

ಮೇಷ: ವ್ಯರ್ಥವಾಗಿ ಧನ ಹಾನಿಯಾಗಬಹುದು. ಬಂಧುಗಳೊಂದಿಗೆ ದ್ವೇಷ ಉಂಟಾಗುವ ಸಾಧ್ಯತೆ. ಆಸ್ತಿ ನೋಂದಣಿಗೆ ಸುಸಮಯ. ಶುಭಸಂಖ್ಯೆ: 9
ವೃಷಭ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ವೈರಿಗಳಿಂದ ದೂರವಿರಿ. ಸಹೋದ್ಯೋಗಿಗಳ ಸಹಾಯದಿಂದ ಪ್ರಗತಿ ಸಾಧಿಸುವಿರಿ. ಶುಭಸಂಖ್ಯೆ: 5
ಮಿಥುನ: ವೈರಿಗಳಿಂದ ದೂರವಿರಿ. ಪತ್ರಕರ್ತರಿಗೆ ಪರಿಶ್ರಮಕ್ಕೆ ತಕ್ಕ ವರಮಾನ ದೊರೆಯಲಿದೆ. ತಂಪು ಪಾನೀಯಗಳಿಂದ ಅನಾರೋಗ್ಯ. ಶುಭಸಂಖ್ಯೆ: 2
ಕಟಕ: ಪುಣ್ಯಕ್ಷೇತ್ರಕ್ಕೆ ಪ್ರಯಾಣ. ಬಹುಕಾಲದ ಕಾಯುವಿಕೆಯ ನಂತರ ವಿವಾಹ ಯೋಗ. ನಿಷ್ಠುರ ವರ್ತನೆಯಿಂದ ಕುಟುಂಬ ಕಲಹ. ಶುಭಸಂಖ್ಯೆ: 8
ಸಿಂಹ: ತಂದೆಗೆ ವಾಹನ ಅಪಘಾತ ಸಂಭವ ಎಚ್ಚರ ವಹಿಸಿ. ಜಿಮ್ ತರಬೇತುದಾರರಿಗೆ ದೈಹಿಕ ತೊಂದರೆ. ಸ್ನೇಹಿತರೊಂದಿಗೆ ಶತ್ರುತ್ವ. ಶುಭಸಂಖ್ಯೆ: 8
ಕನ್ಯಾ: ಮಕ್ಕಳಿಗೆ ಅಭ್ಯಾಸದಲ್ಲಿ ಪ್ರಗತಿ. ಅಡಿಕೆ ವ್ಯಾಪಾರಿಗಳಿಗೆ ಉತ್ತಮ ಲಾಭ. ಆಸ್ತಿ ಖರೀದಿಯಲ್ಲಿ ಇದ್ದ ವಿಘ್ನ ಪರಿಹಾರವಾಗುವುದು. ಶುಭಸಂಖ್ಯೆ: 3
ತುಲಾ: ಔಷಧ ವ್ಯಾಪಾರದಲ್ಲಿ ನಷ್ಟ. ವಿದ್ಯಾಭ್ಯಾಸದಲ್ಲಿ ಅನಾಸಕ್ತಿ. ಹಿತಶತ್ರುಗಳಿಂದ ತೊಂದರೆ. ಸಾರ್ವಜನಿಕವಾಗಿ ಮಾತಿಗೆ ಮನ್ನಣೆ. ಶುಭಸಂಖ್ಯೆ: 2
ವೃಶ್ಚಿಕ: ಬಂಧುಗಳ ಭೇಟಿಯಿಂದ ಸಂತಸ. ಆರೋಗ್ಯದ ಕಡೆ ಹೆಚ್ಚಿನ ಗಮನ ಅಪೇಕ್ಷಣೀಯ. ಅನಿರೀಕ್ಷಿತ ಕೀರ್ತಿ ಒದಗಿ ಬರಲಿದೆ. ಶುಭಸಂಖ್ಯೆ: 8
ಧನಸ್ಸು: ಆದಾಯದ ಮೂಲದಲ್ಲಿ ದ್ವಿಗುಣ. ನಿಂತ ಕಾರ್ಯಗಳು ಮತ್ತೆ ಪ್ರಾರಂಭವಾಗುವವು. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 9
ಮಕರ: ಸಂದರ್ಶನಗಳಲ್ಲಿ ಯಶಸ್ಸು. ಹಿರಿಯರಿಂದ ಪ್ರಮುಖ ನಿರ್ಧಾರದಲ್ಲಿ ಮಾರ್ಗದರ್ಶನ ಸಿಗಲಿದೆ. ಪತ್ನಿಯೊಂದಿಗೆ ಕಲಹ ಬೇಡ. ಶುಭಸಂಖ್ಯೆ: 6
ಕುಂಭ: ಸ್ನೇಹಿತರಲ್ಲಿ ಸಾಮರಸ್ಯ ಇರಲಿದೆ. ಪ್ರತಿಷ್ಠಿತ ಕೆಲಸದಿಂದ ಗೌರವ ಸಿಗಲಿದೆ. ಸ್ನೇಹಿತರೊಂದಿಗೆ ಅನವಶ್ಯಕ ವಾಗ್ವಾದ ಆದೀತು. ಶುಭಸಂಖ್ಯೆ: 9
ಮೀನ: ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ ಯೋಗ. ಮಹಿಳಾ ಚಾಲಕರಿಗೆ ಅಪಘಾತ ಸಾಧ್ಯತೆ. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 1