ನಿತ್ಯಭವಿಷ್ಯ; ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಲಾಭ

Daily Astrology
Daily Astrology
Published on
ಮೇಷ: ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ. ಹೊಸ ವಾಹನ ಖರೀದಿಗೆ ಸೂಕ್ತ ಸಮಯ. ಆಮದು ರಫ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9
ವೃಷಭ: ಉದ್ಯೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳಿ. ಸಹೋದರನ ಆರೋಗ್ಯದಲ್ಲಿ ಹೆಚ್ಚು ಚೇತರಿಕೆ ಕಾಣಲಿದೆ. ಮನೆ ನವೀಕರಣಕ್ಕೆ ನಿರ್ಧಾರ. ಶುಭಸಂಖ್ಯೆ: 7
ಮಿಥುನ: ವೃತ್ತಿ ಶಿಕ್ಷಣದಲ್ಲಿ ಪ್ರವೇಶ ಸಿಗಲಿದೆ. ಛಾಯಾಗ್ರಾಹಕರಿಗೆ ಧನ ಲಾಭ. ಕುಟುಂಬ ಸಮೇತ ತೀರ್ಥಯಾತ್ರೆಗೆ ತೆರಳಲು ನಿರ್ಧಾರ. ಶುಭಸಂಖ್ಯೆ:7
ಕಟಕ: ಸಿನಿಮಾ ಕ್ಷೇತ್ರದ ಉದ್ಯೋಗಿಗಳಿಗೆ ಅಧಿಕ ಸಂಪಾದನೆ. ಐಟಿ ಉದ್ಯೋಗದಲ್ಲಿ ಬಡ್ತಿ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:9
ಸಿಂಹ: ನವದಂಪತಿಗಳಿಗೆ ಶುಭ ಸುದ್ದಿ. ಕುಟುಂಬ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆ ಸಾಧ್ಯತೆ. ನೂತನ ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 6
ಕನ್ಯಾ: ಷೇರು ವ್ಯವಹಾರದಲ್ಲಿ ಉತ್ತಮ ಲಾಭ. ಸಾಮಾಜಿಕ ಮಾಧ್ಯಮಗಳನ್ನು ಮುನ್ನಡೆಸುವವರಿಗೆ ಪ್ರಗತಿ. ಕನಸಿನ ನಿವೇಶನ ಸಿಗಲಿದೆ. ಶುಭಸಂಖ್ಯೆ:3
ತುಲಾ: ಧಾರ್ವಿುಕ ಸಂಸ್ಥೆಯ ನೇತಾರರಿಗೆ ಶುಭ. ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ದೈಹಿಕ ಶಿಕ್ಷಕರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ:5
ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಹೂಡಿಕೆ ಹೆಚ್ಚಲಿದೆ. ಸಂಗೀತ - ನಾಟ್ಯ ಶಿಕ್ಷಕರಿಗೆ ಧನಲಾಭ. ಆಸ್ತಿ ವಿವಾದ ಬಗೆಹರಿಯುವುದು. ಶುಭಸಂಖ್ಯೆ: 9
ಧನುಸ್ಸು: ನಿರುದ್ಯೋಗ ಸಮಸ್ಯೆ ಕಾಡಲಿದೆ. ವಿಚ್ಛೇದಿತರಿಗೆ ವಿವಾಹ ಯೋಗ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ದೊಡ್ಡ ಮೊತ್ತದ ಲಾಭ. ಶುಭಸಂಖ್ಯೆ:4
ಮಕರ: ವೈದ್ಯಕೀಯ ವ್ಯವಹಾರದಲ್ಲಿ ಲಾಭ. ಏಲಕ್ಕಿ ಕಾಳುಮೆಣಸುಗಳಂತಹ ಸಾಂಬಾರ ಪದಾರ್ಥಗಳ ಬೇಸಾಯಗಾರರಿಗೆ ಪ್ರಗತಿ. ಶುಭಸಂಖ್ಯೆ:9
ಕುಂಭ: ಅಪರಿಚಿತರ ಜತೆ ವ್ಯವಹಾರದಲ್ಲಿ ಎಚ್ಚರ. ವಾಣಿಜ್ಯ ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ:8
ಮೀನ: ಅಮೂಲ್ಯ ವಸ್ತು ಖರೀದಿಗೆ ಖರ್ಚು. ಮೊಬೈಲ್, ಟಿವಿ ಮಾರಾಟದಲ್ಲಿ ಹಣ ಗಳಿಕೆ. ಮಾಧ್ಯಮ ಕ್ಷೇತ್ರದವರಿಗೆ ಕೆಲಸದ ಒತ್ತಡ. ಶುಭಸಂಖ್ಯೆ:6
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net