ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣದ ಒಳಹರಿವಿನಲ್ಲಿ ಅಭಿವೃದ್ಧಿ

Astrology
Astrology
Published on
ಮೇಷ: ಸಹಾಯ ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಶುಭದಿನ. ಹಿತಶತ್ರುಗಳ ಕುರಿತು ಎಚ್ಚರ. ಹಣದ ಒಳಹರಿವಿನಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 9
ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚು. ಸ್ನೇಹಿತರೊಂದಿಗೆ ಔತಣಕೂಟ. ಮೇಕಪ್ ವಸ್ತು ಮಾರಾಟದಲ್ಲಿ ನಿರೀಕ್ಷಿತ ಲಾಭ ಬರುವುದು. ಶುಭಸಂಖ್ಯೆ:5
ಮಿಥುನ: ಅಧಿಕಾರಿಗಳ ವಿಶ್ವಾಸ ಗಳಿಸುವಿರಿ. ಮಕ್ಕಳಿಗಾಗಿ ಧರ್ಮಕಾರ್ಯದ ಯೋಚನೆ. ಉದ್ಯೋಗ ಆಕಾಂಕ್ಷಿಗಳು ಸಂದರ್ಶನ ಎದುರಿಸಿ. ಶುಭಸಂಖ್ಯೆ: 9
ಕಟಕ: ತಂದೆಯೊಂದಿಗೆ ತೀರ್ಥಕ್ಷೇತ್ರಕ್ಕೆ ಪ್ರಯಾಣ. ದೃಢನಿರ್ಧಾರಗಳಿಂದ ಯಶಸ್ಸು. ವೃತ್ತಿಯ ಕಾರ್ಯ ಸಾಧನೆಯಿಂದ ಕೀರ್ತಿ ಲಭ್ಯ. ಶುಭಸಂಖ್ಯೆ:1
ಸಿಂಹ: ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ಗೃಹ ನಿರ್ವಣದ ಸಮಸ್ಯೆಗಳಿಂದ ಮುಕ್ತಿ. ಐಟಿ ಉದ್ಯಮದಲ್ಲಿ ಬದಲಾವಣೆ. ಶುಭಸಂಖ್ಯೆ:4
ಕನ್ಯಾ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಖರ್ಚು. ಸಹಕಾರದಿಂದ ಕೃಷಿ ಕೆಲಸಕ್ಕೆ ಸಹಾಯ. ಅದಿರು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 8
ತುಲಾ: ವಾಹನಗಳ ಬಿಡಿಭಾಗ ಮಾರುವವರಿಗೆ ಅಧಿಕ ಲಾಭ. ಲಲಿತ ಕಲಾವಿದ್ಯಾರ್ಥಿಗಳಿಗೆ ಶುಭ. ನಂಬಿಕೆಯಿಂದ ಕೆಲಸದಲ್ಲಿ ಗೆಲುವು. ಶುಭಸಂಖ್ಯೆ:3
ವೃಶ್ಚಿಕ: ಲೇವಾದೇವಿಯಲ್ಲಿ ಕಡಿಮೆ ಆದಾಯ. ಸಾಲ ನೀಡುವಾಗ ಯೋಚಿಸಿ. ಕೋರ್ಟ್​ನಲ್ಲಿ ಹಿನ್ನಡೆ. ನಿರ್ಧಾರಕ್ಕೆ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ:6
ಧನುಸ್ಸು: ಕೈಮಗ್ಗ ವಸ್ತುವಿನಿಂದ ಆದಾಯ. ಮಹಿಳಾ ಕೇಂದ್ರ ಸರ್ಕಾರಿ ನೌಕರರಿಗೆ ನಿರೀಕ್ಷೆಯಂತೆ ವರ್ಗ. ಸಮಾಜ ಸೇವೆಯಲ್ಲಿ ಆಸಕ್ತಿ. ಶುಭಸಂಖ್ಯೆ:3
ಮಕರ: ಕೆಮ್ಮು, ಕಫ ಆಗದಂತೆ ಎಚ್ಚರವಹಿಸುವುದು ಒಳ್ಳೆಯದು. ಉದ್ಯೋಗ ಸ್ಥಳದಲ್ಲಿ ಸಾಲ. ನಿವೇಶನ ಖರೀದಿಗೆ ಹಿರಿಯರ ನೆರವು. ಶುಭಸಂಖ್ಯೆ:8
ಕುಂಭ: ಅಹಂಭಾವದಿಂದ ದಾಂಪತ್ಯದಲ್ಲಿ ತೊಂದರೆ. ಉಳಿತಾಯದಲ್ಲಿ ದುಡುಕಿನ ನಿರ್ಧಾರ ಬೇಡ. ಸರ್ಕಾರಿ ಉದ್ಯೋಗ ಸಿಗುವುದು. ಶುಭಸಂಖ್ಯೆ:9
ಮೀನ; ವ್ಯಾಪಾರದಲ್ಲಿ ಮಧ್ಯಮ ಲಾಭ. ಪಾಲುದಾರಿಕೆಯ ಮನಸ್ತಾಪದಿಂದ ಅಭಿವೃದ್ಧಿಯಲ್ಲಿ ಹಿನ್ನಡೆ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಶುಭಸಂಖ್ಯೆ:1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net