ಮೇಷ: ಅವಿವಾಹಿತರಿಗೆ ಬಹುದಿನಗಳ ನಂತರ ವಿವಾಹ ಸಿದ್ಧಿಯಿದೆ. ಉನ್ನತ ವಿದ್ಯಾಭ್ಯಾಸದ ಅವಕಾಶ ಸಿಗಲಿದೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7.ವೃಷಭ: ಕೇಂದ್ರ ಸರ್ಕಾರಿ ನೌಕರರಿಗೆ ವರ್ಗ. ಸ್ವಂತ ಉದ್ಯಮ ಸ್ಥಾಪನೆಗೆ ನಿರ್ಧಾರ. ಸಾರ್ವಜನಿಕ ಮಾಧ್ಯಮದ ವೃತ್ತಿಪರರಿಗೆ ಶುಭದಿನ. ಶುಭಸಂಖ್ಯೆ: 1.ಮಿಥುನ: ಭೂ ಖರೀದಿಗೆ ಆರ್ಥಿಕ ಸಹಾಯ. ಧಾರ್ವಿುಕ ಸಂಸ್ಥೆಯ ನಾಯಕರಿಗೆ ಶುಭದಿನ. ಸೌಂದರ್ಯ ವರ್ಧಕ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8.ಕಟಕ: ಮನೆಯ ಆಸ್ತಿ ವಿವಾದ ಬಗೆಹರಿಯಲಿದೆ. ವಿಚ್ಛೇದಿತರಿಗೆ ದ್ವಿತೀಯ ವಿವಾಹ ಸಿದ್ಧಿ. ಶಿಕ್ಷಣ ಇಲಾಖೆಯ ನೌಕರರಿಗೆ ಬಡ್ತಿ ಭಾಗ್ಯ. ಶುಭಸಂಖ್ಯೆ:1.ಸಿಂಹ: ವ್ಯವಹಾರ ನಿಮಿತ್ತ ವಿದೇಶ ಪ್ರಯಾಣ. ಸಾಂಪ್ರದಾ ಯಿಕ ಕೃಷಿಕರಿಗೆ ಅಧಿಕ ಧನ ಲಾಭ. ನಿವೇಶನ ಮಾರಾಟ ಸುಗಮವಾಗಲಿದೆ. ಶುಭಸಂಖ್ಯೆ:5.ಕನ್ಯಾ: ಐಟಿ ಕ್ಷೇತ್ರದ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯಾಗುವುದು. ಹಳೆಯ ಸ್ನೇಹಿತರ ಭೇಟಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:4.ತುಲಾ: ಲೋಹದ ವ್ಯಾಪಾರಿಗಳಿಗೆ ಇಂದು ಅಧಿಕ ಲಾಭ. ನವದಂಪತಿಗಳಿಗೆ ಶುಭ ಸುದ್ದಿ. ಸೀರೆ ಅಂಗಡಿ ಮಾಲೀಕರಿಗೆ ಅಧಿಕ ಧನ ಲಾಭ. ಶುಭಸಂಖ್ಯೆ: 1.ವೃಶ್ಚಿಕ: ಯಂತ್ರೋಪಕರಣದ ಜತೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಿ. ಬ್ಯಾಂಕಿನ ವ್ಯವಹಾರದಲ್ಲಿ ಯೋಚಿಸಿ ಮುನ್ನಡೆಯಿರಿ. ಶುಭಸಂಖ್ಯೆ:9.ಧನುಸ್ಸು: ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶಗಳು ಸಿಗಲಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲಾಭ. ಇಷ್ಟಪಟ್ಟವರೊಂದಿಗೆ ವಿವಾಹ ಸಿದ್ಧಿ ಶುಭಸಂಖ್ಯೆ: 7.ಮಕರ: ಅಪರಿಚಿತರೊಂದಿಗೆ ಹಣದ ವ್ಯವಹಾರ ಬೇಡ. ಕಚೇರಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ಕುಟುಂಬದಲ್ಲಿ ಶುಭ ಕಾರ್ಯ. ಶುಭಸಂಖ್ಯೆ: 8.ಕುಂಭ: ಹೊಸ ಪರಿಚಯಗಳಿಂದ ಪ್ರಯೋಜನ. ಮಹಿಳೆಯರು ಪ್ರಾರಂಭಿಸಿದ ಉದ್ಯೋಗದಲ್ಲಿ ಪ್ರಗತಿ. ಸಂಗಾತಿಯ ಆರೋಗ್ಯ ಚೇತರಿಕೆ. ಶುಭಸಂಖ್ಯೆ: 6.ಮೀನ: ಒಳಾಂಗಣ ವಿನ್ಯಾಸಕಾರರಿಗೆ ಲಾಭ. ರೆಸ್ಟೋರೆಂಟ್ ಸ್ಥಾಪನೆ ಕಾರ್ಯ ಆರಂಭ. ಕ್ರೀಡಾಪಟುಗಳಿಗೆ ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:9