ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಸ್ಪಷ್ಟತೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಕೆಲಸದಲ್ಲಿ ಹೊಸ ಉತ್ಸಾಹ ಇರಲಿದೆ. ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಸ್ಪಷ್ಟತೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಗೌರವ ಹೆಚ್ಚಾಗಲಿದೆ. ಶುಭಸಂಖ್ಯೆ: 9

ವೃಷಭ; ಅಪರೂಪದ ವಸ್ತು ಲಭ್ಯವಾಗುವ ಸಾಧ್ಯತೆ. ಕುಟುಂಬದ ಹಳೆಯ ಅಸಮಾಧಾನ ಕಮ್ಮಿಯಾಗುತ್ತವೆ. ಉದ್ಯೋಗ ಬದಲಾವಣೆ. ಶುಭಸಂಖ್ಯೆ:4

ಮಿಥುನ: ನವಪರಿಚಯದಿಂದ ಪ್ರಯೋಜನ. ವ್ಯವಹಾರದಲ್ಲಿ ಜಾಣ್ಮೆಯಿಂದ ನಡೆದುಕೊಂಡರೆ ಲಾಭ. ಕುಟುಂಬದಲ್ಲಿ ಸಣ್ಣ ಗೊಂದಲ. ಶುಭಸಂಖ್ಯೆ:8.

ಕಟಕ: ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ. ದೂರ ಪ್ರಯಾಣ ಯೋಗ. ಶುಭಸಂಖ್ಯೆ: 2

ಸಿಂಹ: ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಸಾರ್ವಜನಿಕವಾಗಿ ನಿಮ್ಮ ಮಾತಿಗೆ ಮಹತ್ವವಿದೆ. ಹೃದಯ ಸಂಬಂಧಿ ರೋಗ ಸುಧಾರಣೆ. ಶುಭಸಂಖ್ಯೆ:4

ಕನ್ಯಾ: ನಿರೀಕ್ಷಿತ ಕಾರ್ಯಗಳು ನಿಧಾನಗತಿ. ಉದ್ಯಮಸ್ಥ ಮಹಿಳೆಯರಿಗೆ ಸಹನೆ ಅಗತ್ಯ. ಕುಟುಂಬದಲ್ಲಿ ನಿಮ್ಮ ಸಲಹೆ ಮುಖ್ಯವಾಗುತ್ತದೆ. ಶುಭಸಂಖ್ಯೆ: 5

ತುಲಾ: ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ಫಲ ಸಿಗುವ ಸಮಯ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ . ಹಣಕಾಸಿನಲ್ಲಿ ಸ್ಥಿರತೆ ಇರಲಿದೆ. ಶುಭಸಂಖ್ಯೆ:9

ವೃಶ್ಚಿಕ: ಪ್ರಮುಖ ನಿರ್ಣಯಗಳನ್ನು ಎಚ್ಚರಿಕೆಯಿಂದ ಕೈಗೊಳ್ಳಿ. ಪೋಲಿಸ್ ಕೆಲಸದಲ್ಲಿ ಒತ್ತಡ ಹೆಚ್ಚಾದೀತು. ಕಠಿಣ ಪರಿಶ್ರಮದಿಂದ ದಣಿವು. ಶುಭಸಂಖ್ಯೆ: 8

ಧನಸ್ಸು: ಹೊಸ ಅವಕಾಶ ಸಿಗಲಿದೆ. ಆಹಾರ ಧಾನ್ಯಗಳ ವ್ಯಾಪಾರಿಗಳಿಗೆ ಲಾಭ. ಧಾರ್ವಿುಕ ವ್ಯಕ್ತಿಗಳ ಮಾತಿನಿಂದ ಪ್ರಭಾವಿಸಲ್ಪಡುವಿರಿ. ಶುಭಸಂಖ್ಯೆ: 7

ಮಕರ: ಕೆಲಸದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ. ನ್ಯಾಯಾಲಯದ ಕೆಲಸದಲ್ಲಿ ವಿಳಂಬ. ದಾಂಪತ್ಯ ಸಂಬಂಧ ಸುಧಾರಣೆ ಆಗುವುದು. ಶುಭಸಂಖ್ಯೆ: 6

ಕುಂಭ: ನಿಮ್ಮ ಪ್ರತಿಭೆ ಗುರುತಿಸಲ್ಪಡುವ ದಿನ. ಹೊಸ ಒಡನಾಟ ಫಲ ನೀಡಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ. ಶುಭಸಂಖ್ಯೆ: 2

ಮೀನ: ಮಾನಸಿಕ ಶಾಂತಿ. ಹಳೇ ಸಮಸ್ಯೆಗೆ ಪರಿಹಾರ ಲಭ್ಯ. ಹಣಕಾಸಿನಲ್ಲಿ ಮಿತವ್ಯಯ ಅಗತ್ಯ. ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶುಭಸಂಖ್ಯೆ:8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net