ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಮನೆಗೆ ಸಂಬಂಧಿಸಿ ಶುಭ ಕಾರ್ಯದ ಸೂಚನೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಸರ್ಕಾರಿ ಕೆಲಸದಲ್ಲಿ ಅವಕಾಶ ಜಾಸ್ತಿ. ವ್ಯಾಪಾರದಲ್ಲಿ ಹೊಸ ಒಪ್ಪಂದ ಸಾಧ್ಯ. ಕುಟುಂಬದಲ್ಲಿ ಶುಭ ಸಮಾರಂಭದ ಸೂಚನೆ. ಶುಭಸಂಖ್ಯೆ:9

ವೃಷಭ: ಖಾಸಗಿ ಉದ್ಯೋಗದಲ್ಲಿ ಒತ್ತಡ ಇದ್ದರೂ ಉತ್ತಮ ಪ್ರತಿಫಲ ದೊರೆಯುತ್ತದೆ. ತರಕಾರಿ ಮತ್ತು ಧಾನ್ಯ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1

ಮಿಥುನ: ಹೋಟೆಲ್ ವ್ಯವಹಾರದಲ್ಲಿ ಆದಾಯ. ರಿಯಲ್ ಎಸ್ಟೇಟ್​ನಲ್ಲಿ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ. ಶುಭಸಂಖ್ಯೆ:8

ಕಟಕ: ಸರ್ಕಾರಿ ಕೆಲಸದಲ್ಲಿ ಪ್ರಗತಿ. ಖಾಸಗಿ ಉದ್ಯೋಗದಲ್ಲಿ ಹೊಸ ಅವಕಾಶ ಲಭ್ಯ. ಮನೆಗೆ ಸಂಬಂಧಿಸಿ ಶುಭ ಕಾರ್ಯದ ಸೂಚನೆ. ಶುಭಸಂಖ್ಯೆ:3

ಸಿಂಹ: ವ್ಯಾಪಾರದಲ್ಲಿ ಧೈರ್ಯದಿಂದ ನಿರ್ಧಾರ ಮಾಡಿದರೆ ಲಾಭವಿದೆ. ವಿದೇಶ ಪ್ರಯಾಣಕ್ಕೆ ಸಕಾಲ. ಕುಟುಂಬದಲ್ಲಿ ಒಳ್ಳೆಯ ಸುದ್ದಿ. ಶುಭಸಂಖ್ಯೆ:7

ಕನ್ಯಾ: ಸ್ವಂತ ವ್ಯಾಪಾರದಲ್ಲಿ ಲಾಭ ಬರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಮೆಚ್ಚುಗೆ. ಕುಟುಂಬದಲ್ಲಿ ಸಣ್ಣ ಮಟ್ಟಿನ ಶುಭ ಸಮಾರಂಭ. ಶುಭಸಂಖ್ಯೆ:2

ತುಲಾ: ಭೂಮಿಯ ವ್ಯವಹಾರದಲ್ಲಿ ಒಳ್ಳೆಯ ಅವಕಾಶ. ಹೋಟೆಲ್ ವ್ಯವಹಾರದಲ್ಲಿ ಸ್ಥಿರ ಆದಾಯ. ಮಾತೃ ಮೂಲವಾದ ಆಸ್ತಿ ಪ್ರಾಪ್ತಿ. ಶುಭಸಂಖ್ಯೆ:5

ವೃಶ್ಚಿಕ: ಆಮದು ರಫ್ತು ವ್ಯಾಪಾರದಲ್ಲಿ ಧನಲಾಭ. ವಿದೇಶ ಪ್ರಯಾಣದ ಯತ್ನ ಯಶಸ್ವಿ. ಪೆಟ್ರೋಲ್ ಬಂಕ್ ಮಾಲೀಕರಿಗೆ ಧನ ಲಾಭ.ಶುಭಸಂಖ್ಯೆ:4

ಧನಸ್ಸು: ಉದ್ಯೋಗದಲ್ಲಿ ಬಡ್ತಿ. ತರಕಾರಿ ವ್ಯಾಪಾರದಲ್ಲಿ ಉತ್ತಮ ಆದಾಯ. ಕುಟುಂಬದಲ್ಲಿ ಮದುವೆ. ಪದವಿಗಿದ್ದ ಅಡ್ಡಿನಿವಾರಣೆ. ಶುಭಸಂಖ್ಯೆ:2

ಮಕರ: ರಿಯಲ್ ಎಸ್ಟೇಟ್​ನಲ್ಲಿ ಲಾಭದ ಸೂಚನೆ. ಉದ್ಯೋಗ ದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಕುಟುಂಬದಲ್ಲಿ ಆಸ್ತಿ ವಿಭಾಗಕ್ಕೆ ಸುಸಮಯ. ಶುಭಸಂಖ್ಯೆ:7

ಕುಂಭ: ವ್ಯಾಪಾರದಲ್ಲಿ ಹೊಸ ಯೋಜನೆಗಳು ಯಶಸ್ವಿ. ಹೋಟೆಲ್ ವ್ಯವಹಾರದಲ್ಲಿ ಬೆಳವಣಿಗೆ. ವಿದೇಶ ಸಂಪರ್ಕದಿಂದ ಲಾಭ. ಶುಭಸಂಖ್ಯೆ:3

ಮೀನ: ಸರ್ಕಾರಿ ನೌಕರರ ಮೇಲೆ ಇದ್ದ ಆಪಾದನೆ ನಿವಾರಣೆ. ಅಕ್ಕಿಮತ್ತು ಗೋಧಿ ವ್ಯಾಪಾರದಲ್ಲಿ ಲಾಭ. ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net