_1767030561966.webp?w=480&auto=format%2Ccompress&fit=max)
_1767030561966.webp?w=480&auto=format%2Ccompress&fit=max)
ಮೇಷ: ಸಾಮಾಜಿಕ ಕೆಲಸಗಳಿಂದ ಅನುಕೂಲ. ಕುಟುಂಬದಲ್ಲಿ ಧಾರ್ವಿುಕ ಕಾರ್ಯಕ್ರಮ. ಆತ್ಮಗೌರವಕ್ಕಾಗಿ ಸ್ನೇಹಿತರಿಂದ ದೂರ. ಶುಭಸಂಖ್ಯೆ: 7
ವೃಷಭ: ಬಂಧುಗಳೊಂದಿಗೆ ಪ್ರವಾಸ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಸ್ಥಿರಾಸ್ತಿ ಖರೀದಿಗೆ ನಿರ್ಧಾರ ಮಾಡುವಿರಿ. ಶುಭಸಂಖ್ಯೆ: 8
ಮಿಥುನ: ನಿರೀಕ್ಷಿತ ಪ್ರಯಾಣದ ವೇಳೆ ಅನಾರೋಗ್ಯ. ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ. ಮಕ್ಕಳ ಆರೋಗ್ಯದಲ್ಲಿ ಬದಲಾವಣೆ. ಶುಭಸಂಖ್ಯೆ:4
ಕಟಕ: ಆರ್ಥಿಕವಾಗಿ ಸದೃಢರಾಗುವಿರಿ. ಭೂಮಿ ವಾಹನ ಖರೀದಿಯ ಸಮಸ್ಯೆ ನಿವಾರಣೆ. ಸಹೋದರಿಯ ಜೀವನದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 6
ಸಿಂಹ: ಅನಿರೀಕ್ಷಿತ ಪ್ರಯಾಣ. ಛಾಯಾಗ್ರಾಹಕರ ಸಂಪಾದನೆ ವೃದ್ಧಿ. ಪ್ರೀತಿಯ ವಿಷಯಕ್ಕೆ ಚಿಂತೆ, ಸಂಗಾತಿಯ ವರ್ತನೆಯಿಂದ ಕಿರಿಕಿರಿ. ಶುಭಸಂಖ್ಯೆ: 4
ಕನ್ಯಾ: ರಾಜಕೀಯದವರಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಕಟ್ಟಡ ಸಾಮಗ್ರಿ ವ್ಯವಹಾರದಲ್ಲಿ ನಷ್ಟ. ಸ್ತ್ರೀಯರಿಗೆ ಆಭರಣ ಲಾಭ ಶುಭಸಂಖ್ಯೆ: 4
ತುಲಾ: ಶತ್ರುಗಳು ಮಿತ್ರರಾಗಿ ಪರಿವರ್ತನೆಯಾಗುವರು. ಆತ್ಮಗೌರವಕ್ಕಾಗಿ ಪದವಿ ತ್ಯಾಗ. ಕಲಾವಿದರಿಗೆ ಉತ್ತಮ ಅವಕಾಶಗಳು ಪ್ರಾಪ್ತಿ. ಶುಭಸಂಖ್ಯೆ: 6
ವೃಶ್ಚಿಕ: ನಿಮ್ಮ ನಿರ್ಧಾರ ಲಾಭದಾಯಕವಾಗಲಿದೆ. ಉದ್ಯೋಗ ಸ್ಥಳದಲ್ಲಿ ಅಧಿಕ ಹಣ ಗಳಿಸುವಿರಿ. ಧಾರ್ವಿುಕ ನಾಯಕರಿಗೆ ವಿಶೇಷ ಗೌರವ.ಶುಭಸಂಖ್ಯೆ: 3
ಧನಸ್ಸು: ಆತ್ಮೀಯರಿಂದ ಸಾಲದ ಸಹಾಯ ಸಿಗಲಿದೆ. ದೇವತಾ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ. ವ್ಯಾಪಾರಸ್ಥರಿಗೆ ನಿಂದನೆಯ ಭೀತಿ. ಶುಭಸಂಖ್ಯೆ: 9
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ. ಪ್ರೀತಿಪಾತ್ರರ ಭೇಟಿ. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 9
ಕುಂಭ: ಅವಿವಾಹಿತರಿಗೆ ಕಂಕಣ ಬಲ. ಭವಿಷ್ಯದ ಚಿಂತನೆಯ ಜೊತೆಗೆ ಆತಂಕ ಕಾಡೀತು. ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ಶುಭಸಂಖ್ಯೆ: 4
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಸಾಹಿತಿ, ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ಲಾಭ. ಸಿದ್ದ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5