ನಿತ್ಯ ಭವಿಷ್ಯ: ಈ ರಾಶಿಯವರಿಂದು ನಾನಾ ಮೂಲಗಳಿಂದ ಧನಲಾಭ

Daily Astrology
Daily Astrology
Published on
ಮೇಷ: ಸಹೋದರರಿಂದ ಸಹಾಯ. ಏಕಾದಶದ ರಾಹುಗಳಿಂದ ಭೂ ಲಾಭವಾಗಲಿದೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 9
ವೃಷಭ: ನಾನಾ ಮೂಲಗಳಿಂದ ಧನಲಾಭ. ಬಹು ವರ್ಷಗಳ ನಂತರ ಅವಿವಾಹಿತರಿಗೆ ಶುಭಕರ ಸಮಯ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 3
ಮಿಥುನ: ನವವಿವಾಹಿತರಿಗೆ ಶುಭ ಸುದ್ದಿ. ಶ್ರಮದಿಂದ ಉದ್ಯೋಗದ ಸ್ಥಿರತೆ ಕಾಯ್ದುಕೊಳ್ಳಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಹನೆಯಿಂದಿರಿ. ಶುಭಸಂಖ್ಯೆ:6
ಕಟಕ: ಭಾಗ್ಯದ ಶನಿಯಿಂದಾಗಿ ಕಲಾವಿದರಿಗೆ ಅಧಿಕ ಒತ್ತಡ. ನಿವೇಶನ ಖರೀದಿಯಲ್ಲಿ ವಿಳಂಬ. ಸ್ವಯಂ ಉದ್ಯೋಗದವರಿಗೆ ಸುದಿನ. ಶುಭಸಂಖ್ಯೆ:2
ಸಿಂಹ: ನೂತನ ಗೃಹ ಆರಂಭಕ್ಕೆ ಚಾಲನೆ. ಶುಭ ಕಾರ್ಯ ಸಂಯೋಜಕರಿಗೆ ಅಧಿಕ ಲಾಭಗಳಿಕೆ. ನ್ಯಾಯಾಲ ಯದ ತೀರ್ಪು ನಿಮ್ಮ ಪರ. ಶುಭಸಂಖ್ಯೆ:6
ಕನ್ಯಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಕುಟುಂಬ ಸದಸ್ಯರ ಮಾರ್ಗದರ್ಶನ ಅಗತ್ಯ. ವಿಚ್ಛೇದಿತರಿಗೆ ದ್ವಿತೀಯವಿವಾಹ ಯೋಗ. ಶುಭಸಂಖ್ಯೆ:3
ತುಲಾ: ಬ್ಯಾಂಕ್ ಉದ್ಯೋಗಿಗಳಿಗೆ ಶುಭದಿನ. ಉನ್ನತ ಪರೀಕ್ಷೆಯಲ್ಲಿ ತೇರ್ಗಡೆ. ವಿದೇಶದಲ್ಲಿರುವ ಮಕ್ಕಳಿಂದ ಆರ್ಥಿಕ ಸಹಾಯ. ಶುಭಸಂಖ್ಯೆ:2
ವೃಶ್ಚಿಕ: ಪೂರ್ವಿಕರ ಆಸ್ತಿ ಪ್ರಾಪ್ತಿ. ಬಂಡವಾಳ ಹೂಡಿಕೆಗೆ ಸೂಕ್ತ ಸಮಯ. ಸ್ವಯಂ ಉದ್ಯೋಗದಲ್ಲಿ ತೊಡಗಿದ ಮಹಿಳೆಯರಿಗೆ ಪ್ರಗತಿ. ಶುಭಸಂಖ್ಯೆ:6
ಧನುಸ್ಸು: ಹೊಸ ಪಾಲುದಾರರಿಂದ ವ್ಯಾಪಾರ ಅಭಿವೃದ್ಧಿ. ರೇಷ್ಮೆ ಸೀರೆ ಮಾರಾಟದಲ್ಲಿ ಲಾಭ. ಅಪರಿಚಿತರ ಜತೆ ವ್ಯವಹರಿಸುವಾಗ ಎಚ್ಚರ. ಶುಭಸಂಖ್ಯೆ:3
ಮಕರ: ಖರೀದಿಯಲ್ಲಿ ನಿಯಂತ್ರಣವಿರಲಿ. ಕಾನೂನು ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ದೈಹಿಕ ಕಸರತ್ತಿನ ತರಬೇತಿಯಲ್ಲಿ ಲಾಭ. ಶುಭಸಂಖ್ಯೆ:1
ಕುಂಭ: ದ್ವಿತೀಯದ ಶನಿಯಿಂದ ಆರ್ಥಿಕ ಲಾಭ. ಮಹಿಳಾ ಉದ್ಯೋಗಿಗಳ ಸಾಧನೆಗೆ ಪ್ರಶಂಸೆ. ನಾಟ್ಯ ಶಿಕ್ಷಕರಿಗೆ ಉತ್ತಮ ವೇದಿಕೆ ಲಭ್ಯ. ಶುಭಸಂಖ್ಯೆ:4
ಮೀನ: ಉನ್ನತ ವಿದ್ಯಾಭ್ಯಾಸದ ಕನಸಿನ ಸಹಕಾರ. ಚತುರ್ಥದ ಗುರುವಿನಿಂದ ದಾಂಪತ್ಯ ಸುಖ. ಸಿನಿಮಾ ನಿರ್ವಪಕರಿಗೆ ಧನ ಲಾಭ. ಶುಭಸಂಖ್ಯೆ: 9
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net