ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಾಹದ ಪ್ರಯತ್ನ ಚುರುಕು

astrology
astrology
Published on
ಮೇಷ: ಹಣಕಾಸಿನ ಸಮಸ್ಯೆಗಳಿಂದ ಹೊರಬರುತ್ತೀರಿ. ಕೈಗೆತ್ತಿಕೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿಗೌರವ ಹೆಚ್ಚಾಗುತ್ತದೆ. ಶುಭಸಂಖ್ಯೆ 9
ವೃಷಭ: ಮನಸ್ಸಿಗೆ ನೆಮ್ಮದಿ. ವಿದೇಶ ಪ್ರಯಾಣ ಮುಂದೂಡುವುದು ಒಳ್ಳೆಯದು. ಹೊಸ ಸಾಲದ ಪ್ರಯತ್ನ ಬಲದಾಯಕವಾಗಲಿದೆ. ಶುಭಸಂಖ್ಯೆ 8
ಮಿಥುನ: ಸಹೋದರರೊಂದಿಗೆ ಆಸ್ತಿ ವಿವಾದ ಬಗೆಹರಿಯಲಿದೆ. ಮನೆಯ ಹೊರಗೆ ಸಾಲದ ಹೊರೆ ಹೆಚ್ಚಾಗುತ್ತದೆ. ಶುಭಸಂಖ್ಯೆ 6
ಕಟಕ: ಹೊಸ ವಾಹನ ಖರೀದಿ. ದೂರ ಪ್ರಯಾಣ ಮುಂದೆ ಹಾಕುವುದು ಒಳ್ಳೆಯದು.ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ. ಶುಭಸಂಖ್ಯೆ.1
ಸಿಂಹ:ಸಮಾಜದ ಪ್ರಮುಖ ವ್ಯಕ್ತಿಗಳಿಂದ ಭೇಟಿ. ಆರ್ಥಿಕ ವಾತಾವರಣ ಉತ್ತಮ. ಅಧಿಕಾರಿಗಳ ಪ್ರಶಂಸೆ. ರೇಷ್ಮೆ ವಸ್ತ್ರ ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ 5
ಕನ್ಯಾ: ವ್ಯವಹಾರಗಳಲ್ಲಿ ಹೊಸ ಜವಾಬ್ದಾರಿ. ಕುಟುಂಬ ಸದಸ್ಯರೊಂದಿಗ ಪ್ರವಾಸ, ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗಲಿದೆ. ಶುಭಸಂಖ್ಯೆ 2.
ತುಲಾ: ಗೃಹ ನಿರ್ವಣದ ಕೆಲಸಗಳು ಬೇಗ ಮುಗಿಯಲಿದೆ. ಬಂಧುಗಳಿಂದ ಆರ್ಥಿಕ ಸಹಾಯ. ರಿಯಲ್ ಎಸ್ಟೇಟ್ ವ್ಯವಹಾರ ನಿಧಾನ. ಶುಭಸಂಖ್ಯೆ 6
ವೃಶ್ಚಿಕ: ಉದ್ಯೋಗ ಬದಲಾವಣೆ ಪ್ರಯತ್ನ ಲಾಭದಾಯಕ. ಮನೆ ನಿರ್ವಣದ ನಿರಾಯಾಸವಾಗಿ ಪೂರ್ಣ. ವಿವಾಹದ ಪ್ರಯತ್ನ ಚುರುಕು. ಶುಭಸಂಖ್ಯೆ 1
ಧನುಸ್ಸು: ಕುಟುಂಬ ವಿವಾದ ಬಗೆಹರಿಯಲಿದೆ. ಉದ್ಯೋಗದ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಧಾರ್ವಿುಕ ಸಂಘದ ಪದವಿ ಪ್ರಾಪ್ತಿ. ಶುಭಸಂಖ್ಯೆ 7
ಮಕರ: ಹೊಸ ವಾಹನ ಖರೀದಿ. ಹಳೆಯ ಸ್ನೇಹಿತರ ಭೇಟಿ. ಉದ್ಯೋಗಸ್ಥ ಮಹಿಳೆಯರ ಯಶಸ್ಸು. ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಶುಭಸಂಖ್ಯೆ 6
ಕುಂಭ: ಆಧ್ಯಾತ್ಮಿಕ ಚಿಂತನೆ ಯತ್ತ ಮನಸ್ಸು. ಉದ್ಯೋಗ ಶ್ರಮ ಹೆಚ್ಚಾಗುತ್ತದೆ. ಆಸ್ತಿ ವಿಚಾರದ ಚರ್ಚೆ ಫಲಕಾರಿ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಶುಭಸಂಖ್ಯೆ 7
ಮೀನ: ಕೌಟುಂಬಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ದೂರ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ಜೇನು ಕೃಷಿಯಲ್ಲಿ ಲಾಭ ಗಳಿಸುವಿರಿ. ಶುಭಸಂಖ್ಯೆ 7
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net