ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಕಂಕಣ ಭಾಗ್ಯ ಕೂಡಿ ಬರಲಿದೆ

Daily ASTROLOGY
Daily ASTROLOGY
Published on
ಮೇಷ: ಪೀಠೋಪಕರಣಗಳ ಖರೀದಿಗೆ ನಿರೀಕ್ಷೆ ಮೀರಿ ವೆಚ್ಚವಾದೀತು. ಲೋಹಗಳ ವ್ಯಾಪಾರಸ್ಥರಿಗೆ ಬೇಡಿಕೆ. ರೇಷ್ಮೆ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 9
ವೃಷಭ: ಯುವಕರಿಗೆ ಕೃಷಿಯ ಕಡೆ ಒಲವು. ಮಹಿಳಾ ವೈದ್ಯರಿಗೆ ಉತ್ತಮ ಅವಕಾಶ. ಬ್ಯಾಂಕಿಂಗ್ ಸಂಸ್ಥೆಗಳ ಮಾಲೀಕರಿಗೆ ಅಧಿಕ ಲಾಭ. ಶುಭಸಂಖ್ಯೆ: 9
ಮಿಥುನ: ರಿಯಲ್ ಎಸ್ಟೇಟ್ನಲ್ಲಿ ಆದಾಯ. ವಾಹನ ಚಾಲಕರಿಗೆ ಪೊಲೀಸರ ಜತೆ ಘರ್ಷಣೆ. ಅವಿವಾಹಿತರಿಗೆ ಕಂಕಣ ಭಾಗ್ಯ ಬರಲಿದೆ. ಶುಭಸಂಖ್ಯೆ: 6
ಕಟಕ: ಆರೋಗ್ಯದ ವಿಷಯದಲ್ಲಿ ಕಾಳಜಿಯಿರಲಿ. ಕೈಗಾರಿಕಾ ವ್ಯವಹಾರದಲ್ಲಿ ಶುಭ ದಿನ. ಉಡುಪು ವಿನ್ಯಾಸಕರಿಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 4
ಸಿಂಹ: ಚರ್ಮವ್ಯಾಧಿ ವಾಸಿಯಾಗಲಿದೆ. ಹಾಡುಗಾರರಿಗೆ ಅನಿರೀಕ್ಷಿತ ಉತ್ತಮ ಅವಕಾಶ ದೊರೆಯಲಿದೆ. ರಾಜಕಾರಣಿಗಳಿಗೆ ಸುಸಮಯ. ಶುಭಸಂಖ್ಯೆ: 3
ಕನ್ಯಾ: ಹೂ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ಆದಾಯ. ರೈತರ ಹೊಸ ಫಸಲಿಗೆ ಹೆಚ್ಚುವ ಬೇಡಿಕೆ. ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 8
ತುಲಾ: ಗೃಹ ಮಾರಾಟ ವ್ಯವಹಾರದಲ್ಲಿ ಲಾಭ. ವಿದ್ಯುತ್ ಸ್ಥಾವರದ ಕಾರ್ವಿುಕರಿಗೆ ವೇತನ ಹೆಚ್ಚಳ ಅಮೂಲ್ಯ. ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 8
ವೃಶ್ಚಿಕ: ಆರೋಗ್ಯದಲ್ಲಿ ಉತ್ತಮ ಚೇತರಿಕೆ. ಜಾಹೀರಾತು ಸಂಸ್ಥೆಗಳ ಕೆಲಸಗಾರರಿಗೆ ಲಾಭ. ವಿದೇಶಿ ವಸ್ತು ಉತ್ಪಾದಕರಿಗೆ ವಿಶೇಷ ಬೇಡಿಕೆ. ಶುಭಸಂಖ್ಯೆ: 9
ಧನುಸ್ಸು: ಹೈನುಗಾರಿಕೆಯಲ್ಲಿ ಹೆಚ್ಚು ಲಾಭ ಸಿಗಲಿದೆ. ಮನರಂಜನಾ ಕ್ಷೇತ್ರದಲ್ಲಿ ಅವಕಾಶ. ಕಾನೂನು, ವಾಣಿಜ್ಯವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 3
ಮಕರ: ಪಾಲುದಾರಿಕೆಯಲ್ಲಿ ಹಣ ಗಳಿಕೆ. ಆರಕ್ಷಕ ವರ್ಗದವರಿಗೆ ದೊಡ್ಡ ಮೊತ್ತದ ಹಣ ಬರಲಿದೆ. ಸಣ್ಣ ಕೈಗಾರಿಕೆ ಪ್ರಾರಂಭಕ್ಕೆ ಸುಸಮಯ.ಶುಭಸಂಖ್ಯೆ: 7
ಕುಂಭ: ಧಾರ್ವಿುಕ ಕ್ಷೇತ್ರದ ವಿದ್ಯಾರ್ಜನೆಯಲ್ಲಿ ಆಸಕ್ತಿ ತಾಳುವಿರಿ. ಸ್ವಯಂ ಉದ್ಯೋಗಸ್ಥರಿಗೆ ಆರ್ಥಿಕ ಸ್ಥಿತಿ ಕ್ರಮೇಣ ಚೇತರಿಸಿಕೊಳ್ಳಲಿದೆ. ಶುಭಸಂಖ್ಯೆ: 6
ಮೀನ: ವೈವಾಹಿಕ ಜೀವನದ ಸಂತಸವನ್ನು ಕಾಣಲಿದ್ದೀರಿ. ಕುಶಲಕರ್ವಿುಗಳಿಗೆ ಬೇಡಿಕೆ. ಶಿಕ್ಷಣ ಕ್ಷೇತ್ರದ ಸರ್ಕಾರಿ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ:1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net