ಮೇಷ: ತಾಂತ್ರಿಕ ಕ್ಷೇತ್ರದಲ್ಲಿ ಗಣನೀಯ ಪ್ರಗತಿ. ಕೇಂದ್ರ ಸರ್ಕಾರಿ ನೌಕರಿ ದೊರೆಯುವ ಸಾಧ್ಯತೆ. ಹೂಡಿಕೆಗೆ ಇದು ಸೂಕ್ತ ಸಮಯ. ಶುಭಸಂಖ್ಯೆ: 9.ವೃಷಭ: ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಮನೆ ಕೊಂಡುಕೊಳ್ಳುವ ಕನಸು ನನಸಾಗಲಿದೆ. ವೈವಾಹಿಕ ಸಮಸ್ಯೆ ಬಗೆಹರಿಯಲಿದೆ. ಶುಭಸಂಖ್ಯೆ: 1.ಮಿಥುನ: ಧಾರ್ವಿುಕ ಮುಖಂಡರಿಗೆ ಒತ್ತಡ ಹೆಚ್ಚಲಿದೆ. ಒಳಾಂಗಣ ವಿನ್ಯಾಸಗಾರರಿಗೆ ಬೇಡಿಕೆ. ಅಲಂಕಾರಿಕ ವಸ್ತು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6.ಕಟಕ: ಸಾರ್ವಜನಿಕ ಮಾಧ್ಯಮಗಳ ಮೂಲಕ ಹಣಗಳಿಸುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯ. ಷೇರು ವ್ಯಾಪಾರದಲ್ಲಿ ಅಲ್ಪ ಲಾಭ. ಶುಭಸಂಖ್ಯೆ: 3.ಸಿಂಹ: ಕಚೇರಿಯ ಬದಲಾವಣೆಗೆ ನಿರ್ಧಾರ ಮಾಡುವಿರಿ. ಕಾನೂನು ಸಲಹೆಗಾರರಿಗೆ ಅನಿರೀಕ್ಷಿತ ಧನ ಲಾಭ. ಆಸ್ತಿ ನೊಂದಣಿ ವಿಳಂಬ. ಶುಭಸಂಖ್ಯೆ: 9.ಕನ್ಯಾ: ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಕರಿಗೆ ಬೇಡಿಕೆ. ರಿಯಲ್ ಎಸ್ಟೇಟ್ನಲ್ಲಿ ಲಾಭ. ಹೋಟೆಲ್ ವ್ಯಾಪಾರದಲ್ಲಿ ಬದಲಾವಣೆ. ಶುಭಸಂಖ್ಯೆ: 7.ತುಲಾ: ಉದ್ಯೋಗದ ಕನಸು ನನಸು. ಸ್ತ್ರೀಯರು ನಡೆಸುವ ಕರಕುಶಲ ವಸ್ತುಮಾರಾಟ ಹೆಚ್ಚಲಿದೆ. ಅಡಿಕೆ, ಭತ್ತ ಬೆಳೆಗಾರರಿಗೆ ಸುದಿನ. ಶುಭಸಂಖ್ಯೆ: 8.ವೃಶ್ಚಿಕ: ಸ್ವಉದ್ಯೋಗ ಪ್ರಾರಂಭಿಸಲು ಸಹಾಯ ಸಿಗಲಿದೆ. ಸಿನಿಮಾ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಶಿಕ್ಷಣ ಇಲಾಖೆ ನೌಕರರಿಗೆ ವರ್ಗ. ಶುಭಸಂಖ್ಯೆ: 4.ಧನುಸ್ಸು: ಅಷ್ಟಮದ ಗುರುವಿನಿಂದ ಕೆಲಸದ ಹೊರೆ ಜಾಸ್ತಿ ಯಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ತಾಂತ್ರಿಕ ಶಿಕ್ಷಣದಲ್ಲಿ ಪ್ರವೇಶ. ಶುಭಸಂಖ್ಯೆ: 5.ಮಕರ: ಕುಟುಂಬದಲ್ಲಿ ಸಂಭ್ರಮದ ಕ್ಷಣಗಳು. ನ್ಯಾಯಾಲ ಯದ ಉದ್ಯೋಗಿಗಳಿಗೆ ಧನಲಾಭ. ಕನಸಿನ ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ:7.ಕುಂಭ: ದೈಹಿಕ ಕಸರತ್ತಿನ ತರಬೇತುದಾರರಿಗೆ ಬೇಡಿಕೆ. ಹೊಸ ಉದ್ಯಮ ಸ್ಥಾಪನೆಗೆ ಇದು ಸೂಕ್ತ ಕಾಲ. ಅನಿರೀಕ್ಷಿತವಾಗಿ ಪದವಿ ಪ್ರಾಪ್ತಿ. ಶುಭಸಂಖ್ಯೆ: 3.ಮೀನ; ಪ್ರಯತ್ನಕ್ಕೂ ಮೀರಿದ ಫಲ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ವಿದೇಶದಿಂದ ಆರ್ಥಿಕ ಸಹಾಯ. ಹಳೇ ಸ್ನೇಹಿತನ ಆಗಮನ. ಶುಭಸಂಖ್ಯೆ: 6