

ಮೇಷ: ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಶ್ರಮಕ್ಕೆ ಮನ್ನಣೆ ಸಿಗಲಿದೆ. ಕಣ್ಣು ಮತ್ತು ಹೊಟ್ಟೆಯ ಸಮಸ್ಯೆ ನಿವಾರಣೆ ಆಗಲಿದೆ. ಶುಭಸಂಖ್ಯೆ: 8
ವೃಷಭ: ಹೊಸ ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ. ವಿವಾದದಲ್ಲಿ ಜಯ ಸಿಗಲಿದೆ. ಹಳೆಯ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 9
ಮಿಥುನ: ಸೃಜನಾತ್ಮಕ ಆಲೋಚನೆ ಕಾರ್ಯಗತವಾಗಲಿದೆ. ಉದ್ಯೋಗ ಬದಲಾವಣೆಗೆ ನಿರ್ಧಾರ. ಹೂಡಿಕೆಯಿಂದ ಹಣ ಸಂಪಾದನೆ. ಶುಭಸಂಖ್ಯೆ: 4
ಕಟಕ: ವೃತ್ತಿ ಕ್ಷೇತ್ರದಲ್ಲಿ ಸವಾಲುಗಳು ಎದುರಾಗಲಿದೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಹಿರಿಯರ ಸಲಹೆ ಅವಶ್ಯಕತೆ ಇದೆ. ಶುಭಸಂಖ್ಯೆ:5
ಸಿಂಹ: ಮಾಡುವ ಕೆಲಸದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ನಿಮ್ಮ ನಾಯಕತ್ವದ ಗುಣಕ್ಕೆ ಪ್ರಶಂಸೆ ಸಿಗಲಿದೆ. ಬಾಕಿ ಹಣ ಕೈಸೇರಲಿದೆ. ಶುಭಸಂಖ್ಯೆ:6
ಕನ್ಯಾ: ಬಟ್ಟೆ ವ್ಯಾಪಾರಿಗಳಿಗೆ ಲಾಭ ಹೆಚ್ಚಾಗಲಿದೆ. ವ್ಯವಹಾರದ ಒಪ್ಪಂದಗಳು ಲಾಭದಾಯಕ. ಉಳಿತಾಯದ ಹಣ ಖರ್ಚಾಗಲಿದೆ. ಶುಭಸಂಖ್ಯೆ:2
ತುಲಾ: ವೃತ್ತಿ ಜೀವನದಲ್ಲಿ ಇಂದು ಅತ್ಯುತ್ತಮ ದಿನ. ಆಸ್ತಿ ಖರೀದಿಗೆ ಯೋಜನೆ ರೂಪಿಸಿ. ಕುಟುಂಬ ಕಲಹ ಬಗೆಹರಿದು ನಿರಾಳವೆನಿಸಲಿದೆ. ಶುಭಸಂಖ್ಯೆ: 8
ವೃಶ್ಚಿಕ: ಮನೆಬದಲಾವಣೆಗೆ ನಿರ್ಧಾರ. ಹಣಕಾಸಿನ ವ್ಯವಹಾರದಲ್ಲಿ ಹಿಡಿತವಿರಲಿ. ಕುಟುಂಬದಲ್ಲಿ ಶುಭಕಾರ್ಯ ನಡೆಯುವ ಸಾಧ್ಯತೆ. ಶುಭಸಂಖ್ಯೆ: 4
ಧನಸ್ಸು: ಮಾಡುವ ವೃತ್ತಿಯಲ್ಲಿ ಪ್ರಗತಿ ಕಾಣಲಿದ್ದೀರಿ. ರಾಜಕೀಯದಲ್ಲಿ ಇರುವವರಿಗೆ ಪದವಿಪ್ರಾಪ್ತಿ. ವೈವಾಹಿಕ ಜೀವನದಲ್ಲಿ ಮುನಿಸು. ಶುಭಸಂಖ್ಯೆ:5
ಮಕರ: ಉದ್ಯೋಗದಲ್ಲಿ ಬದಟಛಿತೆಯಿಂದ ಕೆಲಸ ಮಾಡಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ. ವೆಚ್ಚಗಳು ಹೆಚ್ಚಿದರೂ ಕ್ರಮೇಣ ಚೇತರಿಕೆ. ಶುಭಸಂಖ್ಯೆ:1
ಕುಂಭ: ಬೋಧನೆಯಲ್ಲಿ ಯಶಸ್ಸು ಗಳಿಸುವಿರಿ. ಹಳೆಯ ಸಾಲಗಳನ್ನು ತೀರಿಸಲು ದಾರಿ ಕಾಣಲಿದೆ. ಅಡಿಕೆ, ತೆಂಗು ಉತ್ಪನ್ನಗಳಿಂದ ಲಾಭ. ಶುಭಸಂಖ್ಯೆ: 3
ಮೀನ: ಕಲಾ ಕ್ಷೇತ್ರದಲ್ಲಿ ಇರುವವರಿಗೆ ಶುಭದಿನ. ವಿದೇಶ ಪ್ರಯಾಣ ಸಾಧ್ಯತೆ. ವ್ಯವಹಾರದಲ್ಲಿ ಉತ್ತಮ ಅವಕಾಶ ಕಂಡುಬರಲಿದೆ. ಶುಭಸಂಖ್ಯೆ: 9