ನಿತ್ಯ ಭವಿಷ್ಯ: ಈ ರಾಶಿಯವರಿಂದು ಹೂಡಿಕೆಯಲ್ಲಿ ಅಧಿಕ ಲಾಭ

ಜ್ಯೋತಿಷ್ಯ
ಜ್ಯೋತಿಷ್ಯ
Published on: 

ಮೇಷ: ಸರ್ಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡುವಿರಿ. ವಿವಾಹದ ವಿಷಯದಲ್ಲಿ ದೃಢ ನಿರ್ಧಾರ ಕೈಗೊಳ್ಳಿ. ಕುಶಲ ಕೆಲಸಕ್ಕೆ ವಿಶೇಷ ಪುರಸ್ಕಾರ. ಶುಭಸಂಖ್ಯೆ: 7

ವೃಷಭ: ಕಬ್ಬು ಬೇಸಾಯಗಾರರಿಗೆ ಶುಭಕರ ದಿನ. ಭೂ ವ್ಯವಹಾರದ ಹೊಸ ಯೋಜನೆ ಫಲಪ್ರದ. ಅನವಶ್ಯಕ ಖರ್ಚನ್ನು ನಿಯಂತ್ರಿಸಿ. ಶುಭಸಂಖ್ಯೆ: 1

ಮಿಥುನ: ಬಾಕಿ ಕೆಲಸವನ್ನು ಸಹನೆಯಿಂದ ಮುಗಿಸಿ. ಸ್ವ -ಉದ್ಯೋಗಸ್ಥ ಮಹಿಳೆಯರಿಗೆ ಲಾಭ. ಪ್ರಖರ ಭಾಷಣಕಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7

ಕಟಕ: ಖಾದಿ ಬಟ್ಟೆಗಳ ಮಾರಾಟದಲ್ಲಿ ಲಾಭ. ಸಿಹಿ ಪದಾರ್ಥ ಮಾರಾಟದಲ್ಲಿ ಹಣ ಗಳಿಕೆ. ಆಸ್ತಿ ಖರೀದಿಯಲ್ಲಿ ದುಡುಕಿನ ನಿರ್ಧಾರ ಬೇಡ. ಶುಭಸಂಖ್ಯೆ: 3

ಸಿಂಹ: ಆಸ್ತಿ ಖರೀದಿಯ ನಿರ್ಧಾರ ಮುಂದೂಡಿ. ಹಣ ಹೂಡಿಕೆಯಲ್ಲಿ ಲಾಭಗಳಿಸುವಿರಿ. ವ್ಯಾಪಾರ ಒಪ್ಪಂದಗಳು ಫಲಪ್ರದವಾಗಲಿವೆ. ಶುಭಸಂಖ್ಯೆ: 2

ಕನ್ಯಾ: ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ. ಹಿರಿಯರಿಗೆ ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ಧಿ. ಶುಭಸಂಖ್ಯೆ: 6

ತುಲಾ: ಯೋಗ ಶಿಕ್ಷಕರಿಗೆ ಬೇಡಿಕೆ ಹೆಚ್ಚಲಿದೆ. ಆಸ್ತಿ ಖರೀದಿಗೆ ಸುಸಮಯ. ನಟನಾ ಕ್ಷೇತ್ರದಲ್ಲಿ ಪ್ರಗತಿ. ಕುಲ ದೇವರ ಪೂಜೆ, ಸ್ಮರಣೆ ಮಾಡಿ. ಶುಭಸಂಖ್ಯೆ: 2

ವೃಶ್ಚಿಕ: ರಾಜಕಾರಣಿಗಳಿಗೆ ಪದವಿ ಪ್ರಾಪ್ತಿಯಾಗಲಿದೆ. ಶಿಕ್ಷಕರಿಗೆ ವರ್ಗಾವಣೆಯಾಗುವ ಸಾಧ್ಯತೆ. ವಿದೇಶದಲ್ಲಿರುವ ಮಕ್ಕಳಿಂದ ಸಿಹಿ ಸುದ್ದಿ. ಶುಭಸಂಖ್ಯೆ: 9

ಧನಸ್ಸು: ಕೇಂದ್ರ ಸರ್ಕಾರಿ ನೌಕರರಿಗೆ ಬಡ್ತಿ. ಗೃಹ ನಿರ್ವಣದಲ್ಲಿ ಕೆಲಸಗಾರರ ಸಮಸ್ಯೆ ಪರಿಹಾರ. ಬಟ್ಟೆ ವ್ಯಾಪಾರದಲ್ಲಿ ಲಾಭಗಳಿಸುವಿರಿ. ಶುಭಸಂಖ್ಯೆ: 7

ಮಕರ: ಬ್ಯಾಂಕಿಂಗ್ ವ್ಯವಹಾರ ಸುಗಮವಾಗಲಿದೆ. ವಾಹನ ದುರಸ್ತಿಗೆ ಹೆಚ್ಚು ಖರ್ಚಾಗಲಿದೆ. ಸೌಂದರ್ಯವರ್ಧಕ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 2

ಕುಂಭ: ಹೈನೋದ್ಯಮದಲ್ಲಿ ಪ್ರಗತಿ. ಔಷಧ ಮಾರಾಟದಲ್ಲಿ ತೊಡಕು. ಧಾರ್ವಿುಕ ವ್ಯಕ್ತಿಗಳೊಂದಿಗೆೆ ಚರ್ಚೆ. ಕಾನೂನು ಅಭ್ಯಾಸದಲ್ಲಿ ಯಶ. ಶುಭಸಂಖ್ಯೆ: 3

ಮೀನ: ದೇವಾಲಯ ಆಡಳಿತ ಮಂಡಳಿಯಲ್ಲಿ ಅಧಿಕಾರ ಪ್ರಾಪ್ತಿ. ವಿದ್ಯುತ್ ಉಪಕರಣಗಳ ತಯಾರಕರಿಗೆ ಶುಭ. ಜೇನು ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net