

ಮೇಷ: ವಿರೋಧಿಗಳ ಮಟ್ಟ ಹಾಕುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಶುಭಸಂಖ್ಯೆ: 6
ವೃಷಭ: ಬಟ್ಟೆ ವ್ಯಾಪಾರಿಗಳಿಗೆ ಧನಾಗಮನವಾಗಲಿದೆ. ಟ್ರಾವೆಲ್ಸ್ನವರಿಗೆ ಚಾಲಕರ ಅಭಾವ. ಹಿರಿಯರ ಮಾತುಗಳನ್ನು ಗೌರವಿಸಿ. ಶುಭಸಂಖ್ಯೆ: 7
ಮಿಥುನ: ಬೃಹತ್ ವಾಹನ ಖರೀದಿ ಯೋಗ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ನಾಟ್ಯ ತರಬೇತು ದಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7
ಕಟಕ: ಕುಟುಂಬದಲ್ಲಿ ಮಗಳ ಮದುವೆಯ ಸಂಭ್ರಮ. ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಮಾತಿನ ಮೇಲೆ ಹಿಡಿತ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 4
ಸಿಂಹ: ದೃಷ್ಟಿ ದೋಷ ಶಮನವಾಗಲಿದೆ. ಕೊಟ್ಟ ಹಣ ಸಕಾಲಕ್ಕೆ ತಿರುಗಿ ಬರಲಿದೆ. ಕಾಫಿ ಬೆಳೆಗಾರರಿಗೆ ಲಾಭದಲ್ಲಿ ಅನಿರೀಕ್ಷಿತ ಏರಿಕೆ. ಶುಭಸಂಖ್ಯೆ: 9
ಕನ್ಯಾ: ಮನಸ್ಸಿನ ಗೊಂದಲಕ್ಕೆ ಪರಿಹಾರ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ನೆರವು. ದುಶ್ಚಟದಿಂದ ದೂರವಿರಿ. ಶುಭಸಂಖ್ಯೆ: 6
ತುಲಾ: ಇಷ್ಟ ವಸ್ತುಗಳನ್ನು ಖರೀದಿಸುವಿರಿ. ಭೂಲಾಭ. ಇಷ್ಟಪಟ್ಟು ಕಲಿಯುವ ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ, ತಾಳ್ಮೆ ಅಗತ್ಯ. ಶುಭಸಂಖ್ಯೆ: 3
ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಕುಟುಂಬದ ಸಂಭ್ರಮದಿಂದ ವಂಚಿತರಾಗುವಿರಿ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 2
ಧನುಸ್ಸು: ತೀರ್ಥ ಕ್ಷೇತ್ರ ದರ್ಶನ ಮಾಡುವಿರಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ಗೃಹ ನೋಂದಣಿ ಕೆಲಸದಲ್ಲಿ ಜಯ ಸಿಗಲಿದೆ. ಶುಭಸಂಖ್ಯೆ: 7
ಮಕರ: ಶುಭ ಸುದ್ದಿ ಕೇಳುವಿರಿ. ಮಾನಸಿಕ ನೆಮ್ಮದಿಯ ದಿನ. ಸಕಾಲದಲ್ಲಿ ಕೈಗೊಂಡ ಕೆಲಸ ಸಂಪೂರ್ಣ ಆಗಲಿದೆ. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 1
ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಲಾಭ. ರಾಜಕೀಯರಂಗದವರಿಗೆ ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 1
ಮೀನ: ಕಚೇರಿಯಲ್ಲಿ ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ನೆಮ್ಮದಿಯ ದಿನ. ಅನಗತ್ಯ ಹಸ್ತಕ್ಷೇಪ ಮಾಡಬೇಡಿ. ಶುಭಸಂಖ್ಯೆ: 8