ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವದಲ್ಲಿ ಅಭಿವೃದ್ಧಿ

ಜ್ಯೋತಿಷ್ಯ
ಜ್ಯೋತಿಷ್ಯ
Published on
ಮೇಷ: ಮದುವೆ ಮಾತುಕತೆಗೆ ಕುಟುಂಬದ ಹಿರಿಯರಿಂದ ಸಹಕಾರ. ಭಿನ್ನಾಭಿಪ್ರಾಯ ದೂರ. ಆಸ್ತಿ ವ್ಯವಹಾರದಲ್ಲಿ ಎಚ್ಚರದಿಂದಿರಿ. ಶುಭಸಂಖ್ಯೆ:5
ವೃಷಭ: ಉದ್ಯೋಗದಲ್ಲಿ ಸ್ಥಿರತೆ. ಗೃಹ ನಿರ್ವಣದ ಬಾಕಿ ಕೆಲಸ ಪೂರ್ಣಗೊಳ್ಳುವುದು. ಮನೆ,ನಿವೇಶನ ಖರೀದಿ ಇಂದು ಒಳ್ಳೆಯ ದಿನ.

ಶುಭಸಂಖ್ಯೆ: 6

ಮಿಥುನ: ಉದ್ಯೋಗ ಬದಲಾವಣೆಗೆ ಯೋಚಿಸುತ್ತಿರುವವರಿಗೆ ಹೊಸ ಅವಕಾಶ. ದಾಂಪತ್ಯ ಜೀವನದಲ್ಲಿ ಪರಸ್ಪರ ಸಾಮರಸ್ಯವೃದ್ಧಿ. ಶುಭಸಂಖ್ಯೆ: 4
ಕಟಕ: ಕೆಲಸದ ಒತ್ತಡ ಹೆಚ್ಚಾದರೂ ಸಾಮರ್ಥ್ಯದಿಂದ ನಿಭಾಯಿಸುವಿರಿ. ಕುಟುಂಬದ ಹಿರಿಯರ ಆರೋಗ್ಯ, ಅಗತ್ಯಕ್ಕೆ ಗಮನ ಕೊಡಿ.ಶುಭಸಂಖ್ಯೆ:9
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ದೊರೆಯಲಿದೆ. ಹೊಸ ಪರಿಚಯವೊಂದು ಪ್ರಯೋಜನಕ್ಕೆ ಬರಲಿದೆ. ಶುಭಸಂಖ್ಯೆ: 7
ಕನ್ಯಾ: ಉದ್ಯೋಗದಲ್ಲಿ ತರಬೇತಿ ಪಡೆಯಲು ದೂರ ಪ್ರಯಾಣ. ಗೃಹ ನಿರ್ವಣದಲ್ಲಿ ನಿಧಾನಗತಿ. ಆಸ್ತಿ ಖರೀದಿಯಲ್ಲಿ ಆತುರ ಬೇಡ. ಶುಭಸಂಖ್ಯೆ:1
ತುಲಾ: ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಮುಗಿಸುವಿರಿ. ಸಂಗಾತಿಯ ನೆರವಿಂದ ಆರ್ಥಿಕ ಮುಗ್ಗಟ್ಟಿ ನಿಂದ ಹೊರಬರುವಿರಿ. ಶುಭಸಂಖ್ಯೆ:2
ವೃಶ್ಚಿಕ: ಉದ್ಯೋಗದಲ್ಲಿ ಸ್ಪರ್ಧೆ ಹೆಚ್ಚಾದರೂ ಸ್ಥಾನವನ್ನು ಕಾಪಾಡಿಕೊಳ್ಳುವಿರಿ. ನಿರ್ಧಾರಕ್ಕೆ ಮುನ್ನ ಕುಟುಂಬದವರ ಅಭಿಪ್ರಾಯ ಕೇಳಿ. ಶುಭಸಂಖ್ಯೆ:4
ಧನಸ್ಸು: ವಿವಾಹದ ಮಾತುಕತೆ ಫಲಪ್ರದ. ಕುಟುಂಬದವರೊಂದಿಗೆ ಪುಣ್ಯಕ್ಷೇತ್ರ ದರ್ಶನ. ಆಸ್ತಿ ಹೂಡಿಕೆಗೆ ಅತ್ಯಂತ ಒಳ್ಳೆಯ ಸಮಯ. ಶುಭಸಂಖ್ಯೆ:8
ಮಕರ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿಧಾನಗತಿಯಿದ್ದರೂ ಸ್ಥಿರ ಪ್ರಗತಿ ಕಾಣಲಿದೆ. ಮದುವೆ ವಿಚಾರದಲ್ಲಿ ಅಡೆತಡೆ ನಿವಾರಣೆ. ಶುಭಸಂಖ್ಯೆ: 6
ಕುಂಭ: ಹೊಸದಾದ ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ. ಆಸ್ತಿ ವ್ಯವಹಾರದಲ್ಲಿ ಪರಿಶೀಲನೆ ಮಾಡಿಯೇ ಮುಂದುವರಿಯಿರಿ. ಶುಭಸಂಖ್ಯೆ: 6
ಮೀನ: ಬಾಕಿ ಉಳಿದ ಕೆಲಸ ಮುಗಿಸಲು ಉತ್ತಮ ದಿನ. ಮನೆಯಲ್ಲಿ ಶುಭಕಾರ್ಯದ ಸೂಚನೆ. ಆಸ್ತಿ ಸಂಬಂಧಿ ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ:1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net