ನಿತ್ಯಭವಿಷ್ಯ; ಈ ರಾಶಿಯವರಿಗಿಂದು ವಿವಾಹಕ್ಕೆ ಕಂಕಣ ಕೂಡಿಬರಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಆಸ್ತಿ ಮಾರಾಟದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಲೋಹದ ವ್ಯಾಪಾರಸ್ಥರಿಗೆ ಬೇಡಿಕೆ. ರೇಷ್ಮೆ ಬೆಳೆಗಾರರಿಗೆ ಅಧಿಕ ಲಾಭ. ಶುಭಸಂಖ್ಯೆ:1

ವೃಷಭ: ತಾಂತ್ರಿಕ ಪದವೀಧರರಿಗೆ ಕೃಷಿಯ ಕಡೆ ಹೆಚ್ಚು ಒಲವು. ಮಹಿಳಾ ವೈದ್ಯರಿಗೆ ವಿಶೇಷ ದಿನ. ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ. ಶುಭಸಂಖ್ಯೆ: 2

ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರದಿಂದ ಹಣ ಗಳಿಸುವಿರಿ. ಬೃಹತ್ ವಾಹನ ಚಾಲಕರಿಗೆ ಲಾಭ. ವಿವಾಹಕ್ಕೆ ಕಂಕಣ ಕೂಡಿಬರಲಿದೆ. ಶುಭಸಂಖ್ಯೆ:3

ಕಟಕ: ಸಮಾಜಸೇವೆಯಿಂದ ಗೌರವ ಹೆಚ್ಚಲಿದೆ. ಮಕ್ಕಳ ಆರೋಗ್ಯದಲ್ಲಿ ಎಚ್ಚರ. ರಾಜಕೀಯ ರಂಗದವರಿಗೆ ಬಯಸಿದ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 3

ಸಿಂಹ: ಚರ್ಮ ಸಂಬಂಧಿ ಅನಾರೋಗ್ಯ. ಹಾಡುಗಾರರಿಗೆ ಉತ್ತಮ ಅವಕಾಶ. ಭೂ ವ್ಯವಹಾರದಲ್ಲಿ ಹಣ ಹೂಡಿಕೆಗೆ ಸುಸಮಯ. ಶುಭಸಂಖ್ಯೆ: 7

ಕನ್ಯಾ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ ಹೆಚ್ಚಲಿದೆ. ಉದ್ಯಮಿ ಮಹಿಳೆಯರ ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 6

ತುಲಾ: ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟದಲ್ಲಿ ಲಾಭ. ವಿದ್ಯುತ್ ನೌಕರರಿಗೆ ವೇತನ ಹೆಚ್ಚಾಗಲಿದೆ. ಹಳೇ ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 6

ವೃಶ್ಚಿಕ: ಸಂಗಾತಿ ಜತೆಗಿನ ಮನಸ್ತಾಪ ಸುಖಾಂತ್ಯ. ಜಾಹೀರಾತು ಸಂಸ್ಥೆ ನೌಕರರಿಗೆ ವರ್ಗಾವಣೆ. ವಿದೇಶಿವಸ್ತು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2

ಧನಸ್ಸು: ಹೈನುಗಾರಿಕೆ ಉತ್ಪನ್ನ ಮಾರಾಟಗಾರರಿಗೆ ನಿರೀಕ್ಷಿತ ಲಾಭ. ವಕೀಲ ವೃತ್ತಿಯಲ್ಲಿ ಪ್ರಗತಿ. ಆಸ್ತಿ ಖರೀದಿಗೆ ಕುಟುಂಬದ ಸಹಕಾರ. ಶುಭಸಂಖ್ಯೆ:5

ಮಕರ: ಪಾಲುದಾರಿಕೆಯಲ್ಲಿ ಗಳಿಕೆ ಹೆಚ್ಚಲಿದೆ. ಆರಕ್ಷಕ ವರ್ಗದವರಿಗೆ ಮೇಲಧಿಕಾರಿಗಳ ಒತ್ತಡ. ಸಣ್ಣ ಕೈಗಾರಿಕೆ ಪ್ರಾರಂಭಕ್ಕೆ ಸುಸಮಯ. ಶುಭಸಂಖ್ಯೆ: 1

ಕುಂಭ: ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ಧಾರ್ವಿುಕ ಕ್ಷೇತ್ರಗಳ ಭೇಟಿ. ಉದ್ಯೋಗಸ್ಥ ಮಹಿಳೆಯರಿಗೆ ಸಾಲ ಮಂಜೂರಾಗಲಿದೆ. ಶುಭಸಂಖ್ಯೆ:2

ಮೀನ: ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಖಾದಿ ಉಡುಪುಗಳ ಮಾರಾಟದಲ್ಲಿ ಲಾಭ. ಕೇಂದ್ರ ಸರ್ಕಾರಿ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net