ಮೇಷ: ಶೈಕ್ಷಣಿಕ ರಂಗದವರಿಗೆ ಸನ್ಮಾನ. ಶುಭ ಸಮಾರಂಭಕ್ಕೆ ಅಧಿಕ ಖರ್ಚು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಸಂಪಾದನೆ. ಶುಭಸಂಖ್ಯೆ: 9.ವೃಷಭ: ಮಾತೃಮೂಲವಾದ ಆಸ್ತಿ ವಿವಾದ ಇತ್ಯರ್ಥ. ರೆಸ್ಟೋರೆಂಟ್ ವ್ಯವಹಾರದಲ್ಲಿ ಹೆಚ್ಚು ಒತ್ತಡ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಅಧಿಕ. ಶುಭಸಂಖ್ಯೆ: 2.ಮಿಥುನ: ಅಪರಿಚಿತರಿಂದ ಧನಾಗಮನ. ಅಮೂಲ್ಯ ವಸ್ತು ಲಭ್ಯ. ಹೊಟ್ಟೆಗೆ ಸಂಬಂಧಪಟ್ಟ ವ್ಯಾದಿ ಗುಣಮುಖ. ವಿದೇಶ ಪ್ರವಾಸ ಸಾಧ್ಯತೆ.ಶುಭಸಂಖ್ಯೆ:4.ಕಟಕ: ಹೊಸ ಉದ್ಯೋಗ ಮನಸ್ಸಿಗೆ ಸಮಾಧಾನ ತರಲಿದೆ. ಕಲಾವಿದರಿಗೆ ಕೀರ್ತಿ ಅರಸಿ ಬರಲಿದೆ. ಸಹೋದರಿಯೊಂದಿಗೆ ಮನಸ್ತಾಪ. ಶುಭಸಂಖ್ಯೆ: 4.ಸಿಂಹ: ಮಾತಿನಲ್ಲಿ ನಿಯಂತ್ರಣವಿರಲಿ. ಹಣ್ಣು ಮತ್ತು ತರಕಾರಿ ವ್ಯಾಪಾರದಲ್ಲಿ ಲಾಭವಾಗುವುದು. ಮರ ಮಟ್ಟುಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8.ಕನ್ಯಾ: ಜಲಮಂಡಳಿಯ ಕೆಲಸಗಾರರಿಗೆ ಶುಭದಿನ. ಬ್ಯಾಂಕ್ ಅಧಿಕಾರಿಗಳ ಕಾರ್ಯನಿರ್ವಹಣೆ. ಮಕ್ಕಳಿಂದ ಸಮಾಜದಲ್ಲಿ ಗೌರವ. ಶುಭಸಂಖ್ಯೆ:1.ತುಲಾ: ಸಜ್ಜನರ ಸಹವಾಸ. ಗ್ರಂಥಿಗೆ ಅಂಗಡಿಯವರಿಗೆ ವರಮಾನ ಹೆಚ್ಚಾಗುತ್ತದೆ. ಧಾರ್ವಿುಕ ಕ್ಷೇತ್ರದಲ್ಲಿ ಪ್ರಗತಿ. ವಿದೇಶ ಪ್ರಯಾಣ. ಶುಭಸಂಖ್ಯೆ:4.ವೃಶ್ಚಿಕ: ಆಹಾರದ ವ್ಯತ್ಯಾಸದಿಂದ ಅನಾರೋಗ್ಯ. ಹಲವು ಮೂಲಗಳಿಂದ ಆದಾಯ. ಅರಣ್ಯ ಉತ್ಪನ್ನಗಳ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 2.ಧನುಸ್ಸು: ನಂಬಿದವರಿಂದ ಮೋಸವಾಗುವ ಸಾಧ್ಯತೆ. ಆಸ್ತಿ ನೋಂದಣಿ, ಕೆಲಸದಲ್ಲಿ ಯಶ. ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ಫಲ ಸಿಗಲಿದೆ. ಶುಭಸಂಖ್ಯೆ: 7.ಮಕರ: ತೀರ್ಥಯಾತ್ರೆಗೆ ವ್ಯಯ. ಸಾಲಗಾರರಿಂದ ಕಿರಿಕಿರಿ ಅಂತ್ಯ. ಆಟಗಾರರಿಗೆ ವಿಶೇಷ ದಿನ. ಅಡಕೆ, ಏಲಕ್ಕಿ ಬೇಸಾಯದಲ್ಲಿ ಲಾಭ. ಶುಭಸಂಖ್ಯೆ:5.ಕುಂಭ: ಸಹೋದ್ಯೋಗಿಗಳ ಸಹಕಾರದಿಂದ ಜವಾಬ್ದಾರಿ ಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಸಂಗೀತಾಭ್ಯಾಸದಲ್ಲಿ ವಿಶೇಷ ಆಸಕ್ತಿ. ಶುಭಸಂಖ್ಯೆ:4.ಮೀನ: ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ವಕೀಲ ವೃತ್ತಿಯವರಿಗೆ ವಾದಗಳಲ್ಲಿ ಜಯ. ಸರ್ಕಾರಿ ಕೆಲಸದಲ್ಲಿ ಜಯ ದೊರೆಯಲಿದೆ. ಶುಭಸಂಖ್ಯೆ: 9