಸ್ಥಿರಾಸ್ತಿ ಖರೀದಿ ಯೋಗವಿದೆ. ಗುಪ್ತ ಆಲೋಚನೆ ಗಳಲ್ಲಿ ಯಶಸ್ಸು. ಧಾರ್ವಿುಕ ಸ್ಥಳಕ್ಕೆ ಭೇಟಿ. ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 4

ಮೀನ: ಸವಾಲಿನ ಸ್ಪರ್ಧೆಯಲ್ಲಿ ವಿಜೇತರಾಗಿ ಸಮಾಧಾನ. ಉದ್ಯೋಗ ಸ್ಥಳದಲ್ಲಿ ಸಂತೋಷ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net