ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅವಿವಾಹಿತರಿಗೆ ವಿವಾಹ ಯೋಗ

Astrology
Astrology
Published on
ಮೇಷ: ಮಕ್ಕಳ ಸಾಧನೆ ಪ್ರಶಂಸೆಗೆ ಪಾತ್ರವಾಗುತ್ತದೆ. ಪಾಲಕರ ಆರೋಗ್ಯದ ಕಾಳಜಿ ಅನಿವಾರ್ಯ. ಕಚೇರಿಯಲ್ಲಿ ಹೊಸ ಜವಾಬ್ದಾರಿ. ಶುಭಸಂಖ್ಯೆ: 8
ವೃಷಭ: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಉತ್ತಮ ಬೆಳವಣಿಗೆ. ಆರ್ಥಿಕ ಸಲಹೆ ಪಡೆದುಕೊಳ್ಳುವುದ ರಿಂದ ಯಶಸ್ವಿಯಾಗುವಿರಿ. ಶುಭಸಂಖ್ಯೆ: 3
ಮಿಥುನ: ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ. ವಿದೇಶ ವ್ಯವಹಾರ ದಿಂದ ಹೆಚ್ಚು ಲಾಭಗಳಿಸುವಿರಿ. ಶುಭಸಂಖ್ಯೆ:1
ಕಟಕ: ಕುಟುಂಬದ ಸದಸ್ಯರೊಂದಿಗೆ ಪುಣ್ಯಕ್ಷೇತ್ರ ಭೇಟಿ. ನೂತನ ವಸ್ತು ಖರೀದಿ. ದಾನ ಮಾಡುವುದರಿಂದ ಮನಃಶಾಂತಿ ಪಡೆಯುವಿರಿ. ಶುಭಸಂಖ್ಯೆ: 7
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡುವಿರಿ. ಈ ದಿನ ಹಣದ ಹೂಡಿಕೆ ಮಾಡದಿರುವುದು ಒಳ್ಳೆಯದು. ಶುಭಸಂಖ್ಯೆ:2
ಕನ್ಯಾ: ವೈಯಕ್ತಿಕ ವಿಚಾರ ಹಂಚಿಕೊಳ್ಳಬೇಡಿ. ಸೇವಕರ ನೆರವಿನಿಂದ ಆಪತ್ತು ನಿವಾರಣೆ. ಉದ್ಯೋಗ ಬದಲಾವಣೆಯಿಂದ ಅನುಕೂಲ. ಶುಭಸಂಖ್ಯೆ: 4
ತುಲಾ: ಸಂಗೀತ ಕಲಾವಿದರಿಗೆ ಆತ್ಮವಿಶ್ವಾಸ ಹೆಚ್ಚುವುದು. ಸ್ನೇಹಿತರಿಂದ ಸಲಹೆ. ಸ್ಥಗಿತಗೊಂಡಿದ್ದ ಗೃಹ ನಿರ್ಮಾಣ ಕಾರ್ಯಗಳಿಗೆ ಚಾಲನೆ.ಶುಭಸಂಖ್ಯೆ: 6
ವೃಶ್ಚಿಕ: ಹೊಸ ಉದ್ಯೋಗಕ್ಕೆ ಸೇರಲು ಸಿದ್ಧತೆ. ಶ್ರೀಮಂತಿಕೆಯ ಬದುಕಿಗೆ ದುಂದುವೆಚ್ಚ. ಯೋಜನೆಗಳು ವ್ಯವಸ್ಥಿತ ರೂಪದಲ್ಲಿ ಸಾಗಲಿವೆ. ಶುಭಸಂಖ್ಯೆ:1
ಧನುಸ್ಸು: ಅವಿವಾಹಿತರಿಗೆ ವಿವಾಹ ಯೋಗ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಆತ್ಮೀಯ ಸ್ನೇಹಿತನ ಭೇಟಿಯಾಗುವುದು. ಶುಭಸಂಖ್ಯೆ: 6
ಮಕರ: ಹೂವು-ಹಣ್ಣು, ಹಾಲು ವ್ಯಾಪಾರಿಗಳಿಗೆ ಲಾಭ. ಉದರಸಂಬಂಧಿ ವ್ಯಾಧಿಗಳು ಗುಣವಾಗಲಿದೆ. ಕೃಷಿ ಮೂಲಗಳಿಂದ ಧನಾರ್ಜನೆ. ಶುಭಸಂಖ್ಯೆ: 8
ಕುಂಭ: ವೀಸಾ ಸಮಸ್ಯೆ ನಿವಾರಣೆ, ವಿದೇಶ ಪ್ರವಾಸ. ಯಾರೂ ನಿಮ್ಮ ಉದಾರತೆಯ ದುರುಪಯೋಗ ಮಾಡಿಕೊಳ್ಳದಂತೆ ಜಾಗೃತವಹಿಸಿ. ಶುಭಸಂಖ್ಯೆ: 9
ಮೀನ: ಹಲವು ದಿನಗಳ ಆರ್ಥಿಕ ಸಮಸ್ಯೆಗೆ ಉತ್ತರ ಸಿಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಪ್ರಯೋಗ ಯಶಸ್ವಿಯಾಗಲಿದೆ.ಶುಭಸಂಖ್ಯೆ: 7
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net