ಮೇಷ: ಕೌಶಲ, ತಿಳಿವಳಿಕೆಯಿಂದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಕುಟುಂಬದ ಕಾರ್ಯಗಳಿಗೆ ಆದ್ಯತೆ ನೀಡಿ. ಶುಭಸಂಖ್ಯೆ: 9.ವೃಷಭ: ಮಾತು, ನಡವಳಿಕೆಯಲ್ಲಿ ಹಿಡಿತವಿರಲಿ. ಆರ್ಥಿಕ ಸ್ಥಿರತೆ ಕಾದುಕೊಳ್ಳಿ. ಹೂಡಿಕೆಗಳ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ:1.ಮಿಥುನ: ಮಹಿಳೆಯರಿಗೆ ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ಆದಾಯದ ಹೊಸ ಮೂಲ ಗೋಚರಿಸಲಿದೆ. ಶುಭಸಂಖ್ಯೆ:3.ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು. ಸಮಾಜದಲ್ಲಿ ಖ್ಯಾತಿ, ಪ್ರತಿಷ್ಠೆ ಹೆಚ್ಚುತ್ತದೆ. ಮಕ್ಕಳ ಆರೋಗ್ಯದ ಕಾಳಜಿ ಇರಲಿ. ಶುಭಸಂಖ್ಯೆ:4.ಸಿಂಹ: ಹಣ ಹೂಡಿಕೆಗೆ ಸಕಾಲ. ನಿಮ್ಮ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ. ಶುಭಸಂಖ್ಯೆ: 7.ಕನ್ಯಾ: ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ವಾದ- ವಿವಾದ ಬೇಡ. ಕಚೇರಿಯಲ್ಲಿ ಹೊಸ ಜವಾಬ್ದಾರಿ. ಶುಭಸಂಖ್ಯೆ: 2.ತುಲಾ: ದೀರ್ಘಕಾಲದ ಸಮಸ್ಯೆಗೆ ಪರಿಹಾರ. ವ್ಯಾಪಾರದಲ್ಲಿ ಹೊಸತನದಿಂದ ಲಾಭ. ಸಂಗಾತಿಯ ಆರೋಗ್ಯ ಗಮನಿಸಿ. ಶುಭಸಂಖ್ಯೆ: 6.ವೃಶ್ಚಿಕ: ಆಸ್ತಿ-ಸಂಬಂಧಿ ವಿಷಯಗಳ ಇತ್ಯರ್ಥ. ಜನಪದ ಕಲಾವಿದರಿಗೆ ಶುಭ. ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 4.ಧನಸ್ಸು: ಅನಿರೀಕ್ಷಿತವಾಗಿ ಪ್ರಭಾವಿಗಳ ಭೇಟಿ. ವಿದೇಶದ ಯೋಜನೆಗಳಿಗೆ ಅಂತಿಮ ಸ್ಪರ್ಶ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ. ಶುಭಸಂಖ್ಯೆ:5.ಮಕರ: ಮಗನ ಉನ್ನತ ವ್ಯಾಸಂಗದತ್ತ ಗಮನಿಸಿ. ಬಾಕಿ ಕೆಲಸ ಪೂರೈಸುವಿರಿ. ಕೋರ್ಟ್ ಕೇಸ್ನಲ್ಲಿ ಕುಟುಂಬದ ಬೆಂಬಲ. ಶುಭಸಂಖ್ಯೆ: 4.ಕುಂಭ: ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಪ್ರೇಮದ ವಿಷಯದಲ್ಲಿ ಸ್ನೇಹಿತರ ಬೆಂಬಲ. ವಿರೋಧಿಗಳ ಬಗ್ಗೆ ಎಚ್ಚರ. ಶುಭಸಂಖ್ಯೆ: 9.ಮೀನ: ವಿದ್ಯಾರ್ಥಿನಿಯರು ಸಕಾರಾತ್ಮಕವಾಗಿ ಯೋಚಿಸಿ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಕೃಷಿಯಿಂದ ಲಾಭ. ಶುಭಸಂಖ್ಯೆ:1