ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನಿರಂತರ ಪ್ರಯತ್ನಕ್ಕೆ ಫಲ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ತಂತ್ರಜ್ಞಾನ ಕ್ಷೇತ್ರದಲ್ಲಿ ಯಶ ಗಳಿಸುವಿರಿ. ಉದ್ಯಮಿ ಮಹಿಳೆಯರಿಗೆ ವಿದೇಶ ಪ್ರಯಾಣ. ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ಶುಭಸಂಖ್ಯೆ: 9

ವೃಷಭ: ಜವಳಿ ಕಾರ್ಖಾನೆ ಮಾಲೀಕರಿಗೆ ಲಾಭ. ಏಲಕ್ಕಿ, ಕಾಳು ಮೆಣಸು ಕೃಷಿಕರಿಗೆ ಆರ್ಥಿಕ ಲಾಭ. ಕಾನೂನು ವಿದ್ಯಾಭ್ಯಾಸಕ್ಕೆ ಅವಕಾಶ. ಶುಭಸಂಖ್ಯೆ:6

ಮಿಥುನ: ಸಂಗಾತಿಯ ಆರೋಗ್ಯ ಸುಧಾರಿಸಲಿದೆ. ವೃತ್ತಿ ಕ್ಷೇತ್ರದಲ್ಲಿ ಅನಿರೀಕ್ಷಿತ ಬೆಳವಣಿಗೆ ಸಾಧ್ಯತೆ. ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ:8

ಕಟಕ: ಪ್ರಲೋಭನೆಗಳಿಗೆ ಒಳಗಾಗುವುದು ಸಲ್ಲ. ಕಚೇರಿಯಲ್ಲಿ ದಿಟ್ಟತನದ ನಿರ್ಧಾರದಿಂದ ತೊಂದರೆ. ಧಾನ್ಯಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1

ಸಿಂಹ: ಹೊಸ ಕೆಲಸಗಳು ಸುಗಮವಾಗಲಿವೆ. ವ್ಯಾಪಾರದಲ್ಲಿ ಹೊಸ ಅವಕಾಶಗಳು ಲಭಿಸಲಿವೆ. ಧಾರ್ವಿುಕ ಕ್ಷೇತ್ರದಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ: 8

ಕನ್ಯಾ: ನಿರಂತರ ಪ್ರಯತ್ನಕ್ಕೆ ಫಲ ಸಿಗಲಿದೆ. ಮಹಿಳೆಯರು ಇಷ್ಟವಾದ ವಸ್ತು ಖರೀದಿಸುವಿರಿ. ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ:4

ತುಲಾ: ಹಿತಶತ್ರುಗಳಿಂದ ದೂರವಿರಿ. ಮಾಧ್ಯಮ ಕ್ಷೇತ್ರದವರಿಗೆ ಬದಲಾವಣೆಯ ಯೋಗ. ದೊಡ್ಡಮಟ್ಟದ ಹಣ ಹೂಡಿಕೆಗೆ ನಿರ್ಧಾರ. ಶುಭಸಂಖ್ಯೆ:6

ವೃಶ್ಚಿಕ: ಆಹಾರ ಸೇವನೆಯಿಂದ ಅನಾರೋಗ್ಯ ಸಮಸ್ಯೆ ಬರಬಹುದು, ಕಾಳಜಿ ವಹಿಸಿ. ವಿದ್ಯುತ್ ಕ್ಷೇತ್ರದ ಕೆಲಸಗಾರರಿಗೆ ಧನ ಲಾಭ. ಶುಭಸಂಖ್ಯೆ:3

ಧನಸ್ಸು: ಯೋಗ ಸಾಧನೆಯತ್ತ ಮನಸ್ಸು. ವಿದೇಶದ ಉದ್ಯೋಗದ ಕನಸು ಸಾಕಾರ. ಆರಕ್ಷಕ ವೃತ್ತಿಯವರಿಗೆ ವರ್ಗ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:2

ಮಕರ: ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶ ದೊರೆಯಲಿದೆ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಭತ್ತ, ಗೋಧಿ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ:6

ಕುಂಭ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಉದ್ಯೋಗದ ನಿಮಿತ್ತ ವಿದೇಶ ಪ್ರಯಾಣ. ಸಿದ್ದ ಉಡುಪುಗಳ ಮಾರಾಟಗಾರರಿಗೆ ಲಾಭವಿದೆ. ಶುಭಸಂಖ್ಯೆ:5

ಮೀನ: ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ. ಹೊಸ ವಾಹನ ಖರೀದಿಗೆ ಹಣ ದೊರಕಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net