ಮೇಷ: ಶಕ್ತಿ ಇಂಧನಗಳ ಮಾರಾಟದಲ್ಲಿ ಲಾಭ. ವೀಸಾ ಸಮಸ್ಯೆ ಪರಿಹಾರವಾಗಲಿದೆ. ವಿದ್ಯುತ್ ಇಲಾಖೆಯ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 9.ವೃಷಭ: ಭಾಷಣಕಾರರಿಗೆ ಬೇಡಿಕೆೆ. ಹೂವು, ಹಣ್ಣು, ತರಕಾರಿ ಮಾರಾಟದಲ್ಲಿ ನಿರೀಕ್ಷಿತ ಲಾಭ. ಅಪರೂಪದ ವ್ಯಕ್ತಿಗಳ ಜತೆ ಮಾತುಕತೆ. ಶುಭಸಂಖ್ಯೆ:2.ಮಿಥುನ: ಅಡಿಕೆ ಮಾರಾಟದಲ್ಲಿ ಲಾಭ. ಸಿದ್ದ ಉಡುಪು ತಯಾರಕರಿಗೆ ಕೆಲಸಗಾರರ ಸಮಸ್ಯೆ. ಆಧ್ಯಾತ್ಮಿಕ ಗ್ರಂಥ ಅಧ್ಯಯನದತ್ತ ಮನಸ್ಸು. ಶುಭಸಂಖ್ಯೆ: 8.ಕಟಕ: ಸಿನಿಮಾ ನಿರ್ವಪಕರಿಗೆ ಭಾರಿ ಆದಾಯ. ಸಾಂಪ್ರದಾಯಿಕ ವಸ್ತು ಮಾರಾಟದಲ್ಲಿ ಶುಭ. ವಾಹನಮಳಿಗೆ ಸ್ಥಾಪಿಸಲು ನಿರ್ಧಾರ. ಶುಭಸಂಖ್ಯೆ:6.ಸಿಂಹ: ದೇವಾಲಯ ನಿರ್ವಣದಲ್ಲಿ ಭಾಗವಹಿಸುವಿರಿ. ವಿದೇಶದಿಂದ ಸ್ನೇಹಿತರ ಆಗಮನ. ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ:3.ಕನ್ಯಾ: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಗಳಿಕೆ. ಎಲೆಕ್ಟ್ರಾನಿಕ್ಸ್ ಅಂಗಡಿಯವರಿಗೆ ಶುಭ. ದೃಶ್ಯ ಮಾಧ್ಯಮದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:3.ತುಲಾ: ಸಾಲ ತೀರಿಸಲು ಮಾರ್ಗ ಗೋಚರ. ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ. ಈಜುಕೊಳದ ಮಾಲೀಕರಿಗೆ ಆರ್ಥಿಕ ಅಭೀವೃದ್ಧಿ. ಶುಭಸಂಖ್ಯೆ: 6.ವೃಶ್ಚಿಕ: ಗಾಯಕರಿಗೆ ವಿದೇಶದಿಂದ ಬೇಡಿಕೆ ಬರಲಿದೆ. ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ವಿಚ್ಛೇದಿತರಿಗೆ ಮರುಮದುವೆ ಯೋಗ. ಶುಭಸಂಖ್ಯೆ:7.ಧನಸ್ಸು: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶಿಕ್ಷಣ ಇಲಾಖೆಯಲ್ಲಿ ವಿಶೇಷ ಪದವಿ ಸಿಗಲಿದೆ. ಸಗಟು ವ್ಯಾಪಾರದಲ್ಲಿ ನಿರೀಕ್ಷಿತ ಲಾಭವಿದೆ. ಶುಭಸಂಖ್ಯೆ:1.ಮಕರ: ಪೀಠೋಪಕರಣಗಳ ತಯಾರಕರಿಗೆ ಲಾಭ. ಕನಸಿನ ನಿವೇಶನ ಸಿಗುವುದು. ಮುತ್ತು ರತ್ನಗಳ ವ್ಯಾಪಾರ ಆರಂಭಿಸುವ ನಿರ್ಧಾರ. ಶುಭಸಂಖ್ಯೆ: 4.ಕುಂಭ: ಸಂಚಾರಿ ದೂರವಾಣಿ ಮಾರಾಟದಲ್ಲಿ ಹಣ ಗಳಿಸುವಿರಿ. ತೆಂಗು, ಬಾಳೆ ಕೃಷಿಕರಿಗೆ ಲಾಭ. ಪ್ರಭಾವಿಗಳ ಶಿಫಾರಸಿನಿಂದ ಉದ್ಯೋಗ. ಶುಭಸಂಖ್ಯೆ: 6.ಮೀನ: ಪತ್ರಿಕೋದ್ಯಮದ ನೌಕರರಿಗೆ ಉದ್ಯೋಗದಲ್ಲಿ ಕಿರಿಕಿರಿ. ರೇಷ್ಮೆ ವಸ್ತ್ರ ಮಾರಾಟದಲ್ಲಿ ಲಾಭ. ಹೈನೋತ್ಪನ್ನ ತಯಾರಕರಿಗೆ ಲಾಭ. ಶುಭಸಂಖ್ಯೆ:7