ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಇಂದಿನಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಹೊಸ ಕೆಲಸಗಳಲ್ಲಿ ಯಶಸ್ಸು. ಮಗಳ ಮದುವೆಗೆ ಆತ್ಮೀಯರ ಸಹಕಾರ ದೊರೆಯುತ್ತದೆ. ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಶುಭಸಂಖ್ಯೆ: 4

ವೃಷಭ: ಸಾಮಾಜಿಕ ಕಾರ್ಯಗಳಲ್ಲಿ ಸಾಧನೆ ಮಾಡುವಿರಿ. ಆಸ್ತಿ ವಿಷಯದಲ್ಲಿ ಸಂಧಾನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಸ್ಥೈರ್ಯ ಹೆಚ್ಚುತ್ತದೆ. ಶುಭಸಂಖ್ಯೆ:7

ಮಿಥುನ: ಲೋಹಗಳ ವ್ಯಾಪಾರದಲ್ಲಿ ಲಾಭ. ದೂರ ಪ್ರಯಾಣ ಯಶಸಿಯಾಗುವುದು. ಹೊಸ ಜನರ ಸಂಪರ್ಕದಿಂದ ಸಮಸ್ಯೆಯಾದೀತು. ಶುಭಸಂಖ್ಯೆ:5

ಕಟಕ: ಇಂದಿನಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಳೆಯ ಸ್ನೇಹಿತರ ಭೇಟಿಯಿಂದ ಪ್ರಯೋಜನ. ಉದ್ಯೋಗದಲ್ಲಿ ಬದಲಾವಣೆ. ಶುಭಸಂಖ್ಯೆ: 4

ಸಿಂಹ: ಭೂ ವ್ಯವಹಾರದಲ್ಲಿ ಒತ್ತಡ ಇದ್ದರೂ ಉತ್ತಮ ಫಲಿತಾಂಶ. ಹಿರಿಯರ ಸಲಹೆ ಅಗತ್ಯ. ಯೋಜನೆ ಅನುಷ್ಠಾನಕ್ಕೆ ಸುಸಮಯ. ಶುಭಸಂಖ್ಯೆ:1

ಕನ್ಯಾ: ತಂದೆ -ತಾಯಿ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮನೆ ನಿರ್ವಣದಲ್ಲಿ ಪ್ರಗತಿ. ಮನೋಧೈರ್ಯ ಕಳೆದುಕೊಳ್ಳಬೇಡಿ. ಶುಭಸಂಖ್ಯೆ:2

ತುಲಾ: ಸರಕು ಸಾಗಣೆಯಲ್ಲಿ ಧನಲಾಭ. ಕುಟುಂಬದಲ್ಲಿ ಸಂತೋಷದ ವಾತಾವರಣ. ಪ್ರೀತಿ ಪ್ರೇಮ ವಿಷಯದಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ:7

ವೃಶ್ಚಿಕ: ವೀಸಾ ಪಡೆಯಲು ಅನುಕೂಲ. ಐಟಿ ಉದ್ಯಮದಲ್ಲಿನ ಯೋಜನೆ ಫಲಕಾರಿ. ಸ್ನೇಹಿತರ ನೆರವಿನಿಂದ ಜವಾಬ್ದಾರಿ ನಿರ್ವಹಣೆ. ಶುಭಸಂಖ್ಯೆ:3

ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ವಿಳಂಬವಾದರೂ ಯಶಸ್ಸು. ಪುಣ್ಯ ಕ್ಷೇತ್ರದ ಪ್ರಯಾಣದ ಯೋಗ. ತಾಯಿ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 7

ಮಕರ: ಹಠದದಿಂದ ಅವಕಾಶ ಕೈತಪ್ಪಲಿದೆ. ಬ್ಯಾಂಕ್ ವ್ಯವಹಾರ ಬದಲಾವಣೆ ಅಗತ್ಯ. ಪ್ರಮುಖ ನಿರ್ಧಾರಕ್ಕೆ ಮಾರ್ಗದರ್ಶನ ಅಗತ್ಯ. ಶುಭಸಂಖ್ಯೆ:6

ಕುಂಭ: ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ. ನಿಮ್ಮ ಸಮಾಜಮುಖಿ ಕೆಲಸಕ್ಕೆ ಆತ್ಮೀಯರಿಂದ ಬೆಂಬಲ. ಕೆಲಸದ ಪ್ರಗತಿ ತೃಪ್ತಿದಾಯಕ. ಶುಭಸಂಖ್ಯೆ:2

ಮೀನ: ಕಲಾವಿದರಿಗೆ ಹೊಸ ಅವಕಾಶಗಳು ಎದುರಾಗುವವು. ಹೋಟೆಲ್ ಉದ್ಯಮದಲ್ಲಿ ಲಾಭ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಆಸಕ್ತಿ ವೃದ್ಧಿ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net