ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಕೊಟ್ಟ ಹಣ ತಿರುಗಿ ಬರಲಿದೆ

Daily Astrology
Daily Astrology
Published on
ಮೇಷ: ವಾಹನ ಓಡಿಸುವಾಗ ಎಚ್ಚರಿಕೆ ಇರಲಿ. ಸಾಧುಸಂತರ ದರ್ಶನದ ಸದವಕಾಶ ಸಿಗಲಿದೆ. ಜುವೆಲ್ಲರಿ ಖರೀದಿಗೆ ನಿರ್ಧರಿಸುವಿರಿ. ಶುಭಸಂಖ್ಯೆ: 9
ವೃಷಭ: ರೈಲ್ವೆ ಇಲಾಖೆಯ ನೌಕರರಿಗೆ ಬಡ್ತಿ ಸಿಗುವುದು. ಮೆಕಾನಿಕಲ್ ವೃತ್ತಿಯವರಿಗೆ ಬೇಡಿಕೆ ಹೆಚ್ಚಲಿದೆ. ಜೇನು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 4
ಮಿಥುನ: ಅನಿರೀಕ್ಷಿತ ಬದಲಾವಣೆಯೊಂದಿಗೆ ಸುಖ ಜೀವನ. ಪೊಲೀಸ್ ಇಲಾಖೆಯಲ್ಲಿ ನೌಕರಿ ಲಭ್ಯ. ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಶುಭಸಂಖ್ಯೆ: 8
ಕಟಕ: ಚರ್ಮ ಸಂಬಂಧಿ ರೋಗಕ್ಕೆ ಚಿಕಿತ್ಸೆ ಸಿಗಲಿದೆ. ದಂತ ವೈದ್ಯರಿಗೆ ಲಾಭ. ಚಿಕ್ಕಪುಟ್ಟ ಅಂಗಡಿ ಮಾಲೀಕರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2
ಸಿಂಹ: ಅಡುಗೆ ಗುತ್ತಿಗೆದಾರರ ಹಣ ಸಂಪಾದನೆ ವೃದ್ಧಿ. ರಾಜಕೀಯದಲ್ಲಿ ಹಿತಶತ್ರುಗಳಿಂದ ತೊಂದರೆ. ಸಾಯಂಕಾಲ ಶುಭ ಸುದ್ದಿ. ಶುಭಸಂಖ್ಯೆ: 2
ಕನ್ಯಾ: ವೈದ್ಯರಿಗೆ ವಿದೇಶ ಪ್ರವಾಸ. ರೈತರಿಗೆ ಸಹಕಾರ ಸಂಘದಿಂದ ಸಾಲ ಮಂಜೂರು ಆಗಲಿದೆ. ಆರ್ಥಿಕತೆಯಲ್ಲಿ ಪ್ರಗತಿ ಕಾಣಲಿದ್ದೀರಿ. ಶುಭಸಂಖ್ಯೆ:4
ತುಲಾ: ನಿವೇಶನ ಖರೀದಿಗೆ ಸುಸಮಯ. ಕಟ್ಟಡ ಸಾಮಗ್ರಿಗಳ ಮಾರಾಟದಲ್ಲಿ ಲಾಭ. ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳಿಗೆ ವರ್ಗ. ಶುಭಸಂಖ್ಯೆ:8
ವೃಶ್ಚಿಕ: ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಜಾಹೀರಾತು ಸಂಸ್ಥೆಯಲ್ಲಿ ಉದ್ಯೋಗ. ವಿದೇಶಿ ವಿನಿಮಯದಲ್ಲಿ ಲಾಭಗಳಿಸುವಿರಿ. ಶುಭಸಂಖ್ಯೆ:1
ಧನುಸ್ಸು: ಸಾಕು ಪ್ರಾಣಿಗಳ ಖರೀದಿಗೆ ಮನಸ್ಸು ಮಾಡುವಿರಿ. ಐಟಿ ಉದ್ಯಮದಲ್ಲಿ ಪ್ರಗತಿ. ರೇಷ್ಮೆ ಕೃಷಿಯಿಂದ ಅಧಿಕ ಲಾಭಗಳಿಸುವಿರಿ. ಶುಭಸಂಖ್ಯೆ: 9
ಮಕರ: ಹೊಸ ಪಾಲುದಾರರ ಆಗಮನವಾಗಲಿದೆ. ಕೊಟ್ಟ ಹಣ ತಿರುಗಿ ಬರಲಿದೆ. ಉದ್ಯೋಗದ ಅತಂತ್ರತೆ ಕೊನೆಗೂ ನಿವಾರಣೆ ಆಗಲಿದೆ. ಶುಭಸಂಖ್ಯೆ: 7
ಕುಂಭ: ಪ್ರಭಾವಿ ವ್ಯಕ್ತಿಗಳ ಭೇಟಿ. ಸ್ವಂತ ಉದ್ಯಮ ಪ್ರಾರಂಭಿಸಲು ನಿರ್ಧರಿಸುವಿರಿ. ಬ್ಯಾಂಕ್ ವ್ಯವಹಾರ ಸುಲಲಿತವಾಗಿ ನಡೆಯಲಿದೆ. ಶುಭಸಂಖ್ಯೆ: 7
ಮೀನ: ಅವಿವಾಹಿತರಿಗೆ ವಿವಾಹ ಸಿದ್ಧಿ. ಸಾರಿಗೆ ಸಂಸ್ಥೆ ನೌಕರರಿಗೆ ವರ್ಗಾವಣೆ ಸಾಧ್ಯತೆ. ಉದ್ಯೋಗ ಬದಲಾವಣೆ ಪ್ರಯತ್ನ ಫಲಿಸಲಿದೆ. ಶುಭಸಂಖ್ಯೆ: 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net