ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ನಂಬಿಕೆ ದ್ರೋಹ ವಾಗುವ ಸಾಧ್ಯತೆ

Daily Astrology
Daily Astrology
Published on
ಮೇಷ: ನ್ಯಾಯವಾದಿಗಳಾಗಿದ್ದಲ್ಲಿ ಪ್ರಯತ್ನದಿಂದ ಪ್ರಗತಿ ಸಾಧ್ಯ. ಮಕ್ಕಳಿಗೋಸ್ಕರ ಹಣ ಖರ್ಚು. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 8
ವೃಷಭ: ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಲಿದೆ. ವಿರೋಧಿಗಳಿಂದಲೂ ನಿಮ್ಮ ಕೆಲಸಕ್ಕೆ ಶ್ಲಾಘನೆ. ಪಾಲುದಾರಿಕೆಯಲ್ಲಿ ಲಾಭ ಸಿಗಲಿದೆ. ಶುಭಸಂಖ್ಯೆ: 9
ಮಿಥುನ: ಹಿತೈಷಿಗಳ ಸಲಹೆಯಿಂದ ಆರ್ಥಿಕ ನಷ್ಟ ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದತ್ತ ಗಮನ ಇಡಿ. ವಿದೇಶ ಪ್ರಯಾಣಕ್ಕೆ ಸಿದ್ಧತೆ. ಶುಭಸಂಖ್ಯೆ:5
ಕಟಕ: ಬೇಕರಿ ಪದಾರ್ಥಗಳು, ಸಿಹಿ ತಿಂಡಿಗಳ ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ಶುಭ ಕಾರ್ಯಕ್ರಮ ಆಯೋಜಕರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7
ಸಿಂಹ: ಪ್ರಮುಖ ನಿರ್ಧಾರದಲ್ಲಿ ವಿಳಂಬ. ಆಸ್ತಿ ವ್ಯವಹಾರಗಳಲ್ಲಿ ತೃಪ್ತಿಕರ ನಿರ್ಧಾರ. ಸಮಾಜ ಸೇವೆಯಲ್ಲಿ ಭಾಗವಹಿಸುವ ಅವಕಾಶ. ಶುಭಸಂಖ್ಯೆ:2
ಕನ್ಯಾ: ವೈಯಕ್ತಿಕ ಸಮಸ್ಯೆಗಳು ಬಗೆಹರಿಯಲಿವೆ. ಸಾಲಗಾರರ ಕಿರುಕುಳದಿಂದ ಮುಕ್ತಿ ಸಿಗುವುದು. ಪತ್ರ ವ್ಯವಹಾರದಿಂದ ಆದಾಯ. ಶುಭಸಂಖ್ಯೆ:6
ತುಲಾ: ಸ್ವಯಂ ಉದ್ಯೋಗದವರಿಗೆ ಪ್ರಗತಿ. ಚಲನಚಿತ್ರ ಗಾಯಕರಿಗೆ ಅವಕಾಶಗಳ ಮಹಾಪೂರ. ಧಾರ್ವಿುಕ ವೃತ್ತಿಪರರಿಗೆ ಶುಭದಿನ.ಶುಭಸಂಖ್ಯೆ: 3
ವೃಶ್ಚಿಕ: ಅನಿರೀಕ್ಷಿತ ಮೂಲದಿಂದ ಆರ್ಥಿಕ ಸಹಾಯ. ಸಾರಿಗೆ ಸಂಸ್ಥೆ ನೌಕರರಿಗೆ ಆದಾಯ ಹೆಚ್ಚಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಭಡ್ತಿ್ತ ಶುಭಸಂಖ್ಯೆ:2
ಧನುಸ್ಸು: ಬ್ಯಾಂಕ್​ನಲ್ಲಿ ಸಾಲ ದೊರೆಯಲಿದೆ. ಕೃಷಿಕರಿಗೆ ತಮ್ಮ ಉತ್ಪನ್ನದಿಂದ ಜಾಸ್ತಿಹಣ ಗಳಿಸುವ ಅವಕಾಶ. ಸಂಶೋಧಕರಿಗೆ ಮನ್ನಣೆ. ಶುಭಸಂಖ್ಯೆ:6
ಮಕರ: ಪಾಲುದಾರಿಕೆಯಲ್ಲಿ ತಲೆದೋರಿರುವ ಗೊಂದಲ ನಿವಾರಣೆ. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 8
ಕುಂಭ: ಕೃಷಿಯಂತ್ರ ಹೊಂದಿರುವವರಿಗೆ ಆದಾಯ ಹೆಚ್ಚಲಿದೆ. ವಿದೇಶಿ ವಿನಿಮಯದಲ್ಲಿ ಲಾಭಗಳಿಸುವಿರಿ. ನಿಮ್ಮ ಪ್ರತಿಭೆಗೆ ಸೂಕ್ತವಾದ ವೇದಿಕೆ ಲಭ್ಯ. ಶುಭಸಂಖ್ಯೆ: 4
ಮೀನ: ನಿಮ್ಮ ಸಾಮರ್ಥ್ಯಕ್ಕೆ ಸೂಕ್ತವಾದ ಉದ್ಯೋಗ ಲಭಿಸಲಿದೆ. ನಂಬಿಕೆ ದ್ರೋಹ ವಾಗುವ ಸಾಧ್ಯತೆ. ಸರ್ಕಾರಿ ಕೆಲಸಗಳಿಗೆ ಶೀಘ್ರಗತಿ. ಶುಭಸಂಖ್ಯೆ: 6
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net