ನಿತ್ಯಭವಿಷ್ಯ: ಈ ರಾಶಿಯವರಿಗೆ ಹಿತ ಶತ್ರುಗಳ ಬಗ್ಗೆ ಜಾಗರೂಕತೆ ಇರಲಿ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಕಲಾವಿದರು ಮನ್ನಣೆಗೆ ಪಾತ್ರರಾಗುವರು. ಸಗಟು ವ್ಯಾಪಾರದಲ್ಲಿ ತೃಪ್ತಿಕರ ಬದಲಾವಣೆ. ವೈಮಾನಿಕ ಕ್ಷೇತ್ರದವರಿಗೆ ಶುಭದಿನ. ಶುಭಸಂಖ್ಯೆ: 5

ವೃಷಭ: ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಲಿದೆ. ಉನ್ನತ ವಿದ್ಯಾಭ್ಯಾಸದ ಫಲಿತಾಂಶ ನಿಮ್ಮ ಕಡೆಗಿದೆ. ನೂತನ ನಿವೇಶನ ಖರೀದಿ. ಶುಭಸಂಖ್ಯೆ: 9

ಮಿಥುನ: ಅಡುಗೆ ತಯಾರಕರಿಗೆ ಅಧಿಕ ಹಣ. ನೋಂದಣಿ ಕ್ಷೇತ್ರದ ಅಧಿಕಾರಿಗಳಿಗೆ ವರ್ಗಾವಣೆ. ದಿನದ ಅಂತ್ಯದಲ್ಲಿ ಸ್ನೇಹಿತರ ಭೇಟಿ. ಶುಭಸಂಖ್ಯೆ: 4

ಕಟಕ: ಅಚ್ಚರಿಯ ಸಂಗತಿ ಕೇಳಲಿದ್ದೀರಿ. ಶಿಕ್ಷಣ ಸಂಸ್ಥೆಯ ಮಾಲೀಕರಿಗೆ ಒತ್ತಡ ಹೆಚ್ಚಲಿದೆ. ವಿದ್ಯುತ್ ಸಂಬಂಧ ಕೆಲಸಗಳಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 9

ಸಿಂಹ: ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸಿ. ಕುಟುಂಬದ ಕಡೆ ಗಮನ ಹರಿಸಿ. ಸಕಾಲದಲ್ಲಿ ಆರಂಭಿಸಿದ ಕೆಲಸಗಳು ಅಂತ್ಯವಾಗಲಿವೆೆ. ಶುಭಸಂಖ್ಯೆ:4

ಕನ್ಯಾ: ಪ್ರವಚನಕಾರರಿಗೆ ಧನ ಲಾಭ. ಪತ್ರಕರ್ತರಿಗೆ ಸ್ಥಳ ಬದಲಾವಣೆ ಸಾಧ್ಯತೆ. ಕೇಂದ್ರ ಸರ್ಕಾರಿ ಮಹಿಳಾ ಉದ್ಯಮಿಗಳಿಗೆ ಶುಭದಿನ. ಶುಭಸಂಖ್ಯೆ:7

ತುಲಾ: ಸಮಾನ ಮನಸ್ಕರೊಂದಿಗೆ ಗೆಳೆತನ ಬೆಳೆಯುವುದು. ಹೊಸ ಕೆಲಸದಲ್ಲಿ ಉತ್ಸಾಹ. ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಶುಭಸಂಖ್ಯೆ: 4

ವೃಶ್ಚಿಕ: ವಿದ್ಯುತ್ ಗುತ್ತಿಗೆದಾರರಿಗೆ ಉತ್ತಮ ಧನ ಲಾಭ. ಕಲಾಕ್ಷೇತ್ರದವರಿಗೆ ಹೊಸ ಅವಕಾಶ ಸಿಗಲಿದೆ. ರೈತರಿಗೆ ಸಾಲ ತೀರಿಸುವ ಯೋಗ. ಶುಭಸಂಖ್ಯೆ: 5

ಧನಸ್ಸು: ಕಾರು ಖರೀದಿಗೆ ಸುಸಮಯ. ಡೇರಿ ಪದಾರ್ಥಗಳ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಹಿತ ಶತ್ರುಗಳ ಬಗ್ಗೆ ಜಾಗರೂಕತೆ ಇರಲಿ. ಶುಭಸಂಖ್ಯೆ: 4

ಮಕರ: ಆಸ್ಪತ್ರೆಯ ಕೆಲಸಗಾರರಿಗೆ ಧನಲಾಭ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ತಯಾರಿ ಮಾಡಿ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ: 1

ಕುಂಭ: ತರಕಾರಿ ಬೆಳೆಗಾರರಿಗೆ ಅಧಿಕ ಲಾಭ. ನಿರುದ್ಯೋಗ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ. ಶುಭಸಂಖ್ಯೆ: 2

ಮೀನ: ಉದ್ಯೋಗದಲ್ಲಿ ಬದಲಾವಣೆ ಆಗಲಿದೆ. ದವಸ ಧಾನ್ಯಗಳ ಮಾರಾಟದಲ್ಲಿ ಲಾಭ. ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net