ನಿತ್ಯ ಭವಿಷ್ಯ: ಈ ರಾಶಿಯವರಿಂದು ಧಾರ್ವಿುಕ ಕಾರ್ಯದಿಂದ ಸಮಾಧಾನ ದೊರೆಯುತ್ತದೆ

Astrology
ಜ್ಯೋತಿಷ್ಯ
Published on: 

ಮೇಷ: ಸಾವಯವ ಕೃಷಿಯಿಂದ ಲಾಭಗಳಿಸುವಿರಿ. ವೀಸಾ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 2

ವೃಷಭ: ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವುದು. ಧಾರ್ವಿುಕ ಕಾರ್ಯದಿಂದ ಸಮಾಧಾನ. ಹೋಟೆಲ್ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ:9

ಮಿಥುನ: ಕುಟುಂಬದ ಭಿನ್ನಾಭಿಪ್ರಾಯ ತಿಳಿಯಾಗಿ ಮಾನಸಿಕ ತೃಪ್ತಿ. ಅಪರಿಚಿತರಿಂದ ಮೋಸ. ಪೀಠೋಪಕರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ:6

ಕಟಕ: ವಿವಾಹದ ಸಮಸ್ಯೆ ಅಂತೂ ಬಗೆಹರಿಯಲಿದೆ. ಸಾರಿಗೆ ಇಲಾಖೆಯ ನೌಕರರಿಗೆ ವರ್ಗಾವಣೆ. ಸಹಕಾರಿ ಕ್ಷೇತ್ರದಲ್ಲಿ ಪದವಿ ಪ್ರಾಪ್ತಿ. ಶುಭಸಂಖ್ಯೆ:8

ಸಿಂಹ: ಆಸ್ತಿ ವಿಚಾರದಲ್ಲಿ ಗೊಂದಲ. ಗೃಹ ನಿರ್ವಣದಲ್ಲಿದ್ದ ಅಡೆತಡೆ ನಿವಾರಣೆ. ಮೆಡಿಕಲ್ ಶಾಪ್ ಮಾಲೀಕರಿಗೆ ಅಧಿಕ ಹಣ ಗಳಿಕೆ. ಶುಭಸಂಖ್ಯೆ:8

ಕನ್ಯಾ: ಟ್ರಾವೆಲ್ಸ್ ಏಜೆಂಟರಿಗೆ ಪ್ರಗತಿಯ ದಿನ. ಸ್ವಂತ ಭೂಮಿಯಲ್ಲಿ ಮನೆ ನಿವರ್ವಿುಸಲು ನಿರ್ಧರಿಸುವಿರಿ. ತೀರ್ಥಕ್ಷೇತ್ರಗಳ ಸಂದರ್ಶನ. ಶುಭಸಂಖ್ಯೆ:2

ತುಲಾ: ಆಯುರ್ವೆದ ವೈದ್ಯರಿಗೆ ಪ್ರಯಾಣ ಸಾಧ್ಯತೆ. ವಿದೇಶದಲ್ಲಿ ಓದಬೇಕೆಂಬ ಕನಸಿನ ಸಾಕಾರ. ಕೃಷಿ ಉಪಕರಣ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5

ವೃಶ್ಚಿಕ: ಕಾನೂನು ತಜ್ಞರಿಗೆ ಉನ್ನತ ವ್ಯಕ್ತಿಗಳ ಸಂಪರ್ಕ. ಧಾರ್ವಿುಕ ಮುಖಂಡರಿಗೆ ಒತ್ತಡ. ಲೆಕ್ಕಪತ್ರ ಪರಿಶೋಧಕರಿಗೆ ಆರ್ಥಿಕ ಅಭಿವೃದ್ಧಿ. ಶುಭಸಂಖ್ಯೆ: 7

ಧನಸ್ಸು: ಕೇಂದ್ರ ಸರ್ಕಾರಿ ಸಿವಿಲ್ ಪರೀಕ್ಷೆಯಲ್ಲಿ ತೇರ್ಗಡೆ. ಕಾಂಪ್ಲೆಕ್ಸ್ ಮಾಲೀಕರಿಗೆ ಶುಭ. ಹೊಸ ಪೆಟ್ರೋಲ್ ಬಂಕ್ ಸ್ಥಾಪನೆಗೆ ಅನುಮತಿ. ಶುಭಸಂಖ್ಯೆ: 6

ಮಕರ: ಆಹಾರ ಧಾನ್ಯಗಳ ಮಾರಾಟದಲ್ಲಿ ಪ್ರಗತಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಸ್ನಾಯು ಸಂಬಂಧಿತ ರೋಗ ನಿವಾರಣೆ. ಶುಭಸಂಖ್ಯೆ:9

ಕುಂಭ: ಯೋಗ ಶಿಕ್ಷಣ ನಡೆಸುವವರಿಗೆ ಪ್ರಗತಿ. ನಟನಾ ಕ್ಷೇತ್ರದಲ್ಲಿ ಹೊಸ ಅವಕಾಶ. ಶಿಕ್ಷಣ ಸಂಸ್ಥೆಗಳ ಪ್ರಮುಖರಿಗೆ ಸಮಾಜದಲ್ಲಿ ಗೌರವ. ಶುಭಸಂಖ್ಯೆ: 4

ಮೀನ: ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗುವಿರಿ. ಹಣಕಾಸಿನ ಮುಗ್ಗಟ್ಟು ನಿವಾರಣೆ ಆಗಲಿದೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net