ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ

ಜ್ಯೋತಿಷ್ಯ
ಜ್ಯೋತಿಷ್ಯ
Published on
ಮೇಷ: ಕಲಾಕ್ಷೇತ್ರದಲ್ಲಿ ಪದವಿ ಪ್ರಾಪ್ತಿ. ಖಾಸಗಿ ಉದ್ಯಮದ ಸ್ಥಾಪನೆಗೆ ನಿರ್ಧಾರ ಕೈಗೊಳ್ಳುವಿರಿ. ವಿವಾಹದ ಪ್ರಯತ್ನ ಫಲ ಕೊಡಲಿದೆ. ಶುಭಸಂಖ್ಯೆ: 9
ವೃಷಭ: ದಂತ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ. ಕಾನೂನು ಸಲಹೆಗಾರರಿಗೆ ಆರ್ಥಿಕವಾಗಿ ಲಾಭ. ತರಕಾರಿ, ಹಣ್ಣುಗಳ ಮಾರಾಟದಲ್ಲಿ ಪ್ರಗತಿ. ಶುಭಸಂಖ್ಯೆ: 3
ಮಿಥುನ: ಪಿತ್ರಾರ್ಜಿತ ಆಸ್ತಿ ವಿವಾದ ಬಗೆಹರಿಯಲಿದೆ. ಅಲಂಕಾರಿಕ ವಸ್ತು ಖರೀದಿಯಲ್ಲಿ ಲಾಭ. ಬೃಹತ್ ವಾಹನಗಳ ಮಾಲೀಕರಿಗೆ ಪ್ರಗತಿ. ಶುಭಸಂಖ್ಯೆ: 5
ಕಟಕ: ವಿಚ್ಛೇದಿತರಿಗೆ ವಿವಾಹ ಯೋಗ. ಗೃಹಬಳಕೆ ವಸ್ತುಗಳ ತಯಾರಿಕೆಯಲ್ಲಿ ಪ್ರಗತಿ. ತೆಂಗಿನಕಾಯಿ, ಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:9
ಸಿಂಹ: ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಧಾರ್ವಿುಕ ಕ್ಷೇತ್ರದ ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಮನೆ ಖರೀದಿಗೆ ಇದು ಸೂಕ್ತ ಕಾಲ. ಶುಭಸಂಖ್ಯೆ:1
ಕನ್ಯಾ: ವಿದೇಶ ಪ್ರಯಾಣಕ್ಕಿದ್ದ ಸಮಸ್ಯೆ ನಿವಾರಣೆೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ:4
ತುಲಾ: ಕೆಲಸಗಳು ಮರುಚಾಲನೆ ಪಡೆದುಕೊಳ್ಳಲಿದೆ. ಅಡಿಕೆ, ತೆಂಗು ಕೃಷಿಕರಿಗೆ ಶುಭದಿನ. ಸಿನಿಮಾ ಸಾಹಿತಿಗಳಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 4
ವೃಶ್ಚಿಕ: ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ. ದುಬಾರಿ ವಸ್ತುಗಳ ಖರೀದಿಗೆ ಹಣ ಖರ್ಚು. ಟ್ರಾವೆಲ್ಸ್ ಮಾಲೀಕರಿಗೆ ಲಾಭ. ಶುಭಸಂಖ್ಯೆ: 2
ಧನಸ್ಸು: ಕೊಟ್ಟ ಸಾಲ ತಿರುಗಿ ಬರಲಿದೆ. ಪುಣ್ಯಕ್ಷೇತ್ರ ಸಂದರ್ಶನ. ಪ್ರಭಾವಿ ವ್ಯಕ್ತಿಗಳಿಂದ ಉದ್ಯೋಗ ಪ್ರಾಪ್ತಿ. ದಿನಾಂತ್ಯದ ವೇಳೆಗೆ ಶುಭಸುದ್ದಿ. ಶುಭಸಂಖ್ಯೆ: 7
ಮಕರ: ಲೆಕ್ಕ ಪರಿಶೋಧಕ ಹುದ್ದೆಯಿಂದ ಹಣ ಗಳಿಸುವಿರಿ. ಸ್ನೇಹಿತರೊಂದಿಗೆ ಪ್ರಯಾಣ. ದಾಂಪತ್ಯ ಜೀವನದ ಮನಸ್ತಾಪ ಅಂತ್ಯ. ಶುಭಸಂಖ್ಯೆ:1
ಕುಂಭ: ಆಸ್ತಿಗೆ ಸಂಬಂಧಿಸಿದ ಮಾತುಕತೆ ಫಲಪ್ರದ. ಪುಣ್ಯಕಾರ್ಯಗಳಿಗೆ ದಾನ ಧರ್ಮದ ಅವಕಾಶ. ದಿನಸಿ ಅಂಗಡಿ ಮಾಲೀಕರಿಗೆ ಲಾಭ. ಶುಭಸಂಖ್ಯೆ: 1
ಮೀನ: ಸ್ನೇಹಿತನ ನೆರವಿಂದ ಸಂಕಷ್ಟದಿಂದ ಪಾರು. ಉದ್ಯಮಿ ಮಹಿಳೆಯರಿಗೆ ಶುಭ. ಸಂಬಂಧಪಡದ ವಿಷಯದಲ್ಲಿ ತಲೆತೂರಿಸಬೇಡಿ. ಶುಭಸಂಖ್ಯೆ:3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net