ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಮದುವೆ ಮಾತುಕತೆ ಫಲಪ್ರದ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on
ಮೇಷ: ಕುಟುಂಬದಲ್ಲಿ ಸಮನ್ವಯ ಬೇಕು. ಮದುವೆ ಮಾತುಕತೆ ಫಲಪ್ರದ. ಉದ್ಯೋಗದಲ್ಲಿ ಅವಕಾಶ. ಲೋಹ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1


ವೃಷಭ: ವೃತ್ತಿಯಲ್ಲಿ ಕೆಲಸದ ಒತ್ತಡ. ಉನ್ನತ ಶಿಕ್ಷಣದಲ್ಲಿ ಪ್ರವೇಶ ಸಿಗಲಿದೆ. ಕಲೆ-ನಾಟ್ಯ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಮೆಚ್ಚುಗೆ ಸಿಗಲಿದೆ. ಶುಭಸಂಖ್ಯೆ:9

ಮಿಥುನ: ಮನೆಯಲ್ಲಿ ಸಂತೋಷದ ವಾತಾವರಣ. ಕಾಫಿ ಬೆಳೆಗಾರರಿಗೆ ಲಾಭವಾಗುವುದು. ಉದ್ಯೋಗದಲ್ಲಿ ಪದೋನ್ನತಿಯ ಸೂಚನೆ. ಶುಭಸಂಖ್ಯೆ: 7

ಕಟಕ: ಆಸ್ತಿ ವಿಚಾರದಲ್ಲಿ ಜಾಗ್ರತೆ ಅಗತ್ಯ. ಮಗನ ಮದುವೆ ವಿಷಯದಲ್ಲಿ ಕಾರ್ಯಸಿದ್ಧಿ. ವೃತ್ತಿ ಕ್ಷೇತ್ರದಲ್ಲಿ ವೈದ್ಯರಿಗೆ ಪರಿಶ್ರಮದ ಫಲ. ಶುಭಸಂಖ್ಯೆ:3

ಸಿಂಹ: ಹರ್ಷದ ವಾತಾವರಣ. ಆಸ್ತಿ ವಿಚಾರದಲ್ಲಿ ಶುಭ ಸುದ್ದಿ ಬರಲಿದೆ. ಸರ್ಕಾರಿ ಉದ್ಯೋಗದಲ್ಲಿ ಬಡ್ತಿ. ರಿಯಲ್ ಎಸ್ಟೇಟ್ನಲ್ಲಿ ಸ್ಪರ್ಧೆ. ಶುಭಸಂಖ್ಯೆ: 4

ಕನ್ಯಾ: ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಸಕಾರಾತ್ಮಕ ಪ್ರಗತಿ. ವೃತ್ತಿಯಲ್ಲಿ ಹೊಸಯೋಜನೆ ಫಲದಾಯಕ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ಶುಭಸಂಖ್ಯೆ: 5

ತುಲಾ: ಶುಭ ಕಾರ್ಯದ ಸೂಚನೆ, ಸಂತಸ. ಸಂಗಾತಿಯ ಕಡೆಯಿಂದ ಬಂದ ಆಸ್ತಿಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 3

ವೃಶ್ಚಿಕ: ಸಣ್ಣ ಸಮಸ್ಯೆ. ರಾಜಕೀಯ ರಂಗದವರಿಗೆ ಕನಸಿನ ಸಾಕಾರ. ಐಟಿ ವೃತ್ತಿಯಲ್ಲಿ ಏರುಪೇರು. ಅಡಿಕೆ ಬೆಳೆಗಾರರಿಗೆ ಸುದಿನ. ಶುಭಸಂಖ್ಯೆ: 8

ಧನಸ್ಸು: ಉದ್ಯೋಗದ ಸ್ಥಳದಲ್ಲಿ ಸಂತೋಷದ ವಾತಾವರಣ. ವೈದ್ಯಕೀಯ ಕ್ಷೇತ್ರದ ಉದ್ಯೋಗದಲ್ಲಿ ಪ್ರಗತಿ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಮಕರ: ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮನೆ ಕಟ್ಟುವ ವಿಚಾರದಲ್ಲಿ ವಿಳಂಬ. ವೃತ್ತಿಯಲ್ಲಿ ಸ್ಥಿರತೆ. ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಲಭ್ಯ. ಶುಭಸಂಖ್ಯೆ:1

ಕುಂಭ: ಕುಟುಂಬದಲ್ಲಿ ಆಸ್ತಿ ವಿಚಾರದಲ್ಲಿ ಒಗ್ಗಟ್ಟು. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭ. ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಉತ್ತಮ ಲಾಭ. ಶುಭಸಂಖ್ಯೆ: 7

ಮೀನ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿ ಪಡುವಿರಿ. ಶಿಕ್ಷಣದಲ್ಲಿ ಯಶಸ್ಸು. ಕಲಾ ಕ್ಷೇತ್ರದಲ್ಲಿ ಹೆಸರು ಮಾಡುವ ಅವಕಾಶ. ಶುಭಸಂಖ್ಯೆ:3



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net