ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಶುಭ ಫಲ

Nitya Bhavishya
Nitya Bhavishya
Published on
ಮೇಷ: ಇಂದಿನ ಗ್ರಹಸ್ಥಿತಿ ಉತ್ಸಾಹ ನೀಡುವಂತಿದೆ. ಐಟಿ-ಬಿಟಿ ಮತ್ತು ಖಾಸಗಿ ಉದ್ಯೋಗದಲ್ಲಿ ಹೊಸ ಅವಕಾಶಗಳು ಕಾಣಿಸಬಹುದು. ಶುಭಸಂಖ್ಯೆ:9
ವೃಷಭ: ಚಂದ್ರನ ಅನುಕೂಲದಿಂದ ಕೆಲಸಗಳಲ್ಲಿ ಸ್ಥಿರತೆ ದೊರೆಯುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಶುಭಸಂಖ್ಯೆ: 1
ಮಿಥುನ: ಬುಧನ ಪ್ರಭಾವದಿಂದ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬುದ್ಧಿವಂತಿಕೆಯ ಕೆಲಸಗಳಲ್ಲಿ ಪ್ರಗತಿ. ವಿದ್ಯಾರ್ಥಿ ಗಳಿಗೆ ಅಧ್ಯಯನದಲ್ಲಿ ಆಸಕ್ತಿ. ಶುಭಸಂಖ್ಯೆ:2
ಕಟಕ: ಚಂದ್ರನ ಅನುಗ್ರಹದಿಂದ ಕುಟುಂಬ, ಕಚೇರಿ ಕೆಲಸಗಳಲ್ಲಿ ಸಹಕಾರ ಸಿಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಕಾರ್ಯಸಾಧನೆ. ಶುಭಸಂಖ್ಯೆ:7
ಸಿಂಹ: ಮೇಲಧಿಕಾರಿಗಳ ಸಂಪರ್ಕ ಹೆಚ್ಚಾಗಬಹುದು. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಆಹಾರ ಪದಾರ್ಥ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:9
ಕನ್ಯಾ: ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ. ಅಡಿಕೆ ಕೃಷಿಯಲ್ಲಿ ಉತ್ತಮ ಫಲ. ದಿನಸಿ ಅಂಗಡಿ ಮಳಿಗೆಯ ವ್ಯಾಪಾರದಲ್ಲಿ ಆದಾಯ ಹೆಚ್ಚುವ ಸೂಚನೆ. ಶುಭಸಂಖ್ಯೆ: 3
ತುಲಾ: ಶುಕ್ರನ ಪ್ರಭಾವದಿಂದ ಮಹಿಳೆಯರಿಗೆ ಅನಿರೀಕ್ಷಿತ ಧನಲಾಭ. ಸರ್ಕಾರಿ ಉದ್ಯೋಗದಲ್ಲಿ ಗೌರವ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:2
ವೃಶ್ಚಿಕ: ರಕ್ಷಣಾ ಇಲಾಖೆಯಲ್ಲಿ ಉದ್ಯೋಗ. ವ್ಯವಹಾರದಲ್ಲಿ ಹೊಸ ಪ್ರಯತ್ನ ಯಶಸ್ವಿ. ಗೃಹ ನಿರ್ವಣಕ್ಕೆ ಚಾಲನೆ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ:3
ಧನಸ್ಸು: ಗುರುವಿನ ಅನುಗ್ರಹದಿಂದ ವಿದ್ಯಾಭ್ಯಾಸಕ್ಕೆ ವಿಶೇಷ ಅವಕಾಶ ದೊರೆಯಲಿದೆ. ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಶುಭ ಫಲ. ಶುಭಸಂಖ್ಯೆ:4
ಮಕರ: ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ಶ್ರಮ ಹೆಚ್ಚಾದರೂ ಉತ್ತಮ ಫಲ. ಸರ್ಕಾರಿ ಉದ್ಯೋಗ ಪ್ರಾಪ್ತಿಗೆ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ:9
ಕುಂಭ: ಹಣಕಾಸಿನ ಅನುಕೂಲದಿಂದ ಹೊಸ ಯೋಜನೆಗಳ ಆರಂಭ. ಮೊಬೈಲ್ ಮತ್ತು ಕಂಪ್ಯೂಟರ್ ವ್ಯಾಪಾರದಲ್ಲಿ ಲಾಭದ ಸೂಚನೆ. ಶುಭಸಂಖ್ಯೆ: 2
ಮೀನ: ತೀರ್ಥಯಾತ್ರೆಯಿಂದ ಸಮಾಧಾನ. ಉದ್ಯೋಗದಲ್ಲಿ ಮಿಶ್ರ ಫಲ. ಸಿಮೆಂಟ್, ಮರಳು ವ್ಯವಹಾರದಲ್ಲಿ ಸಾಧಾರಣ ಆದಾಯ. ಶುಭಸಂಖ್ಯೆ:5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net