ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಧಾರ್ವಿುಕ ವ್ಯಕ್ತಿಗಳ ಆಶೀರ್ವಾದ ಲಭಿಸಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on: 

ಮೇಷ: ಕನ್ಯಾನ್ವೇಷಣೆಯಲ್ಲಿ ಯಶಸ್ವಿಯಾಗುವಿರಿ. ಅಪರಿಚಿತರಿಂದ ಸಹಾಯ. ಸಂಶೋಧನಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 5

ವೃಷಭ: ಧಾರ್ವಿುಕ ವ್ಯಕ್ತಿಗಳ ಆಶೀರ್ವಾದ ಲಭಿಸಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಚಿಕ್ಕ ಮನಸ್ತಾಪ. ನವದಂಪತಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ:9

ಮಿಥುನ: ಧನಸ್ಥಾನದ ಗುರುವಿನಿಂದ ಆರ್ಥಿಕ ಚೇತರಿಕೆ. ಪಾಶ್ಚಾತ್ಯ ನೃತ್ಯ ಸಂಯೋಜಕರಿಗೆ ಬೇಡಿಕೆ. ಸಹಕಾರ ಇಲಾಖೆ ನೌಕರರಿಗೆ ವರ್ಗ. ಶುಭಸಂಖ್ಯೆ:2

ಕಟಕ: ಗೃಹ ನಿರ್ಮಾಣಕ್ಕೆ ಚಾಲನೆ. ಮನೆಯಲ್ಲಿ ಶುಭ ಸಮಾರಂಭದ ಸಂಭ್ರಮ. ಅಡಿಕೆ ಮತ್ತು ಏಲಕ್ಕಿ ಕೃಷಿಯಿಂದ ಹಣ ಗಳಿಸುವಿರಿ. ಶುಭಸಂಖ್ಯೆ: 8

ಸಿಂಹ: ಟ್ರಾವೆಲ್ಸ್ ಮಾಲೀಕರಿಗೆ ಒತ್ತಡ ಹೆಚ್ಚಾಗಲಿದೆ. ಮಿತ್ರರ ಸಹಾಯದಿಂದ ಆಪತ್ತಿನಿಂದ ಪಾರಾಗುವಿರಿ. ಅವಿವಾಹಿತರಿಗೆ ಶುಭದಿನ. ಶುಭಸಂಖ್ಯೆ:7

ಕನ್ಯಾ: ಕಾನೂನು, ವಾಣಿಜ್ಯ ವಿದ್ಯಾರ್ಥಿಗಳಿಗೆ ಅಭಿವೃದ್ಧಿ. ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಸಾಮಗ್ರಿ ಮಾರಾಟ ಆರಂಭಿಸಲು ನಿರ್ಧಾರ. ಶುಭಸಂಖ್ಯೆ:1

ತುಲಾ: ವಾಹನ ಬಿಡಿಭಾಗಗಳ ಮಾರಾಟದಲ್ಲಿ ಲಾಭವಿದೆ. ಮನೆ ಖರೀದಿಗೆ ನಿರ್ಧಾರ. ವಾಣಿಜ್ಯ ಸಂಕೀರ್ಣದ ಮಾಲೀಕರಿಗೆ ಶುಭದಿನ. ಶುಭಸಂಖ್ಯೆ:9

ವೃಶ್ಚಿಕ: ಜಲ ಉತ್ಪನ್ನಗಳ ಮಾರಾಟದಲ್ಲಿ ಅನಿರೀಕ್ಷಿತ ಪ್ರಗತಿ. ಕುಟುಂಬದಲ್ಲಿ ಆಸ್ತಿ ವಿವಾದ. ವಕೀಲ ವೃತ್ತಿಯಲ್ಲಿ ಹೆಸರು ಮಾಡುವಿರಿ. ಶುಭಸಂಖ್ಯೆ: 6

ಧನಸ್ಸು: ಕಾಂಡಿಮೆಂಟ್ಸ್, ಸಿಹಿ ತಿಂಡಿ ವ್ಯಾಪಾರದಲ್ಲಿ ಲಾಭ. ಒಳಾಂಗಣ ವಿನ್ಯಾಸಕಾರರಿಗೆ ಧನಲಾಭ. ಕಲಾವಿದರಿಗೆ ವಿಶೇಷ ಅವಕಾಶ. ಶುಭಸಂಖ್ಯೆ:8

ಮಕರ: ರಾಜಕೀಯದವರಿಗೆ ಪದವಿ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗ. ಐಟಿ ಉದ್ಯೋಗದಲ್ಲಿ ಹೊಸ ಪ್ರಾಜೆಕ್ಟ್ ಸಿಗಲಿದೆ. ಶುಭಸಂಖ್ಯೆ:9

ಕುಂಭ: ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ಅಧಿಕ ಲಾಭ. ಚಲನಚಿತ್ರ ಗಾಯಕರಿಗೆ ಉತ್ತಮ ಅವಕಾಶ. ಸರ್ಕಾರಿ ನೌಕರಿ ಸಿಗುವ ಸಾಧ್ಯತೆ. ಶುಭಸಂಖ್ಯೆ: 2

ಮೀನ: ತಾಂತ್ರಿಕ ಮತ್ತು ಸಿಎ ವಿದ್ಯಾರ್ಥಿಗಳಿಗೆ ಪ್ರಗತಿ. ವಾಹನ ದುರಸ್ತಿಗೆ ಹಣ ವ್ಯಯ. ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net