ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹಣಕಾಸು ವ್ಯವಹಾರ ಯಶಸ್ಸು

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ತಾಂತ್ರಿಕ ಸವಾಲು ಎದುರಾದೀತು. ನಿಮ್ಮ ತ್ವರಿತ ನಿರ್ಧಾರ ಮತ್ತು ಕೌಶಲಕ್ಕೆ ಮೆಚ್ಚುಗೆ ಸಿಗುತ್ತದೆ. ಕುಟುಂಬದ ಉತ್ತಮ ಸಹಕಾರ. ಶುಭಸಂಖ್ಯೆ:1

ವೃಷಭ: ಆಹಾರ ಧಾನ್ಯಬೆಳೆಗಳಿಗೆ ಒಳ್ಳೆಯ ಮಾರುಕಟ್ಟೆ ಸಿಗಲಿದೆ. ಕೃಷಿ ಸಂಬಂಧಿ ಹೊಸ ಯೋಜನೆ ಫಲಪ್ರದ. ಸ್ತ್ರೀಯರಿಗೆ ಖರ್ಚಿನಲ್ಲಿ ಜಾಗ್ರತೆ ಇರಲಿ. ಶುಭಸಂಖ್ಯೆ: 9

ಮಿಥುನ: ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮಾನ್ಯತೆ. ಬಾಕಿ ಫೈಲ್ಗಳು ಪೂರ್ಣಗೊಳ್ಳುವ ಸಾಧ್ಯತೆ. ಮೇಲಧಿಕಾರಿಗಳ ಬೆಂಬಲ ಸಿಗುತ್ತದೆ. ಶುಭಸಂಖ್ಯೆ:7

ಕಟಕ: ರೇಷ್ಮೆ ಸೀರೆಗಳ ವ್ಯವಹಾರದಲ್ಲಿ ಹೊಸ ಗ್ರಾಹಕರ ಪರಿಚಯ. ಕಾಂಡಿಮೆಂಟ್ಸ್ ಮತ್ತು ಬೇಕರಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6

ಸಿಂಹ: ಭೂಮಿಯ ವ್ಯವಹಾರದಲ್ಲಿ ಶುಭ ಸುದ್ದಿ. ಪಾಲುದಾರಿಕೆಯಲ್ಲಿ ಲಾಭದ ಸೂಚನೆ. ವಿದೇಶಿ ವ್ಯಾಪಾರಿಗಳೊಂದಿಗೆ ಒಪ್ಪಂದ. ಶುಭಸಂಖ್ಯೆ:4

ಕನ್ಯಾ: ಕೆಲಸದ ಒತ್ತಡ ಹೆಚ್ಚಾದರೂ ತೃಪ್ತಿ ಇರುತ್ತದೆ. ಸೇವಾಭಾವಕ್ಕೆ ಪ್ರತಿಷ್ಠಿತ ಸಂಸ್ಥೆಯ ಗೌರವ. ಹಿರಿಯರು ಆರೋಗ್ಯ ಕಾಪಾಡಿಕೊಳ್ಳಿ. ಶುಭಸಂಖ್ಯೆ:1

ತುಲಾ: ಸೃಜನಾತ್ಮಕ ಕೆಲಸಗಳಿಗೆ ಉತ್ತಮ ದಿನ. ಹೊಸ ಯೋಜನೆ ಆರಂಭಕ್ಕೆ ಅನುಕೂಲ. ನಿಮ್ಮ ಪ್ರತಿಭೆಗೆ ತಕ್ಕಂತೆ ವೇದಿಕೆ ಸಿಗಲಿದೆ. ಶುಭಸಂಖ್ಯೆ:3

ವೃಶ್ಚಿಕ: ಕೃಷಿ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಹಾಯ ಮಾಡುತ್ತವೆ. ಕಚೇರಿ ಕೆಲಸವಾಗಿ ದೂರ ಪ್ರಯಾಣ. ಶುಭಸಂಖ್ಯೆ:2

ಧನಸ್ಸು: ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬಂದೀತು. ಗೃಹ ನಿರ್ಮಾಣದಲ್ಲಿ ಪ್ರಗತಿ. ಹೊಸ ಪ್ರಾಜೆಕ್ಟ್ ಗೆ ಸಹೋದ್ಯೋಗಿಗಳ ನೆರವು. ಶುಭಸಂಖ್ಯೆ:9

ಮಕರ: ಹಣಕಾಸು ವ್ಯವಹಾರ ಯಶ. ಬಟ್ಟೆ ವಕ್ಷಿುಳಿಗೆಯವರ ಮೇಲೆ ಗ್ರಾಹಕರ ವಿಶ್ವಾಸ. ಉದ್ಯೋಗಸ್ಥ ಮಹಿಳೆಗೆ ಆರ್ಥಿಕ ಸ್ಥಿತಿ ಉತ್ತಮ. ಶುಭಸಂಖ್ಯೆ:4

ಕುಂಭ: ನಿಮ್ಮ ಮಾತಿನ ಶಕ್ತಿಯಿಂದ ಪ್ರಶಂಸೆ ಗಳಿಸುವಿರಿ. ಸಂಗಾತಿಗೆ ಕೆಲಸದಲ್ಲಿ ಸಹಾಯ ಮಾಡುವಿರಿ. ಹೊಸ ಸಂಪರ್ಕಗಳು ಲಾಭಕರ.ಶುಭಸಂಖ್ಯೆ:4

ಮೀನ: ಸಹಾಯ ಮಾಡಿದ ಸಮಾಧಾನ. ವಾಣಿಜ್ಯೋದ್ಯಮಿಗಳಿಗೆ ಸಮಾಜದಿಂದ ಗೌರವ ಲಭ್ಯ. ಧಾರ್ವಿುಕ ಕಾರ್ಯದಿಂದ ನೆಮ್ಮದಿ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net