ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಪಿತ್ರಾರ್ಜಿತ ಆಸ್ತಿ ಗೊಂದಲ ಪರಿಹಾರ

Daily Astrology
Daily Astrology
Published on

ಮೇಷ ರಾಶಿ

ಮಕ್ಕಳ ಸಾಧನೆಗೆ ಪೂರಕ ವಾತಾವರಣ. ವೈದ್ಯರಿಗೆ ಸಾರ್ವಜನಿಕವಾಗಿ ಗೌರವ ಸಿಗಲಿದೆ. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 4

ವೃಷಭ ರಾಶಿ

ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಸಿಗಲಿದೆ. ಅವಿವಾಹಿತ ಪುರುಷರಿಗೆ ವಿವಾಹ ನಿಶ್ಚಯ. ಉದರ ಸಂಬಂಧಿ ರೋಗ ನಿವಾರಣೆ. ಶುಭಸಂಖ್ಯೆ: 1

ಮಿಥುನ ರಾಶಿ

ಸರ್ಕಾರಿ ಹರಾಜಿನಲ್ಲಿ ಅವಕಾಶ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ಗೊಂದಲ ಪರಿಹಾರ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 8

ಕಟಕ ರಾಶಿ

ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಹೊಸ ವಾಹನ ಕೊಳ್ಳುವ ನಿರ್ಧಾರ ಮಾಡುವಿರಿ. ಸಂಗೀತಗಾರರಿಗೆ ಶುಭದಾಯಕ ದಿನ. ಶುಭಸಂಖ್ಯೆ: 8

ಸಿಂಹ ರಾಶಿ

ನಾಟ್ಯ ತರಬೇತುದಾರರಿಗೆ ವಿಶೇಷ ವೇದಿಕೆ ಲಭ್ಯ. ಆರಕ್ಷಕರಿಗೆ ವರ್ಗಾವಣೆ. ಪದವಿ ಪ್ರಾಪ್ತಿಯಲ್ಲಿದ್ದ ತೊಂದರೆ ನಿವಾರಣೆ. ಶುಭಸಂಖ್ಯೆ: 3

ಕನ್ಯಾ ರಾಶಿ

ನಗೆ ಭಾಷಣಕಾರರಿಗೆ ಅನಿರೀಕ್ಷಿತ ಧನಲಾಭ. ಕೊಟ್ಟ ಹಣ ಬಡ್ಡಿ ಸಮೇತ ತಿರುಗಿ ಬರಲಿದೆ. ಆಭರಣಗಳ ಖರೀದಿಗೆ ವೆಚ್ಚ. ಶುಭಸಂಖ್ಯೆ: 2

ತುಲಾ ರಾಶಿ

ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗಲಿದೆ. ನೂತನ ದಂತ ಚಿಕಿತ್ಸಾಲಯ ಸ್ಥಾಪನೆಗೆ ಗಂಭೀರ ಚಿಂತನೆ. ಸಕ್ಕರೆ ಕಾಯಿಲೆ ಸಮಸ್ಯೆ ಕಾಡೀತು. ಶುಭಸಂಖ್ಯೆ: 7

ವೃಶ್ಚಿಕ ರಾಶಿ

ಹೊಸ ವಾಹನ ಖರೀದಿಗೆ ನಿರ್ಧಾರ. ರೇಷ್ಮೆ ಮತ್ತು ಜೋಳ ಕೃಷಿಕರಿಗೆ ಸರ್ಕಾರದಿಂದ ಸಹಾಯ. ಸ್ಟೇಷನರಿ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 3

ಧನು ರಾಶಿ

ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗುತ್ತದೆ. ಪಿತ್ರಾರ್ಜಿತ ಆಸ್ತಿ ವಿವಾದ ಕೊನೆಗೊಳ್ಳಲಿದೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 3

ಮಕರ ರಾಶಿ

ಜೇನು ಕೃಷಿಯಲ್ಲಿ ಮನ್ನಣೆ. ಹೊಸದಾಗಿ ಪ್ರಾರಂಭಿಸಿದ ವ್ಯಾಪಾರದಲ್ಲಿ ಅನುಕೂಲ. ಸಿಹಿ ತಿಂಡಿ ಮಳಿಗೆ ಮಾಲೀಕರಿಗೆ ಲಾಭ. ಶುಭಸಂಖ್ಯೆ: 7

ಕುಂಭ ರಾಶಿ

ರಾಜಕಾರಣಿಗಳಿಗೆ ವೈಫಲ್ಯ ಕಾಡಲಿದೆ. ಬಹುನಿರೀಕ್ಷಿತ ವ್ಯಕ್ತಿಯ ಭೇಟಿಯಾಗುವುದು. ಧಾರ್ಮಿಕ ಕ್ಷೇತ್ರದ ಮುಖಂಡರಿಗೆ ಒತ್ತಡ. ಶುಭಸಂಖ್ಯೆ: 4

ಮೀನ ರಾಶಿ

ಕಬ್ಬಿಣ, ಸಿಮೆಂಟು, ಮರಳು ವ್ಯಾಪಾರದಲ್ಲಿ ಲಾಭ. ಔಷಧ ವ್ಯಾಪಾರದಲ್ಲಿ ಅಧಿಕ ಆದಾಯ. ಹಳೇ ಸ್ನೇಹದ ಅವಲೋಕನ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net