ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಆರ್ಥಿಕ ಸಮಸ್ಯೆಗೆ ಪರಿಹಾರ. ಖರೀದಿಯಲ್ಲಿ ಹಿಡಿತವಿರಲಿ. ಭೂ ವ್ಯವಹಾರದಲ್ಲಿ ಲಾಭ. ಸಂಗಾತಿಯ ಆರೋಗ್ಯ ಸುಧಾರಣೆ. ಶುಭಸಂಖ್ಯೆ:9

ವೃಷಭ: ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಯವಾದೀತು. ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 2

ಮಿಥುನ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಧಾರ್ವಿುಕ ವೃತ್ತಿಯವರಿಗೆ ಆದಾಯ ಹೆಚ್ಚಲಿದೆ. ಪಾಲುದಾರಿಕೆಯಲ್ಲಿ ಅಧಿಕ ಲಾಭ. ಶುಭಸಂಖ್ಯೆ: 8

ಕಟಕ: ಸಂತಾನಾಕಾಂಕ್ಷಿಗಳಿಗೆ ಶುಭಸುದ್ದಿ. ಪಾಲುದಾರಿಕೆಯಲ್ಲಿ ಅನಿರೀಕ್ಷಿತ ತಿರುವು. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆ. ಶುಭಸಂಖ್ಯೆ:3

ಸಿಂಹ: ಬೇಕರಿ ವ್ಯಾಪಾರದಲ್ಲಿ ಲಾಭ. ಅನಿರೀಕ್ಷಿತ ವಿದೇಶ ಪ್ರಯಾಣ. ಕುಟುಂಬದಲ್ಲಿ ಇದ್ದ ಆಸ್ತಿ ಮಾರಾಟ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ:2

ಕನ್ಯಾ: ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಬದಲಾವಣೆ. ವಾಹನ ದುರಸ್ತಿಗೆ ಖರ್ಚು. ತೆಂಗಿನಕಾಯಿ ಮಾರಾಟಗಾರರಿಗೆ ಆದಾಯ. ಶುಭಸಂಖ್ಯೆ:7

ತುಲಾ: ಅವಿವಾಹಿತರಿಗೆ ಶೀಘ್ರದಲ್ಲಿ ವಿವಾಹ ಯೋಗ. ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರದಲ್ಲಿ ಆದಾಯ. ಕುಟುಂಬದೊಂದಿಗೆ ವಿಹಾರ. ಶುಭಸಂಖ್ಯೆ: 5

ವೃಶ್ಚಿಕ: ಇಲಾಖೆ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ. ಆಹಾರ ಪದಾರ್ಥ ವ್ಯಾಪಾರದಲ್ಲಿ ಆದಾಯ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 8

ಧನಸ್ಸು: ಔತಣಕೂಟಕ್ಕೆ ಅಧಿಕ ಖರ್ಚು. ರಾಜಕೀಯ ಪ್ರವೇಶಿಸಲು ಸಕಾಲ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಅಗತ್ಯ. ಶುಭಸಂಖ್ಯೆ:9

ಮಕರ: ಅನಿರೀಕ್ಷಿತ ಧನ ಲಾಭವಾಗಿ ಸಂತಸ. ಬರಹಗಾರರಿಗೆ ಸರ್ಕಾರಿ ಸಹಾಯ ದೊರೆಯಲಿದೆ. ಕಮಿಷನ್ ವ್ಯವಹಾರದಲ್ಲಿ ಆದಾಯ.ಶುಭಸಂಖ್ಯೆ:1

ಕುಂಭ: ಆಸ್ತಿ ಪತ್ರಗಳ ಕೆಲಸಗಳಲ್ಲಿ ಮುನ್ನಡೆ. ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ಹೈನುಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 2

ಮೀನ: ಸಣ್ಣ ವ್ಯವಹಾರದಲ್ಲಿ ಅನಿರೀಕ್ಷಿತ ದೊಡ್ಡ ಲಾಭ. ಮಹಿಳಾ ರಾಜಕಾರಣಿಗಳಿಗೆ ಶುಭ. ಹೃದಯ ಸಂಬಂಧಿ ತೊಂದರೆ ನಿವಾರಣೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net