ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ

ಜ್ಯೋತಿಷ್ಯ
ಜ್ಯೋತಿಷ್ಯ
Published on
ಮೇಷ: ಧಾರ್ವಿುಕ ವ್ಯಕ್ತಿಗಳಿಗೆ ಸಾಮಾಜಿಕ ಸನ್ಮಾನ. ಜ್ಯುವೆಲ್ಲರಿ ಮಾಲೀಕರಿಗೆ ಧನಲಾಭ. ಆತ್ಮೀಯರ ಜೊತೆಗೆ ಔತಣ ಕೂಟ. ಶುಭಸಂಖ್ಯೆ: 8
ವೃಷಭ: ಹೋಟೆಲ್, ಕಾಂಡಿಮೆಂಟ್ ವ್ಯವಹಾರದಲ್ಲಿ ಅಭಿವೃದ್ಧಿ. ಹೈನೋತ್ಪನ್ನ ಮಾರಾಟದಲ್ಲಿ ಲಾಭ. ಅಡಿಕೆ ಮಾರಾಟದಿಂದ ಲಾಭ. ಶುಭಸಂಖ್ಯೆ:7
ಮಿಥುನ: ಮಕ್ಕಳ ಅನಾರೋಗ್ಯ ಸಮಸ್ಯೆ ಸುಧಾರಣೆ. ತಂದೆಗೆ ಶಸ್ತ್ರ ಚಿಕಿತ್ಸೆ ಸಾಧ್ಯತೆಯಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:7
ಕಟಕ: ಉದ್ಯೋಗಿಗಳಿಗೆ ಸಹೋದ್ಯೋಗಿಗಳ ನೆರವು. ಸಂಗಾತಿಯ ಆರೋಗ್ಯದತ್ತ ಗಮನ ಹರಿಸಿ. ಕೃಷಿ ಜಮೀನು ಖರೀದಿ ನಿರ್ಧಾರ. ಶುಭಸಂಖ್ಯೆ:9
ಸಿಂಹ: ಐಟಿ ಉದ್ಯೋಗದಲ್ಲಿ ಹಣ ಗಳಿಸುವಿರಿ, ಬಂಧುಬಾಂಧವರೊಂದಿಗೆ ಔತಣ ಕೂಟ. ಹಾಲು ಉತ್ಪನ್ನ ಮಳಿಗೆಯವರಿಗೆ ಲಾಭ. ಶುಭಸಂಖ್ಯೆ:3
ಕನ್ಯಾ: ಬ್ಯಾಂಕಿನ ಉದ್ಯೋಗಿಗಳಿಗೆ ವರ್ಗಾವಣೆ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವಿರಿ. ಶಿಕ್ಷಕರಿಗೆ ಒತ್ತಡ ಹೆಚ್ಚಲಿದೆ.ಶುಭಸಂಖ್ಯೆ:1
ತುಲಾ: ಹಳೆಯ ಸ್ನೇಹಿತನ ಭೇಟಿ. ಸ್ವಂತ ಉದ್ಯೋಗದ ಮಾಲೀಕರಿಗೆ ಕೆಲಸಗಾರರ ಸಮಸ್ಯೆ. ಪೀಠೋಪ ಕರಣಗಳ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ:3
ವೃಶ್ಚಿಕ: ದೃಢನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ನಿವೇಶನ ಲಭ್ಯ. ಮಗಳ ವಿವಾಹದ ಪ್ರಯತ್ನ ಸಫಲ. ಉದ್ಯೋಗ ಸ್ಥಳದಲ್ಲಿ ಗೊಂದಲ. ಶುಭಸಂಖ್ಯೆ:5
ಧನಸ್ಸು: ಭತ್ತ ಬೇಸಾಯದಲ್ಲಿ ಲಾಭವಾಗುವುದು. ಹೊಸ ವ್ಯಾಪಾರ ಪ್ರಾರಂಭಕ್ಕೆ ಯೋಜನೆ. ಸರ್ಕಾರಿ ಕೆಲಸ ಸಿಗಲಿದೆ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 5
ಮಕರ: ಅಪರಿಚಿತರಿಂದ ನೆರವು. ರಸ್ತೆ ಸಾರಿಗೆ ಉದ್ಯೋಗಿಗಳಿಗೆ ವರ್ಗಾವಣೆ. ಉನ್ನತ ಅಧಿಕಾರಿಗಳಿಗೆ ಒತ್ತಡ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 9
ಕುಂಭ: ಮಕ್ಕಳಿಗೋಸ್ಕರ ಅಧಿಕ ಖರ್ಚಾದೀತು. ಹೃದಯ ಸಂಬಂಧಿ ಕಾಯಿಲೆ ವಾಸಿಯಾಗಲಿದೆ. ಕಿರುಚಿತ್ರ ನಟರಿಗೆ ಅವಕಾಶ ಸಿಗಲಿದೆ. ಶುಭಸಂಖ್ಯೆ: 6
ಮೀನ: ವಿದೇಶದಲ್ಲಿರುವ ಮಕ್ಕಳಿಂದ ಸಹಾಯ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಧಾರ್ವಿುಕ ವೃತ್ತಿಪರರಿಗೆ ಅಧಿಕ ಹಣ ಬರಲಿದೆ. ಶುಭಸಂಖ್ಯೆ:4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net