ಮೇಷ: ವಿರೋಧಿಗಳನ್ನು ಮಟ್ಟ ಹಾಕುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಶುಭಸಂಖ್ಯೆ: 6.ವೃಷಭ: ಬಟ್ಟೆ ವ್ಯಾಪಾರಿಗಳಿಗೆ ಧನಾಗಮನ. ಟ್ರಾವೆಲ್ಸ್ನವರಿಗೆ ಚಾಲಕರ ಅಭಾವ ಕಾಡಲಿದೆ. ಹಿರಿಯರಿಂದ ಹಿತನುಡಿ ಕೇಳುವಿರಿ. ಶುಭಸಂಖ್ಯೆ: 7.ಮಿಥುನ: ಬೃಹತ್ ವಾಹನ ಖರೀದಿಸುವ ಯೋಗವಿದೆ. ಅಮೂಲ್ಯ ವಸ್ತುಗಳ ಸಂಗ್ರಹ. ನಾಟ್ಯ ತರಬೇತುದಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7.ಕಟಕ: ಕುಟುಂಬದಲ್ಲಿ ಮಗಳ ಮದುವೆಯ ಸಂಭ್ರಮ. ಗೃಹ ನಿರ್ಮಾಣ ಕಾರ್ಯ ಪ್ರಾರಂಭಿಸುವಿರಿ. ಮಾತಿನ ಮೇಲೆ ಹಿಡಿತ ಅಗತ್ಯ. ಶುಭಸಂಖ್ಯೆ:4.ಸಿಂಹ: ದೃಷ್ಟಿದೋಷದ ತೊಂದರೆ ವಾಸಿಯಾಗಲಿದೆ. ಕೊಟ್ಟ ಹಣ ಸಕಾಲಕ್ಕೆ ತಿರುಗಿ ಬರಲಿದೆ. ಕಾಫಿ ಬೆಳೆಗಾರರಿಗೆ ಲಾಭದಲ್ಲಿ ಏರಿಕೆ. ಶುಭಸಂಖ್ಯೆ:9.ಕನ್ಯಾ: ಮನಸ್ಸಿನ ಗೊಂದಲ ಪರಿಹಾರ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ಸಹಾಯ. ದುಶ್ಚಟದಿಂದ ದೂರವಿರಿ. ಶುಭಸಂಖ್ಯೆ:6.ತುಲಾ: ಇಷ್ಟ ವಸ್ತುಗಳನ್ನು ಖರೀದಿಸುವಿರಿ. ಭೂಲಾಭ. ಇಷ್ಟಪಟ್ಟು ಕಲಿಯುವ ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ತಾಳ್ಮೆ ಅಗತ್ಯ. ಶುಭಸಂಖ್ಯೆ:3.ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಕುಟುಂಬದ ಸಂಭ್ರಮದಿಂದ ವಂಚಿತರಾಗುವಿರಿ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ:2.ಧನುಸ್ಸು: ತೀರ್ಥ ಕ್ಷೇತ್ರಗಳ ದರ್ಶನ ಮಾಡುವಿರಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ಗೃಹ ನೋಂದಣಿ ಕೆಲಸದಲ್ಲಿ ಜಯವಾಗಲಿದೆ. ಶುಭಸಂಖ್ಯೆ: 7.ಮಕರ: ಶುಭದಾಯಕ ಸುದ್ದಿ ಕೇಳುವಿರಿ. ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೈಗೊಂಡ ಕೆಲಸ ಪೂರ್ಣವಾಗಲಿದೆ. ಕೃಷಿಯಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 1.ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಲಾಭ. ರಾಜಕೀಯರಂಗದವರಿಗೆ ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 1.ಮೀನು: ಕಚೇರಿಯಲ್ಲಿ ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ಮನೆಯಲ್ಲಿ ನೆಮ್ಮದಿ. ಅನಗತ್ಯ ಹಸ್ತಕ್ಷೇಪ ಮಾಡಬೇಡಿ. ಶುಭಸಂಖ್ಯೆ: 8