ಮೇಷ: ಛಾಯಾಚಿತ್ರ ಪ್ರದರ್ಶನದಿಂದ ಧನ ಸಂಪಾದನೆ. ಉನ್ನತ ಹುದ್ದೆಗೆ ವರ್ಗಾವಣೆ. ಉದ್ಯೋಗಸ್ಥ ಮಹಿಳೆಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 8.ವೃಷಭ: ಗೃಹೋಪಕರಣ ಖರೀದಿಗೆ ಖರ್ಚು. ಬಟ್ಟೆ ಗಿರಣಿ ಮಾಲೀಕರಿಗೆ ಲಾಭ. ಸಗಟು ವ್ಯಾಪಾರದಲ್ಲಿ ನಷ್ಟದ ಭೀತಿ. ಕುಲದೇವರ ದರ್ಶನ. ಶುಭಸಂಖ್ಯೆ: 4.ಮಿಥುನ: ಅರಣ್ಯ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ವೀಸಾ ಸಮಸ್ಯೆ ಪರಿಹಾರ. ನಿಮ್ಮಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ಲಭ್ಯ. ಶುಭಸಂಖ್ಯೆ:7.ಕಟಕ: ಹೊಸ ಉದ್ಯೋಗದಲ್ಲಿ ನೆಮ್ಮದಿಯ ಭಾವ. ಮಾಧ್ಯಮ ಉದ್ಯೋಗಿಗಳಿಗೆ ಹಣ ಲಾಭ. ಧಾರ್ವಿುಕ ವಿಚಾರಗಳತ್ತ ಮನಸ್ಸು. ಶುಭಸಂಖ್ಯೆ:6.ಸಿಂಹ: ಟ್ರಾವೆಲ್ಸ್ ಮಾಲೀಕರಿಗೆ ಲಾಭ. ಸ್ಥಿರಾಸ್ತಿ ಯೋಗ. ಕೈಗಾರಿಕೆಯಲ್ಲಿ ಅನುಕೂಲ. ಉದ್ಯೋಗ ಬದಲಾದೀತು. ನೆಮ್ಮದಿಭಂಗ. ಶುಭಸಂಖ್ಯೆ:8.ಕನ್ಯಾ: ವಿದೇಶದಲ್ಲಿರುವ ಮಗನಿಂದ ಶುಭ ಸುದ್ದಿ. ಮಗಳ ಮದುವೆಯ ಪ್ರಸ್ತಾಪ ಸಫಲವಾಗಲಿದೆ. ಆಸ್ತಿ ವಿವಾದ ಬಗೆಹರಿಯಲಿದೆ.ಶುಭಸಂಖ್ಯೆ:4.ತುಲಾ: ಅಧಿಕಾರ ಪ್ರಾಪ್ತಿಗಿದ್ದ ನಿರ್ಬಂಧ ತೆರವು. ನಿವೇಶನ ಖರೀದಿ ನಿರ್ಧಾರ. ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಅನಿರೀಕ್ಷಿತ ಆದಾಯ. ಶುಭಸಂಖ್ಯೆ:8.ವೃಶ್ಚಿಕ: ಐಟಿ ಉದ್ಯೋಗ ಬದಲಾವಣೆಗೆ ಮನಸ್ಸು. ಆಸ್ತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಿ. ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 9.ಧನುಸ್ಸು: ಹೃದಯ ಸಂಬಂಧಿ ವ್ಯಾಧಿ ಗುಣವಾಗಲಿದೆ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಹಾಯ. ಹಣ್ಣು ಮತ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:6.ಮಕರ: ಸಿನಿಮಾ ಕ್ಷೇತ್ರದ ವೃತ್ತಿ ಪರರಿಗೆ ಸಾಮಾಜಿಕ ಗೌರವ ಮನ್ನಣೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಅಡಕೆ ಮಾರಾಟದಿಂದ ಲಾಭ. ಶುಭಸಂಖ್ಯೆ:4.ಕುಂಭ: ಅಡಕೆ ಮತ್ತು ತೆಂಗು ಕೃಷಿಯಲ್ಲಿ ಅಭಿವೃದ್ಧಿಯಾಗಲಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ ವ್ಯವಹಾರದಲ್ಲಿ ಕೆಲಸಗಾರರಿಂದ ಕಿರಿಕಿರಿ. ಶುಭಸಂಖ್ಯೆ: 3.ಮೀನ: ವಿಚ್ಛೇದಿತರಿಗೆ ವಿವಾಹ ಸಿದ್ದಿ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಉಪನ್ಯಾಸಕ ವೃತ್ತಿಯಲ್ಲಿ ಬಡ್ತಿ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 2