

ಮೇಷ: ಹೊಸಹುದ್ದೆಯ ನಿರ್ವಹಣೆಯಲ್ಲಿ ಯಶಸ್ವಿ ಆಗುವಿರಿ. ಮಾಧ್ಯಮದವರಿಗೆ ಸನ್ಮಾನ. ಹಾಸ್ಯ ಭಾಷಣಕಾರರಿಗೆ ವಿಶೇಷ ದಿನ. ಶುಭಸಂಖ್ಯೆ:1
ವೃಷಭ: ಅವಶ್ಯಕತೆಗೆ ತಕ್ಕಂತೆ ಆದಾಯ ಬರಲಿದೆ. ಸಾಲ ಮರುಪಾವತಿ ಮಾಡುವಿರಿ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗಲಿದೆ. ಶುಭಸಂಖ್ಯೆ:7
ಮಿಥುನ: ಸಾಮಾಜಿಕ ಸೇವೆಗಳಲ್ಲಿ ನೆಮ್ಮದಿ ದೊರೆಯಲಿದೆ. ಕುಟುಂಬದಲ್ಲಿ ಸಂತೋಷದ ಸಮಯ. ಆಸ್ತಿ ವಿವಾದದಲ್ಲಿ ನಿಮಗೆ ಜಯ. ಶುಭಸಂಖ್ಯೆ: 9
ಕಟಕ: ಟ್ರಾವೆಲ್ ಏಜೆನ್ಸಿಯವರಿಗೆ ಚಾಲಕರ ಅಭಾವ ಕಾಡಲಿದೆ. ಮಕ್ಕಳ ನಡವಳಿಕೆಯಿಂದ ಆತಂಕ. ಸ್ವಂತ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:2
ಸಿಂಹ: ಪದವಿಪ್ರಾಪ್ತಿಯಲ್ಲಿ ಇದ್ದ ಅಡ್ಡಿ ನಿವಾರಣೆ. ನವದಂಪತಿಗೆ ಸಂತಾನ ಪ್ರಾಪ್ತಿಯ ಮುನ್ಸೂಚನೆ. ಹೂವು & ಹಣ್ಣು ಅಂಗಡಿಯವರಿಗೆ ಲಾಭ. ಶುಭಸಂಖ್ಯೆ: 8
ಕನ್ಯಾ: ಕಾರ್ಯಸಾಧನೆಯಿಂದ ಸಂಸ್ಥೆಗೆ ಲಾಭ. ಲೇವಾದೇವಿ ವ್ಯವಹಾರ ಚೆನ್ನಾಗಿ ಇರಲಿದೆ. ನಿಮ್ಮ ಪ್ರತಿಭೆಗೆ ಸಾರ್ವಜನಿಕವಾಗಿ ಪ್ರಶಂಸೆ. ಶುಭಸಂಖ್ಯೆ: 6
ತುಲಾ: ಮನೆನಿರ್ಮಾಣ ಮುಕ್ತಾಯ ಹಂತಕ್ಕೆ. ಸಾಹಸ ಕಲಾವಿದರಿಗೆ ಯಶಸ್ಸು. ಗೃಹ ಕೈಗಾರಿಕೆ ಸ್ಥಾಪನೆಗೆ ಸ್ನೇಹಿತರಿಂದ ಧನಸಹಾಯ. ಶುಭಸಂಖ್ಯೆ:4
ವೃಶ್ಚಿಕ: ಗೃಹೋಪಯೋಗಿ ವ್ಯವಹಾರದಲ್ಲಿ ಲಾಭದ ಪ್ರಮಾಣ ಹೆಚ್ಚಲಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗಿ. ಸವಾಲು ಎದುರಿಸುವಿರಿ. ಶುಭಸಂಖ್ಯೆ:7
ಧನಸ್ಸು: ಬದಲಾದ ಸನ್ನಿವೇಶದಿಂದ ನಿಮ್ಮ ಪ್ರಗತಿಗೆ ಅನುಕೂಲ ಆಗಲಿದೆ. ತಾಯಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಾಣಲಿದೆ. ಶುಭಸಂಖ್ಯೆ: 7
ಮಕರ: ಮಕ್ಕಳ ಪ್ರಗತಿಯಿಂದ ಸಂತಸ. ಕೆಲಸದ ಒತ್ತಡದಿಂದ ಪ್ರಮುಖ ಕಾರ್ಯಕ್ರಮದಿಂದ ವಂಚಿತರಾಗುವಿರಿ. ತೀರ್ಥಕ್ಷೇತ್ರ ದರ್ಶನ. ಶುಭಸಂಖ್ಯೆ:4
ಕುಂಭ: ರಸಸಂಜೆ ಆಯೋಜಕರಿಗೆ ಅಧಿಕ ಲಾಭ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಾಟ್ಯ ಕಲಾವಿದರಿಗೆ ಉತ್ತಮ ಹೆಸರು. ಶುಭಸಂಖ್ಯೆ:1
ಮೀನ: ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಹಳೆಯ ಸ್ನೇಹಿತರೊಂದಿಗೆ ಔತಣ ಕೂಟ. ಉದರ ಸಂಬಂಧಿ ರೋಗ ಗುಣಮುಖವಾಗಲಿದೆ. ಶುಭಸಂಖ್ಯೆ: 6