ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಹಣಕಾಸಿನಲ್ಲಿ ನಿರೀಕ್ಷಿತ ಲಾಭ

Daily Astrology
Daily Astrology
Published on
ಮೇಷ: ವೃತ್ತಿಯಲ್ಲಿ ಹೊಸ ಅವಕಾಶ ದೊರೆಯುವ ಸಾಧ್ಯತೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ. ದಾಂಪತ್ಯ ಜೀವನದಲ್ಲಿ ಸಮನ್ವಯ ಬೇಕು. ಶುಭಸಂಖ್ಯೆ: 5
ವೃಷಭ: ಸಣ್ಣ ಚಿಕಿತ್ಸೆ ಸಾಧ್ಯತೆ. ವಿವಾಹ ಸಂಬಂಧಿ ಮಾತುಕತೆ ಫಲಪ್ರದ. ಉನ್ನತ ಶಿಕ್ಷಣದಲ್ಲಿ ಶುಭ ಸೂಚನೆ. ಹೂಡಿಕೆಗಳಿಗೆ ಮಧ್ಯಮ ಫಲ.ಶುಭಸಂಖ್ಯೆ: 8
ಮಿಥುನ: ಸರ್ಕಾರಿ ವೃತ್ತಿಯಲ್ಲಿ ಪ್ರಗತಿ. ಸ್ವಂತ ಉದ್ಯಮದವರಿಗೆ ಧನಾದಾಯ ಹೆಚ್ಚಳ. ಹೊಸ ಹೂಡಿಕೆ ಲಾಭದಾಯಕವಾಗಬಹುದು. ಶುಭಸಂಖ್ಯೆ: 2
ಕಟಕ: ಜವಾಬ್ದಾರಿ ಹೆಚ್ಚಲಿದೆ. ಭೂ ಸಂಬಂಧಿ ವ್ಯವಹಾರದಲ್ಲಿ ಲಾಭ. ಆರೋಗ್ಯದತ್ತ ಗಮನಕೊಡಿ. ಮಕ್ಕಳ ವಿಚಾರದಲ್ಲಿ ತಾಳ್ಮೆ ಇರಲಿ. ಶುಭಸಂಖ್ಯೆ: 7
ಸಿಂಹ: ಹಣಕಾಸಿನ ವ್ಯವಹಾರದಲ್ಲಿ ಲಾಭಗಳಿಸುವಿರಿ. ದಾಂಪತ್ಯ ಜೀವನದಲ್ಲಿ ಸೌಹಾರ್ದತೆ. ಮಕ್ಕಳ ಸಾಧನೆ ಸಂತೋಷ ತರಲಿದೆ. ಶುಭಸಂಖ್ಯೆ:8
ಕನ್ಯಾ: ಹೊಣೆಗಾರಿಕೆ ಯಶಸ್ವಿಯಾಗಿ ನಿಭಾಯಿಸುವಿರಿ. ಪಾಲುದಾರಿಕೆಯಲ್ಲಿ ಹಣಕಾಸಿನಲ್ಲಿ ನಿಯಂತ್ರಣ ಅಗತ್ಯ. ಮಕ್ಕಳಿಂದ ಬೆಂಬಲ. ಶುಭಸಂಖ್ಯೆ:4
ತುಲಾ: ವ್ಯಾಪಾರದಲ್ಲಿ ಹೊಸ ಯೋಜನೆ ಯಶಸ್ವಿ. ಸುಗಮ ಸಂಗೀತ ಗಾಯಕರಿಗೆ ಉತ್ತಮ ಅವಕಾಶ. ಆರೋಗ್ಯದಲ್ಲಿ ಸ್ವಲ್ಪ ದಣಿವು. ಶುಭಸಂಖ್ಯೆ:3
ವೃಶ್ಚಿಕ: ವ್ಯವಹಾರದಲ್ಲಿ ಜಾಗ್ರತೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಫಲಿಸುತ್ತದೆ. ವಿವಾಹ ಜೀವನದಲ್ಲಿ ಸಂತೋಷ. ಮಕ್ಕಳಿಂದ ಶುಭ ಸುದ್ದಿ.ಶುಭಸಂಖ್ಯೆ:4
ಧನುಸ್ಸು: ವೃತ್ತಿಯಲ್ಲಿ ಹೊಸ ಅವಕಾಶ ಒದಗಿಬರಲಿದೆ. ಹಲವು ದಿನಗಳ ಕನಸು ಈಡೇರುವ ಸಮಯ. ಕಾನೂನು ವಿಷಯಗಳಲ್ಲಿ ಜಯ. ಶುಭಸಂಖ್ಯೆ:4
ಮಕರ: ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸದ ಬಯಕೆ ಈಡೇರಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಕಾನೂನು ವಿಚಾರಗಳಲ್ಲಿ ವಿಳಂಬ. ಶುಭಸಂಖ್ಯೆ: 9
ಕುಂಭ: ರಿಯಲ್ ಎಸ್ಟೇಟ್ ಕೆಲಸದಲ್ಲಿ ಪ್ರಗತಿ. ಹಣಕಾಸಿನಲ್ಲಿ ಪ್ರಗತಿ. ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಯಶಸ್ಸು. ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 2
ಮೀನ: ಪದವಿ ಪ್ರಾಪ್ತಿಯಲ್ಲಿದ್ದ ನಿರ್ಬಂಧ ತೆರವು. ಷೇರು ವ್ಯವಹಾರದಲ್ಲಿ ಲಾಭ. ಆರೋಗ್ಯದಲ್ಲಿ ಚೇತರಿಕೆ. ಆಸ್ತಿ ವಿವಾದ ಇತ್ಯರ್ಥ. ಶುಭಸಂಖ್ಯೆ: 7
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net