ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಹಿತಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಇರಲಿ

Daily Astrology
Daily Astrology
Published on
ಮೇಷ: ದಾಂಪತ್ಯದಲ್ಲಿ ಸಂತೋಷದ ದಿನಗಳು. ಪದವಿ ಪಡೆದ ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 7
ವೃಷಭ: ಹಣಕಾಸು ವ್ಯವಹಾರದಲ್ಲಿ ಪ್ರಗತಿ. ವಾಕ್ಚಾತುರ್ಯದಿಂದ ಕಾರ್ಯ ಸಾಧನೆ. ಮನೆಯಲ್ಲಿ ಧಾರ್ವಿುಕ ಕಾರ್ಯಗಳಿಗೆ ಚಾಲನೆ. ಶುಭಸಂಖ್ಯೆ: 3
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ. ಕುಟುಂಬದಲ್ಲಿ ಧಾರ್ವಿುಕ ಕಾರ್ಯ ಜರುಗಲಿದೆ. ಸಂಸ್ಕರಣ ಘಟಕಗಳ ಮಾಲೀಕರಿಗೆ ಧನ ಲಾಭ. ಶುಭಸಂಖ್ಯೆ:3
ಕಟಕ: ಪ್ರೇಮ ವಿವಾಹಕ್ಕೆ ಅಡ್ಡಿ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ ಸಿಗಲಿದೆ. ವಿದೇಶಿ ಕಂಪನಿಯ ಉದ್ಯೋಗಸ್ಥರಿಗೆ ವಿಶೇಷ ದಿನ. ಶುಭಸಂಖ್ಯೆ: 7
ಸಿಂಹ: ನಿಮ್ಮ ಕಾರ್ಯಕ್ಷಮತೆಗೆ ಅಧಿಕಾರಿಗಳಿಂದ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಹಿತಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 8
ಕನ್ಯಾ: ಪಾನೀಯ ಮಾರಾಟಗಾರರಿಗೆ ನಿರೀಕ್ಷೆಗೂ ಮೀರಿ ಲಾಭ. ವಿಚ್ಛೇದನ ಕೇಸ್ ಇತ್ಯರ್ಥ. ಬಾಳೆ, ಜೋಳ ಬೆಳೆಗಾರರಿಗೆ ನೆಮ್ಮದಿ. ಶುಭಸಂಖ್ಯೆ:9
ತುಲಾ: ಯಂತ್ರೋಪಕರಣ ದುರಸ್ತಿಗೆ ವೆಚ್ಚ. ಲೆಕ್ಕ ಪರೀಕ್ಷಕರಿಗೆ ಅಧಿಕ ಧನ ಲಾಭ. ಹಿರಿಯ ಕಾನೂನು ಸಲಹೆಗಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7
ವೃಶ್ಚಿಕ: ಗೃಹಬಳಕೆ ವಸ್ತು ಮಾರಾಟಸ್ಥರಿಗೆ ಲಾಭ. ಪಿತ್ರಾರ್ಜಿತ ಆಸ್ತಿ ಲಭ್ಯ. ಆಭರಣಗಳ ಖರೀದಿಯಲ್ಲಿ ಲಾಭ. ಕುಶಲ ಕಲೆಗಾರರಿಗೆ ಬೇಡಿಕೆ. ಶುಭಸಂಖ್ಯೆ: 1
ಧನುಸ್ಸು: ಅಪರಿಚಿತರ ಬಗ್ಗೆ ಎಚ್ಚರ ವಹಿಸಲೇಬೇಕು. ವಿದೇಶದಲ್ಲಿರುವ ಮಗನಿಂದ ಶುಭವಾರ್ತೆ. ಜಲ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಮಕರ: ಯಕ್ಷಗಾನ ಮತ್ತು ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ. ಶುಭಸಂಖ್ಯೆ: 8
ಕುಂಭ: ಅಡಿಕೆ ಸಂಶೋಧಕರಿಗೆ ಉತ್ತಮ ಅವಕಾಶ ಸಿಗಲಿದೆ. ಶಿಕ್ಷಕರಿಗೆ ಅನಗತ್ಯ ತಿರುಗಾಟ. ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಶುಭಸಂಖ್ಯೆ: 5
ಮೀನ: ರಾಜಕೀಯದವರಿಗೆ ಅನಿರೀಕ್ಷಿತವಾಗಿ ಉನ್ನತ ಸ್ಥಾನ. ವ್ಯವಹಾರದಲ್ಲಿ ಯಶಸ್ಸು. ಪದವೀಧರ ಸ್ತ್ರೀಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ:5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net